ಚಿಕ್ಕೋಡಿ

ಕೀಟ ನಿರ್ವಹಣಾ ಕ್ರಮ ವಹಿಸಲು ಸಲಹೆ: ಜನಮಟ್ಟಿ

ಕೀಟ ನಿರ್ವಹಣಾ ಕ್ರಮ ವಹಿಸಲು ಸಲಹೆ: ಜನಮಟ್ಟಿ

ಚಿಕ್ಕೋಡಿ, ಆಗಸ್ಟ್ 1: ಕೊರೊನಾ ಭೀತಿಯ ನಡುವೆಯು ರೈತರು ನಾಟಿ ಮಾಡಿದ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳ(ಲದ್ದಿ ಹುಳ)ವಿನ ಬಾಧೆಗೆ ಕಂಡು ಬಂದಿದೆ. ಇದರಿಂದ ಬಿತ್ತನೆ ಮಾಡಿದ ಬೆಳೆ ಕೈಗೆಟಕುತ್ತವೆ ಇಲ್ಲವೆ ಎಂಬುದು ರೈತ ಕಂಗಾಲಾಗಿದ್ದಾನೆ.

ಹೌದು..ಪ್ರಸಕ್ತ ವರ್ಷದಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದು, ಇದರಿಂದ ರೈತರು ಉತ್ಸಾಹದಿಂದ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಮೆಕ್ಕೆಜೋಳ ಬಿತ್ತನೆ ಮಾಡಿದ ರೈತರು ಮಾತ್ರ ಗೋಳಾಡುವಂತಾಗಿದೆ. ಕೊರೊನಾ ಭೀತಿಯ ನಡುವೆಯು ಜಮೀನು ಹದಗೊಳಿಸಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಮೆಕ್ಕೆಜೋಳ ಈಗ ಎತ್ತರವಾಗಿ ಬೆಳೆದು ನಿಂತಿದೆ.

ಆದರೆ ಅತೀಯಾದ ಮಳೆಯಿಂದ ಮೆಕ್ಕೆಜೋಳದ ಎಲೆ ಮೇಲೆ ಸೈನಿಕ ಹುಳ(ಲದ್ದಿ ಹುಳ)ವಿನ ಬಾಧೆ ಕಂಡು ಬಂದಿರುವ ಪರಿಣಾಮ ಮೆಕ್ಕೆಜೋಳದ ಬೆಳೆ ನಾಶವಾಗಿ ಹೋಗುತ್ತಿದೆ. ಹೀಗಾಗಿ ಕೃಷಿ ಇಲಾಖೆ ರೈತರ ಬೆಳೆ ಉಳಿಸಿಕೊಡಲು ಪ್ರಯತ್ನ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ರೈತರು ಕೀಟ ನಿರ್ವಹಣಾ ಕ್ರಮ ವಹಿಸಲು ಸಲಹೆ: 

ಕಳೆದೊಂದು ವಾರದಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಚಿಕ್ಕೋಡಿ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆಗೆ ಅಲ್ಲಲ್ಲಿ ಸೈನಿಕ ಹುಳು(ಲದ್ದಿ ಹುಳು)ವಿನ ಬಾಧೆ ಕಂಡು ಬಂದಿದ್ದು, ರೈತರು ಕೆಲವೊಂದು ಕೀಟ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೊಲದ ಸುತ್ತಮುತ್ತಲಿನ ಕಳೆಯ ಸಸ್ಯಗಳನ್ನು ನಾಶಪಡಿಸುವುದು.ಎಕರೆಗೆ 5 ರಂತೆ ಮೋಹಕ ಬಲೆಗಳನ್ನು ಅಳವಡಿಸುವುದು. ಹೊಲದ ಸುತ್ತ ಕಂದಕ ಮಾಡಿ ಅದರಲ್ಲಿ ಶೇ5ರಷ್ಟ್ರು ಮೇಲಾಥಿಯಾಣ ಪುಡಿ ಹಾಕಿ ಕೀಟವು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹೋಗದಂತೆ ತಡೆಯಬೇಕು. ಬೆಳೆಯ ಎತ್ತರ ಕಡಿಮೆ ಇದ್ದು ಕೀಟನಾಶಕ ಸಿಂಪಡಿಸಬಹುದಾದಲ್ಲಿ ಒಂದು ಮತ್ತು ಎರಡನೇ ಹಂತದಲ್ಲಿದ್ದರೆ ಥಯೋಡಿಕಾರ್ಬ75 ಡಬ್ಲು ಪಿ@1ಗ್ರಾಂ ಅಥವಾ ಕ್ಲೋರೋಪೈರಿಫಾಸ 20 ಇಸಿ@2 ಮೀ.ಲಿ.ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮರಿಗಳು ದೊಡ್ಡ ಹಂತದಲ್ಲಿದ್ದರೆ ಲ್ಯಾಮ್ಡಾಸೈಹ್ಯಾಲೊಥ್ರಿನ 5 ಇಸಿ @ 1 ಮೀ.ಲಿ ಅಥವಾ ಇಮಾಮೆಕ್ಟಿನ ಬೆಂಜೋಯೆಟ 5 ಜಿ @0.5 ಗ್ರಾಂ.ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದರಿಂದ ಕೀಟಗಳು ಸಮರ್ಪಕವಾಗಿ ಹತೋಟಿಗೆ ಬರುತ್ತದೆ ಎಂದು ಚಿಕ್ಕೋಡಿ ಕೃಷಿ ಸಹಾಯಕ ನಿದರ್ೇಶಕ ಮಂಜುನಾಥ ಜನಮಟ್ಟಿ ತಿಳಿಸಿದ್ದಾರೆ.

ಸುದ್ದಿ ಓದಿ