ಆಕಾಶ್ ಬಾಲಕ ನಾಪತ್ತೆ
ಬಳ್ಳಾರಿ.13: ಬೆಳಗಲ್ ರಸ್ತೆಯ ಜಿ.ಚೆಂಗಾರೆಡ್ಡಿ ಸ್ಮಾರಕ ಮಾನಸಿಕ ವಿಕಲಚೇತನ ಮಕ್ಕಳ ವಸತಿ ಶಾಲೆಯಲ್ಲಿ ವಾಸವಿದ್ದ (15) ಆಕಾಶ್ ಎನ್ನುವ ಬಾಲಕ ಜು.04 ರಂದು ಕಾಣೆಯಾಗಿದ್ದು, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಬಾಲಕನ ಚಹರೆ:
ಎತ್ತರ 4 ಅಡಿ, ದುಂಡು ಮುಖ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕಪ್ಪು ಕೂದಲು , ಬಲಕಿವಿಯಲ್ಲಿ ಕಿವಿಯೋಲೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಬ್ರೌನ್ ಮತ್ತು ಗ್ರೇ ಕಲರಿನ ಕೆಂಪು ಹೂವು ಡಿಸೈನ್‌ವುಳ್ಳ ತುಂಬು ತೋಳಿನ ಅಂಗಿ, ಗ್ರೀನ್ ಕಲರಿನ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ಚಹರೆ ಬಾಲಕನ ಬಗ್ಗೆ ಸುಳಿವು ಸಿಕ್ಕಲ್ಲಿ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ:08392-276461, ಮೊ:9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.