29ನೇ ವಸಂತಕ್ಕೆ ಕಾಲಿರಿಸಿದ ನಟಿ ಆಲಿಯಾ ಭಟ್
ಮುಂಬೈ: ಮಾರ್ಚ್ 15: ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ಯಶಸ್ಸಿನಲ್ಲಿರುವ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಆಲಿಯಾ ಭಟ್ ಇಂದು ಹುಟ್ಟುಹಬ್ಬದ ಸಂಭ್ರಮ.
ಬಳುಕುವ ಬಳ್ಳಿಯಂತಿರುವ ನಟಿ ಆಲಿಯಾ ಭಟ್ ೨೯ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಇವರು ತಮ್ಮ ಹುಟ್ಟುಹಬ್ಬವನ್ನು ಮುಂಬೈನ ಆಚೆ ತಮ್ಮ ತಾಯಿ ಮತ್ತು ತಂಗಿಯೊಂದಿಗೆ ಆಚರಿಸುತ್ತಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಸಿನಿಮಾ ನಿರ್ದೇಶಕರು, ನಿರ್ಮಾಕರು, ನಟ, ನಟಿಯರು, ಅಭಿಮಾನಿಗಳು ಸೇರಿದಂತೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಹುಟ್ಟುಹಬ್ಬದ ಸಂತಸದಲ್ಲಿರುವ ಆಲಿಯಾ ಭಟ್ ಹಾಲಿವುಡ್ ನಲ್ಲಿಯೂ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು. ಹಾರ್ಟ್ ಆಫ್ ಸ್ಟೋನ್ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಜೊತೆಗೆ ಆರ್ ಆರ್ ಆರ್ ಸಿನಿಮಾದಲ್ಲಿಯೂ ಆಲಿಯಾ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.