ಜೀವನದಲ್ಲಿ ಹಿರಿಯರ ಸಿದ್ದಾಂತ ಅಳವಡಿಸಿಕೊಳ್ಳಿ :ಚೌದರಿ
ಮಹಾಲಿಂಗಪುರ :ಮಹಾಲಿಂಗಪುರ ಸಮೀಪದ ಕೆಸರಗೊಪ್ಪದ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿ ವಿ ಚೌಧರಿ ಯವರು ಮಾತನಾಡಿ ನಾವು ಸ್ವಾತಂತ್ರ್ಯ ಪಡೆದುಕೊಂಡು 76 ವರ್ಷ ಪೂರೈಸಿದೆ ಈ ಅವಧಿಯಲ್ಲಿ ನಾವು ಮತ್ತು ನಮ್ಮ ದೇಶ ಮಾಡಿದ ಸಾಧನೆ ಅಪಾರವಾಗಿದೆ ನಾವು ಸ್ವತಂತ್ರೋತ್ಸವದ ಆಚರಣೆ ಮಾಡುವುದರ ಜೊತೆಗೆ ನಮ್ಮ ಜೀವನದಲ್ಲಿ ಹಿರಿಯರ ತತ್ವ ಸಿದ್ಧಾಂತ ಅಳವಡಿಸಿಕೊಂಡರೆ ಅವರಿಗೆ ಗೌರವ ಕೊಟ್ಟಂತಾಗುತ್ತದೆ. ದೇಶಪ್ರೇಮ ಹಾಗೂ ದೇಶಭಕ್ತಿ ಎಲ್ಲರನ್ನು ಸದಾ ಇರಬೇಕು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷಾ ಸೂಚಿಗಳನ್ನು ಹೇಳಿದರು. ನಂತರ ಕಾಲೇಜಿನ ಉಪ ಪ್ರಾಚಾರ್ಯ ರಾದ ಜಿ ಬಿ ಸಜ್ಜನ್ ರವರು ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದುವುದರ ಜೊತೆಗೆ ನಾಯಕತ್ವ ಗುಣಗಳನ್ನು ಬಳಸಿಕೊಂಡು ನಮ್ಮ ಮಹಾನ್ ಭಾರತ ದೇಶದ ರಕ್ಷಣೆಗೆ ಮತ್ತು ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಕಾಲೇಜಿನ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಷಣ ನೃತ್ಯ ಮತ್ತು ದೇಶಭಕ್ತಿ ಗೀತೆಗಳು ಹಾಡಿದರು ಇದೇ ಸಂದರ್ಭದಲ್ಲಿ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಡೆದ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಚಾರ್ಯ ಜಿ ಬಿ ಸಜ್ಜನ , ಉಪನ್ಯಾಸಕರಾದ ಎ ಬಿ ಗೌಡಪ್ಪನವರ, ಡಾ ಎಂ ಪಿ ಚಕ್ರವರ್ತಿ, ಪಿ ಎಸ್ ಲೋನಾರಿ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ ವಿ ಚೌಧರಿ ಸಿಬ್ಬಂದಿಯವರಾದ ಡಿ ಹೆಚ್ ಮುಜಾವರ್, ಎಸ್ ಬಿ ಮುಕಾರ್ತಿಹಾಳ್, ಎಸ್ ಬಿ ಕುರಲೆ, ಬಿ ವಿ ಯರಗಟ್ಟಿಕರ, ಬಿ ಆರ್ ಕಲಂದರ, ವಿದ್ಯಾವತಿ ಶಿರೋಳ, ಜ್ಯೋತಿ ಹಿಂಚಿಗೇರಿ, ಎಸ್ ಪಿ ಇಜೇರಿ, ಎಂ ಡಿ ಕುರಂದರವಾಡ , ವಿಠ್ಠಲ ಹಡಪದ, ಎಸ್ ಹೆಚ್ ಗರಡಿಮನಿ, ಸಂಪದಾ ಮೇಡಂ, ಜೋರಾಪುರ ಮೇಡಂ, ನಾರಾಯಣ ವಾಳಿ, ವಿಶ್ವನಾಥ್ ಘಟಕಾಂಬಳೆ, ಲತಾ ದೋಟಿಹಾಳ್ ಸುನೀಲ್ ಜಾಧವ, ಮಹಾದೇವ ಕುಲಗೋಡ, ಸಿದ್ದು ಸಂಗಮ, ಧರೆಪ್ಪ ಮರನೂರ್ ಹಾಗೂ ಊರಿನ ಹಿರಿಯರು ಗಣ್ಯರು ವಿದ್ಯಾರ್ಥಿಗಳು ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.