ಮಹಲಿಂಗಪುರ

ಗ್ರಾಮಗಳ ಅಭಿವೃದ್ಧಿ ಮಾಡುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮುಖ್ಯ ಉದ್ದೇಶ

ಗ್ರಾಮಗಳ ಅಭಿವೃದ್ಧಿ ಮಾಡುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮುಖ್ಯ ಉದ್ದೇಶ

ಮಹಾಲಿಂಗಪುರ 15: ಜನರ ಮಾನಸಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಅಲ್ಲದೇ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ತಂದು, ಗ್ರಾಮಗಳ ಅಭಿವೃದ್ಧಿ ಮಾಡುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಯೋಜನಾಧಿಕಾರಿ ಧನಂಜಯಕುಮಾರ ಹೇಳಿದರು. 

ಕೆಂಗೇರಿಮಡ್ಡಿ ಬಡಾವಣೆಯಲ್ಲಿರುವ ಪಾಂಡುರಂಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ, ಧರ್ಮಸ್ಥಳ ಸಂಸ್ಥೆಯ 3ಲಕ್ಷ ರೂಗಳ ಅನುದಾನದ ಚೆಕ್ ವಿತರಿಸಿ ಹಾಗೂ ಟ್ರಸ್ಟ್‌ ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಾಲಿಂಗಪುರ ಸುತ್ತಮುತ್ತ 960 ಸಂಘಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 2900ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸಿ, 23,650 ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.  

ಈ ಸಂಘದಿಂದ ಮುಧೋಳ ತಾಲೂಕಿನಲ್ಲಿರುವ 35ದೇವಸ್ಥಾನಗಳಿಗೆ 52ಲಕ್ಷ, 12ಸ್ಮಶಾನಗಳಿಗೆ 24ಲಕ್ಷ, ತಾಲೂಕಿನ 11ಸ್ಮಾರ್ಟ್‌ ಕ್ಲಾಸ್ ಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ತಲಾ 1ಲಕ್ಷ, ಸಾರ್ವಜನಿಕ ಶೌಚಾಲಯಗಳು, ಶಾಲೆಗಳಿಗೆ ಕಾಂಪೌಂಡ್, ಶಿಕ್ಷಕರನ್ನು ಒದಗಿಸುವುದು, ಪೀಠೋಪಕರಣ ಅಲ್ಲದೆ ವ್ಯಸನಮುಕ್ತ ಶಿಬಿರಗಳನ್ನು ನಡೆಸಿ, ಚಿಕ್ಕ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ತರಬೇತಿ ಹೀಗೆ ಒಟ್ಟು 45ಕ್ಕಿಂತಲೂ ಹೆಚ್ಚಿನ ಕಾರ್ಯಕ್ರಮಗಳು ಧರ್ಮಸ್ಥಳ ಸಂಸ್ಥೆಯಿಂದ ಜರೂಗಿ, ಒಟ್ಟಾರೆಯಾಗಿ ಈ ಸಂಘದಿಂದ ಸರ್ವಜನರ ಏಳಿಗೆ ಮತ್ತು ನೆಮ್ಮದಿಯ ಜೀವನ ನಡೆಸುವುದೇ ಆಗಿದೆ ಎಂದರು. 

ಪುರಸಭೆ ಸದಸ್ಯ ಶೇಖರ್ ಅಂಗಡಿ ಮಾತನಾಡಿ, ಪಾಂಡುರಂಗ ದೇವಸ್ಥಾನ ನನ್ನ ಚುನಾಯಿತ ವಾರ್ಡಿನಲ್ಲಿರುವುದರಿಂದ, ಪುರಸಭೆಯಿಂದ ಏನೇನು ಸವಲತ್ತುಗಳು ಬೇಕೋ ಅವುಗಳನ್ನೆಲ್ಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರೇ, ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಠಾಣಾಧಿಕಾರಿ ಜಿ.ಎಸ್ ಉಪ್ಪಾರ್ ಹಾಗೂ ಶ್ರೀಶೈಲಗೌಡ ಪಾಟೀಲ್ ಮಾತನಾಡಿ, ಜೀವನದ ಜಂಜಡಗಳಲ್ಲಿದ್ದು ಶಾಂತಿ, ನೆಮ್ಮದಿ ಪಡೆಯಲೋಸುಗದ ಉದ್ದೇಶದೊಂದಿಗೆ ನಮ್ಮ ಹಿಂದಿನ ಮಹಾತ್ಮರು ಹಾಗೂ ಹಿರಿಯರು ದೇವಸ್ಥಾನಗಳನ್ನು ಕಟ್ಟುತ್ತಿದ್ದರು.ಇಂತಹ ಮತ್ತು ಇನ್ನೂ ಹತ್ತು ಹಲವಾರು ಕಾರ್ಯಗಳಿಗೆ ಆರ್ಥಿಕ ಸಹಾಯ ನೀಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕಾರ್ಯ ಶ್ಲಾಘನೀಯವೆಂದರು.  

ಅಧ್ಯಕ್ಷತೆ ಅಜಿತ್ ಮಹಿಷವಾಡಗಿ ವಹಿಸಿ ಅರ್ಜುನ್ ದೊಡಮನಿ, ಲಕ್ಷ್ಮಣ ಮಾಂಗ, ಪರಶುರಾಮ್ ಮೇತ್ರಿ ಭೀಮಶಿ ಗೌಂಡಿ, ನೀಲಕಂಠ ಬುದ್ನಿ, ರಂಗನಾಥ್ ಡಿ.ಕೆ, ಭೀಮಶಿ ಮಾವಿನಹಿಂಡಿ, ಜಗದೀಶ್ ಮಾವಿನಹಿಂಡಿ, ಬಸು ಮಾವಿನಹಿಂಡಿ, ರಮೇಶ್ ಮಾಂಗ, ರಂಗ ಕಿರಿಕಿರಿ, ಲಕ್ಷ್ಮಣ್ ಮನ್ನಾಪ್ಪ ಗೋಳ, ದಾನೇಶ್ ದೊಡಮನಿ, ಚೆನ್ನಪ್ಪ ಮೇತ್ರಿ, ಎಂ ದೊಡಮನಿ ಮೇಲ್ವಿಚಾರಕ ಲೋಕೇಶ್, ಸೋಮಲಿಂಗ ಗರಗ, ಸೇವಾ ಪ್ರತಿನಿಧಿ ಅನ್ನಪೂರ್ಣ ಧಡೂತಿ, ಆಯಿಶಾ ಪೆಂಡಾರಿ, ರವಿ ಹಲಸಪ್ಪಗೋಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ