ಮಹಲಿಂಗಪುರ

ಉತ್ತಮ ಅರೋಗ್ಯಕ್ಕಾಗಿ ಆಹಾರ ಪದ್ಧತಿ ಅಳವಡಿಸಿಕೊಳ್ಳಿ : ವಜ್ಜರಮಟ್ಟಿ

ಉತ್ತಮ ಅರೋಗ್ಯಕ್ಕಾಗಿ ಆಹಾರ ಪದ್ಧತಿ ಅಳವಡಿಸಿಕೊಳ್ಳಿ : ವಜ್ಜರಮಟ್ಟಿ

ಮಿಲನ್ ಅರೋಗ್ಯ ವೆಲ್ಲನೆಸ್ ಕೇಂದ್ರದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ 

ಮಹಾಲಿಂಗಪುರ 01: ಆಧುನಿಕತೆ ಬೆಳೆದಂತೆ ಮೂಲ ಆಹಾರ ಪದ್ಧತಿ ಮರೆತು ಈಗಿನ ಪಾಸ್ಟ ಫುಡ್ ಗಳಿಗೆ ಜನ ಮಾರು ಹೋಗುತ್ತಿದ್ದು. ಚಿಕ್ಕ ಮಕ್ಕಳನ್ನು ಹಿಡಿದು ಮುದುಕರವರೆಗೆ ವೇಗದ ಆಹಾರಕ್ಕೆ ದಾಸರಾಗುತ್ತಿದು. ಇದು ಈ ಶತಮಾನದ ದೊಡ್ಡ ದುರಂತ ಕೆಟ್ಟ ಆಹಾರ ತಿಂದು ಅರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಅರೋಗ್ಯ ಸರಿ ಇರಬೇಕಾದರೆ ಒಳ್ಳೆಯ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಎಂದು ನಗರದ ಸಮುದಾಯ ಅರೋಗ್ಯ ಕೇಂದ್ರದ ಮುಖ್ಯ ವೈದ್ಯರಾದ ಡಾ  ಸಿ ಎಂ ವಜ್ಜರಮಟ್ಟಿ ಹೇಳಿದರು. 

ಸ್ಥಳೀಯ ಆಯಿಲ್ ಮಿಲ್ ಬಡಾವಣೆಯಲ್ಲಿರುವ ಮಿಲನ್ ಅರೋಗ್ಯ ವೆಲ್ಲನೆಸ್ ಕೇಂದ್ರದಲ್ಲಿ ನಡೆದ" ಸ್ವಾಸ್ತ್ಯ ಸಂಕಲ್ಪ "ಅರೋಗ್ಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ ದುಶ್ಚಟಗಳಿಂದ ದೂರವಿರಿ ಸುಂದರ ಸಮಾಜ  ನಿರ್ಮಾಣಕ್ಕೆ ಪಣತೊಡಿ ಅಡುಗೆ ಮನೆಯೇ ಆರೋಗ್ಯಧಾಮವಾಗಬೇಕಾದರೆ ಆರೋಗ್ಯ ಮತ್ತು ಆಹಾರವನ್ನು ಮುಖ್ಯವಾಗಿರಿಸಿಕೊಂಡು ದೇಹವನ್ನು ದೇವಾಲಯ ಮಾಡಿಕೊಂಡು ನಮ್ಮ ಬದುಕನ್ನು ನಾವೇ ಕಟ್ಪಿಕೊಳ್ಳಬೇಕೆಂದು. ಸಮತೋಲನ ಆಹಾರ ಪದ್ಧತಿ ಅಳವಡಿಸಿಕೊಂಡು ಊಟದಲ್ಲಿ ಅರ್ಧದಷ್ಟು ಹಸಿ ತರಕಾರಿ ಮತ್ತು ಅರ್ಧದಷ್ಟು ಬೇಯಿಸಿದ ಆಹಾರ ಸೇವನೆ ಮಾಡಿದರೆ,ಅರೋಗ್ಯ ಪೂರ್ಣ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು. 

ಪ್ರಸ್ತಾವಿಕವಾಗಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷರಾದ ಜಿ ಎಸ್ ಗೊಂಬಿ ಇಂದಿನ ಯುವಕರಿಗೆ ಮೊಬೈಲ್ ಗಿಳು ಅರೋಗ್ಯ ಹಾಳು ಎಂಬ ನಾನುಡಿಯಂತೆ ಯುವಕರು ಬದುಕು ಹಾಳು ಮಾಡಿಕೊಳ್ಳುತ್ತಿರುವುದು ಈ ಶತಮಾನದ ದೊಡ್ಡ್‌ ದುರಂತ ಯುವಕರ ಮೇಲೆ ದೇಶದ ಭವಿಷ್ಯ ಅಡಗಿದೆ. ಆದ್ದರಿಂದ ಯುವಕರೇ ಮರೆಯದಿರಿ ಆಹಾರ ಮರೆಯದಿರಿ ಆರೋಗ್ಯ ಆಹಾರದಲ್ಲಿಹುದು ಆರೋಗ್ಯ ಭಾಗ್ಯ. ಹಸಿ ಸೊಪ್ಪು ತರಕಾರಿ ವಿಧ ವಿಧದ ಧಾನ್ಯಗಳು ದೇಹಕ್ಕೆ ಬಲುಹಿತವು, ಶುಚಿತ್ವವೇ ರೋಗಕ್ಕೆ ತಡೆಗೋಡೆ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ  ಎಲ್ಲರೂ ಕೈಜೋಡಿಸಬೇಕಾಗಿದೆ. 

ಸದೃಢ ಯುವಕರ ಅವಶ್ಯಕತೆ ದೇಶಕ್ಕಿದೆ ಇದನ್ನು ಅರ್ಥಮಾಡಿಕೊಂಡು ಯುವ ಜನತೆ ತಮ್ಮ ಜೀವನವನ್ನು ಕಟ್ಟಿಕೊಂಡು ಸಶಕ್ತ ದೇಶದ ಭವಿಷ್ಯ ನಿರ್ಮಾಣ ಮಾಡುವುವ ಗುರುತ್ತರ ಜವಾಬ್ದಾರಿ ಯುವಕರ ಮೇಲಿದೆ. ಆಟವಾಡಲು ಮೈದಾನಕ್ಕೆ ಹೋದರೆ ದೇಹ ಗಟ್ಟಿಯಾಗುತ್ತದೆ ಮನಸು ಸುಂದರವಾಗುತ್ತದೆ, ಆಟವಾಡಲು ಮೊಬೈಲ್ ತೆಗೆದುಕೊಂಡರೆ ಮೆದುಳು ಹಾಳಾಗಿ ಮನೆಗೆ ಬಾರವಾಗಿ ಬದುಕುಬೇಕಾಗುತ್ತದೆ. ಅದಕ್ಕಾಗಿ ಅವಶ್ಯಕತೆ ಎಷ್ಟೋ ಇದೆಯೋ ಅಷ್ಟೇ ಬಳಕೆ ಮಾಡಿ ಬದುಕು ಸುಂದರವಾಗಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಎಂದು ಹೇಳಿದರು. 

ನಂತರ ಮಾತನಾಡಿದ ಭಕ್ಷಿಸಾಬ ಯಾದವಾಡ ಪ್ರತಿಯೊಬ್ಬರು ತಮ್ಮ ದೇಹಕ್ಕೆ ಏನು ಹಿಡಿಸುತ್ತದೆಯೋ ಅದನ್ನು ಸೇವಿಸಬೇಕು, ಇದು ಅವರ ಆರೋಗ್ಯಕರ ತೂಕವನ್ನು ನಿರ್ವಹಿಸುವುದು ಮಾತ್ರವಲ್ಲದೆ ಆಹಾರ ಸೇವನೆಯ ವ್ಯತ್ಯಾಯವನ್ನು ತಡೆಯುತ್ತದೆ. ವ್ಯಕ್ತಿಗಳು ತಮ್ಮ ಪೌಷ್ಟಿಕ ವ್ಯವಸ್ಥೆಯನ್ನು ಆರಂಬಿಸುವ ಮುನ್ನ, ಆ ವ್ಯಕ್ತಿಯ ದೇಹ ಪ್ರಕೃತಿಯನ್ನು ತಿಳಿದುಕೊಳ್ಳುವುದು ಅಗತ್ಯ. ಇದು ಆ ದೇಹಕ್ಕೆ ಅಗತ್ಯವಾದ ಆಹಾರ ಕ್ರಮವನ್ನು ನಿರ್ಧರಿಸಲು ಮತ್ತು ವಾಸ್ತವ ಗುರಿಗಳನ್ನು ಸಾಧಿಸಲು ನೇರವಾಗುತ್ತದೆ. 

ಬೆಳಗಿನ ಉಪಹಾರ ಘನವಾಗಿರಬೇಕು ಹಾಗೂ ಬೆಳಿಗ್ಗೆ ಎದ್ದ ಬಳಿಕ 10 ಗಂಟೆ ಒಳಗೆ ಉಪಹಾರ ಸೇವಿಸಬೇಕು. ಇದಲ್ಲದೆ ನಿಮ್ಮ ಮಧ್ಯಾಹ್ನ ಊಟದ ನಡುವೆ ಕನಿಷ್ಠ ನಾಲ್ಕು ಗಂಟೆಗಳ ಅಂತರ ಇರಬೇಕು. ಮಧ್ಯಾಹ್ನ ಊಟ ಮೂರು ಗಂಟೆ ಮಿರದಿರಲಿ ಆರೋಗ್ಯಕರ ಊಟದ ಕ್ರಮವನ್ನು ನಿರ್ವಹಿಸಲು ಪದೆ ಪದೆ ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯ ವಿಧಾನ. ಆದ್ದರಿಂದ ದೇಹ ತೂಕ ನಿರ್ವಹಿಸುವ ಮಂತ್ರ ಸೂಕ್ತವಾದುದನ್ನು ಸೇವಿಸುವುದೇ ವಿನ ಊಟ ಬಿಡುವುದಲ್ಲ. ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಚನ್ನಪ್ಪ ಬಿ ಪಟ್ಟಣಶೆಟ್ಟಿ, ಜಿ ಎಸ್ ಬರಗಿ, ಹಣಮಂತ ಜಮಾದಾರ,ಡಾ ಮುನೇರಾ ಯಾದವಾಡ, ಪಯಾಜ್ ಶಹ, ಮುತ್ತಪ್ಪ ಕೆಂಚವ್ವಗೋಳ,ಬಂಗಾರೆವ್ವಾ ಕಂಕಣವಾಡಿ, ಪೈಜಲ್ ಯಾದವಾಡ, ಜಿ ಎಸ್ ಸೊರಗಾಂವಿ, ಮಹದೇವಪ್ಪ ಮುತ್ತೂರ, ಮುತ್ತಪ್ಪ ತೋಟಗೇರ ಸೇರಿ ಹಲವರು ಇದ್ದರು ಜಿ ಎಸ್ ಗೊಂಬಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ