ಬಳ್ಳಾರಿ

ನಬಾರ್ಡ್‌ ಸಂಸ್ಥೆ ವತಿಯಿಂದ ಅಜಾದಿ ಕಾ ಅಮೃತಾ ಮಹೋತ್ಸವ ಆಚರಣೆ

ನಬಾರ್ಡ್‌ ಸಂಸ್ಥೆ ವತಿಯಿಂದ ಅಜಾದಿ ಕಾ ಅಮೃತಾ ಮಹೋತ್ಸವ ಆಚರಣೆ

ಬಳ್ಳಾರಿ 04: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್(ನಬಾರ್ಡ್‌) ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ 75ನೇ ಅಜಾದಿ ಕಾ ಅಮೃತ ಮಹೋತ್ಸವವನ್ನು ಸೋಮವಾರದಂದು ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮವನ್ನು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಆರ್‌.ಎಸ್‌.ಯುವರಾಜಕುಮಾರ್ ಅವರು ಉದ್ಘಾಟಿಸಿ ಮಾತನಾಡಿದ ಅವರು ಈ ಸಂಸ್ಥೆಯು ಕೃಷಿ ಮತ್ತು ಇತರೆ ಚಟುವಟಿಕೆಗಳಲ್ಲಿ ಆರ್ಥಿಕವಾಗಿ ಮುನ್ನಡೆಯಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ತನ್ನದೇ ಆದ ಛಾಪುವನ್ನು ಮೂಡಿಸಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಡಿಸಿಸಿಬಿ ಹರೀಶ್, ರಮಾಕಾಂತ್ ಸೇರಿದಂತೆ ನಬಾರ್ಡ್‌ನ ಏಜೆನ್ಸಿಗಳು, ಎನ್‌ಜಿಒಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. 


ಸುದ್ದಿ ಓದಿ