ಕಾಗವಾಡ

ಐನಾಪುರದಲ್ಲಿ ಬಿಜೆಪಿ ಕಾಗವಾಡ ಮಂಡಲ ಯುವ ಮೋರ್ಚಾದಿಂದ ವ್ಯಸನ ಮುಕ್ತ ಭಾರತ ಅಭಿಯಾನ

ಐನಾಪುರದಲ್ಲಿ ಬಿಜೆಪಿ ಕಾಗವಾಡ ಮಂಡಲ ಯುವ ಮೋರ್ಚಾದಿಂದ ವ್ಯಸನ ಮುಕ್ತ ಭಾರತ ಅಭಿಯಾನ

ಲೋಕದರ್ಶನ ವರದಿ 

ಕಾಗವಾಡ 10 : ತಾಲೂಕಿನ ಐನಾಪೂರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಜೆಪಿ ಕಾಗವಾಡ ಮಂಡಲ ಯುವ ಮೋರ್ಚಾ ವತಿಯಿಂದ ವ್ಯಸನ ಮುಕ್ತ ಭಾರತ ಅಭಿಯಾನವನ್ನು ಶುಕ್ರವಾರ ದಿ. 09 ರಂದು ಯಶಸ್ವಿಯಾಗಿ ಆಯೋಜಿಸಲಾಯಿತು. 

ಕಾರ್ಯಕ್ರಮದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ್ ಕುಲಕರ್ಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯದ ಮೇಲಾಗುವ ಗಂಭೀರ ಹಾನಿ ಹಾಗೂ ಯುವಜನತೆ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಮತ್ತು ಶಿಸ್ತುಬದ್ಧ ಜೀವನ ನಡೆಸುವ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. 

ಮುಖಂಡ ತಮ್ಮಣ್ಣಾ ಪಾರಶೆಟ್ಟಿ ಮಾತನಾಡಿ, ಯುವಜನತೆ ದೇಶದ ಭವಿಷ್ಯ. ಯುವಜನತೆ ವ್ಯಸನಗಳಿಂದ ದೂರವಿದ್ದರೇ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಬಿಜೆಪಿ ಕಾಗವಾಡ ಮಂಡಲ ಅಧ್ಯಕ್ಷ ಅರುಣಕುಮಾರ್ ಗಣೇಶವಾಡಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ರಮೇಶ್ ಕಾಳ್ಳನ್ನವರ್ ಸೇರಿದಂತೆ ಮಂಡಲ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ