ಮಧ್ಯಪ್ರದೇಶದಲ್ಲಿ ಅಭ್ಯಾಸ ವೇಳೆ ಎರಡು ಸೇನಾ ಯುದ್ಧ ವಿಮಾನ ಪತನ : ಬೆಳಗಾವಿಯ ಯೋಧ ಹುತಾತ್ಮ
ಬೆಳಗಾವಿ, ಜ, 28 : ಎರಡು ಜೆಟ್ ವಿಮಾನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಯೋಧರೊಬ್ಬರು ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ.
ಮಧ್ಯಪ್ರದೇಶದ ಮೊರೆನಾದಲ್ಲಿ ಶನಿವಾರ ಸಂಭವಿಸಿದ ವಿಮಾನಗಳ ಅಪಘಾತದಲ್ಲಿ ಬೆಳಗಾವಿಯ ಗಣೇಶಪುರದ ನಿವಾಸಿ ವಿಂಗ್ ಕಮಾಂಡರ್ ಹನುಮಂತರಾವ್ ಆರ್. ಸಾರಥಿ ಎಂಬುವರು ಹುತಾತ್ಮರಾಗಿರುವ ಬಗ್ಗೆ ಸೇನಾ ಅಧಿಕಾರಿಗಳು ಅವರ ಕುಟುಂಭಕ್ಕೆ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಯೋಧನ ಕುಟುಂಬಸ್ಥರಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ. ಅಭ್ಯಾಸ ನಡೆಸುತ್ತಿದ್ದ ವೇಳೆ ಸುಖೋಯ್ 30 ಹಾಗೂ ಮಿರಾಜ್ 200 ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಮೊರೆನಾ ಪ್ರದೇಶದಲ್ಲಿ ಪತನಗೊಂಡು ಇಬ್ಬರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.