ಬೆಳಗಾವಿ ಮಹಾರಾಷ್ಟಕ್ಕೆ ಸೇರಿಸಿಕೊಳ್ಳಿ, ಮುಂಬಯಿ ಕರ್ನಾಟಕಕ್ಕೆ ಬಿಟ್ಟು ಕೊಡಿ : ಬೆಳಗಾವಿ ಬೇಡುವ ಮತೀಹೀನರಿಗೆ ಸವದಿ ಎಚ್ಚರಿಕೆ
ಬೆಳಗಾವಿ : ಈ ಹಿಂದೆ ಮುಂಬಯಿ ಕರ್ನಾಟಕವಾಗಿದ್ದ ಮಹಾರಾಷ್ಟçದ ಮುಂಬಯಿ ಮೇಲೂ ನಮಗೆ ಹಕ್ಕು, ಮುಂಬಯಿ ಕರ್ನಾಟಕಕ್ಕೆ ಬಿಟ್ಟು ಕೊಡಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಿ. ಇಲ್ಲವಾದರೆ ಮುಂಬಯಿ ನಗರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಕರ್ನಾಟಕದ ಎಲ್ಲ ಶಾಸಕರು ಪಕ್ಷಭೇಧ ಮರೆತು ಕೇಂದ್ರಕ್ಕೆ ಪ್ರಸ್ತಾವಣೆಯಲ್ಲಿ ಸಲ್ಲಿಸಬೇಕು ಎಂದು ಎಲ್ಲ ಶಾಸಕರಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ಮನವಿ ಮಾಡಿದರು.
ಬುಧವಾರ ವಿಧಾನ ಸಭೆಯಲ್ಲಿ ಉತ್ತರ ಕರ್ನಾಟಕದ ಚರ್ಚೆ ವೇಳೆ ಈ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ಮಹಾರಾಷ್ಟçದ ವಿಧಾನ ಸಭೆಯಲ್ಲಿ ಯಾರೋ ಮತೀಹೀನರು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡುವಂತೆ ವಿಷಯ ಪ್ರಸ್ತಾಪ ಮಾಡಿರುವದನ್ನು ಉಲ್ಲೇಖಿಸಿ ಮಾತನಾಡಿದ ಸವದಿ ಅವರು, ಈ ಹಿಂದೆ ಮುಂಬಯಿ ಕರ್ನಾಟಕವಾಗಿದ್ದ ವೇಳೆ ಮುಂಬಯಿ ಪ್ರಾಂತವು ಕರ್ನಾಟಕದ ಅಂಗವಾಗಿತ್ತು. ಆದರೂ ಇನ್ನು ಮುಂಬಯಿ ಮೇಲೆ ನಮಗೆ ಹಕ್ಕು ಇದೆ. ಬೆಳಗಾವಿ ಬೇಕಾದರೆ ತೆಗೆದುಕೊಳ್ಳಲಿ ಆದರೆ ನಮಗೆ ಸೇರಬೇಕಾದ ಮುಂಬಯಿಯನ್ನು ನಮಗೆ ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.
ಅಲ್ಲದೆ ನಾವಿ ಈಗಾಗಲೇ ಮಹಾಜನ ವರದಿಯನ್ನು ಒಪ್ಪಿಕೊಂಡ ಆಗಿದೆ. ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಿ ಕೂಡಾ ಅಗಿದೆ. ಬೆಳಗಾವಿಯಲ್ಲಿ ನೂರಾರು ಕೋಟಿ ಖರ್ಚು ಮಾಡಿ ವಿಧಾನ ಸಭೆ ಕಟ್ಟಿಸಿ ಈ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಕೂಡಾ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರ‍್ಯಾರೋ ಮತೀಹೀನರು ಮಹಾರಾಷ್ಟçದಲ್ಲಿ ಬೆಳಗಾವಿಯನ್ನು ಕೇಂದ್ರಾಡಳಿತ ಮಾಡಿ ಘೋಷಣೆ ಮಾಡುವಂತೆ ಹೇಳುತ್ತಾರೆ.
ಬೆಳಗಾವಿಯನ್ನು ಕೇಳುವ ಮತಿಹೀನರಿಗೆ ಸುವರ್ಣ ವಿಧಾನ ಸಭೆಯಿಂದಲೇ ಅವರಿಗೆ ನಾವೆಲ್ಲ ಶಾಸಕರು ಪಕ್ಷಭೇಧ ಮರೆತು ಮುಂಬಯಿಯನ್ನು ಕರ್ನಾಟಕಕ್ಕೆ ಸೇರಿಸಿ ಬೆಳಗಾವಿ ಮಹಾರಾಷ್ಟçಕ್ಕೆ ಸೇರಿಸಿಕೊಳ್ಳಿ ಇಲ್ಲ, ಮುಂಬಯಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂದು ನಾವೆಲ್ಲರು ಸೇರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವಣೆಯನ್ನು ಕಳಿಸಿಕೊಡೊನ ಎಂದು ಸದನದಲ್ಲಿ ವಿನಂತಿಸಿದರು. ಇದಕ್ಕೆ ಎಲ್ಲ ಶಾಸಕರು ಮೇಜು ಕಟ್ಟಿ ಸ್ವಾಗತಿಸಿದರು.