ಬಳ್ಳಾರಿ

ಕಲಾವಿದನಿಗೆ ಸೌಂದರ್ಯ ಪ್ರಜ್ಞೆ ಮುಖ್ಯ: ಡಾ.ಕೆ.ರವೀಂದ್ರನಾಥ

ಕಲಾವಿದನಿಗೆ ಸೌಂದರ್ಯ ಪ್ರಜ್ಞೆ ಮುಖ್ಯ: ಡಾ.ಕೆ.ರವೀಂದ್ರನಾಥ

ಬಳ್ಳಾರಿ 06: ಇಂದಿನ ದಿನಮಾನಗಳಲ್ಲಿ ಚಿತ್ರಕಲೆಯು ಚಿತ್ರ ಕಲಾವಿದನ ಬದುಕನ್ನು ಕಟ್ಟಿಕೊಡುತ್ತದೆ. ಸಾಹಿತ್ಯ ಅಧ್ಯಯನ ಹಾಗೂ ಚಿತ್ರಕಲೆ ಅಧ್ಯಯನವು ತುಂಬಾ ಭಿನ್ನವಾಗಿದೆ. ಚಿತ್ರಕಲೆಯು ಸೌಂದರ್ಯ ಮೀಮಾಂಸೆಯನ್ನು ಒಳಗೊಂಡಿದ್ದು, ಮುಖ್ಯವಾಗಿ ಕವಿ ಜಗತ್ತಿನಲ್ಲಿ ನಡೆಯದೆ ಇರುವ ಅನೇಕ ಘಟನೆಗಳನ್ನು ತನ್ನ ಸಾಹಿತ್ಯ ಹಾಗೂ ಕಾವ್ಯದ ಮೂಲಕ ತಿಳಿಸಿದ್ದಾರೆ. ಕಲೆಗಾರ ತನ್ನ ಅನುಭವದ ಮೂಲಕ ಅನೇಕ ಘಟಕಗಳನ್ನು ಚಿತ್ರಕಲೆಯ ಮೂಲಕ ತಿಳಿಸಿ ಅನಕ್ಷರಸ್ಥರಿಗೂ ಹತ್ತಿರವಾಗಿದ್ದಾನೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮನಾಗಿರುತ್ತದೆ, ಹಾಗೂ ಕಲಾವಿದನಿ ಕಲೆಯೇ ಜೀವಾಳವಾಗಿರುತ್ತದೆ ಡಾ.ಕೆ.ರವೀಂದ್ರನಾಥ ಅವರು ಎಂದು ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ  ದೃಶ್ಯಕಲಾ ವಿಭಾಗದಲ್ಲಿ ತಿಂಗಳ ಚಿತ್ರಕಲಾ ಪ್ರದರ್ಶನ-26 ಹಾಗೂ  ಎಂ.ವಿ.ಎ  ಪ್ರಥಮ ವರ್ಷದ ವಿದ್ಯಾರ್ಥಿಗಳು ಸ್ವಾಗತ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮವನ್ನು ರೇಖಾಚಿತ್ರ ಬಿಡಿಸುವ ಮೂಲಕ  ಉದ್ಘಾಟಿಸಿ ಮಾತನಾಡಿದರು. 

ವಾಸ್ತವ ಜಗತ್ತಿನಲ್ಲಿ ನಡೆದ ಘಟನೆಗಳನ್ನು  ಕಲಾವಿದನು ಚಿತ್ರಕಲೆಯ ಮೂಲಕ ಜೀವ ತುಂಬುವ ಕಾರ್ಯಪ್ರವೃತ್ತಿಯನ್ನು ಮಾಡುತ್ತಾ ಬಂದಿದ್ದಾನೆ. ಚಿತ್ರಕಲೆಯಿಂದ ಕಲಾವಿದನ ಮನಸ್ಸನ್ನು ನಾವು ತಿಳಿಯಬಹುದು ಹಾಗೂ ಅನಕ್ಷರಸ್ಥರು ಕೂಡ ಚಿತ್ರಕಲೆಯನ್ನು ನೋಡಿ ಅರಿಯಬಹುದು ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾದ  ಜಾನಪದ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಟಿ ಗುರುಪ್ರಸಾದ್  ಮಾತನಾಡಿ ಚಿತ್ರಕಲೆಯು ಅನುಭವಗಳ ಮೂಲಕ ಹೊಸ ಹೊಸ ರೂಪವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಇದು ಪ್ರಾಚೀನ ಕಾಲದಿಂದಲೂ ಚಿತ್ರಕಲೆ ಬೆಳೆದು ಬಂದಿದ್ದು, ಇಂದಿನ ದಿನಮಾನಗಳಲ್ಲಿ ವಿವಿಧ ರೂಪವನ್ನು ಪಡೆದಿದೆ.  ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಿವಿಧ  ಕೌಶಲ್ಯಗಳನ್ನು ರೂಢಿ ಮಾಡಿಕೊಳ್ಳಬೇಕು, ಪ್ರಮುಖವಾಗಿ ಕಲಾವಿದರಿಗೆ ತಾಳ್ಮೆ, ಸಮಯ ಪ್ರಜ್ಞೆ, ವಸ್ತುನಿಷ್ಠ ಗುಣಮಟ್ಟ, ಆಸಕ್ತಿ, ಅಭಿರುಚಿ, ಮನರಂಜನೆ ಹಾಗೂ ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕಲಾ ಜಗತ್ತಿನಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.

ಅತಿಥಿಗಳಾಗಿ ಭಾಗವಹಿಸಿದ ದರೋಜಿ ಕರಡಿಧಾಮ ವಲಯ ಅರಣ್ಯಾಧಿಕಾರಿ ಉಷಾ ಎಂ ಮಾತನಾಡಿ ಕಲಾವಿದನನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಧರ್ಮವಾಗಿರಬೇಕು, ಚಿತ್ರಕಲೆಯಿಂದ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ. ಚಿತ್ರಕಲೆಯಲ್ಲಿ  ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ.ಮೋಹನರಾವ ಬಿ. ಪಂಚಾಳ ಅಧ್ಯಕ್ಷತೆ ವಹಿಸಿಕೊಂಡಿದ್ದರು, ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಎ.ವೆಂಕಟೇಶ್, ವಿವಿಧ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಓದಿ