ಇಂಡಿಯಾಸ್ ವರ್ಲ್ಡ ರೇಕಾರ್ಡ ನಲ್ಲಿ ಬಸವ ಇಂಟರನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ
ಮುದ್ದೇಬಿಹಾಳ 08: ಪಟ್ಟಣದ ಬಸವ ಇಂಟರನ್ಯಾಶನಲ್ ಸ್ಕೂಲ್ನ 16 ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅಕಾಡೇಮಿಕಲ್ ನಲ್ಲಿ ಇಂಡಿಯಾಸ್ ವರ್ಲ್ಡ ರೇಕಾರ್ಡ ನಲ್ಲಿ ಸಾಧನೆ ಮಾಡಿದ್ದು ಶ್ಲಾಘನೀಯವಾದದ್ದು ಎಂದು ಶಾಲೆಯ ಚೇರಮನ್ ಶಿವಕುಮಾರ ಹರ್ಲಾಪೂರ ಹಾಗೂ ಪ್ರಾಂಶುಪಾಲಕಿ ಪ್ರಭಾ ಚಿನಿವಾರ ಹೇಳಿದರು.
ಪಟ್ಟಣದ ಬಸವ ಇಂಟರನ್ಯಾಶನಲ್ ಸ್ಕೂಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ತಮ್ಮ ಮಕ್ಕಳ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಹೆಸರುವಾಸಿಯಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಯಾ ಮಕ್ಕಳ ಪ್ರತಿಭೆಯ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಗುಣಮಟ್ಟ ಶಿಕ್ಷಣದ ಜೊತೆಗೆ ಬುದ್ಧಿ ಮತ್ತು ಚಾತುರ್ಯ್ಯವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕ್ರೀಡೆ ಸೇರಿದಂತೆ ಇತರೇ ರೀತಿಯ ತರಬೇತಿಗಳನ್ನು ನಮ್ಮ ಬಸವ ಇಂಟರನ್ಯಾಶನಲ್ ಸ್ಕೂಲ್ನಲ್ಲಿ ನೀಡಿ ಮಕ್ಕಳನ್ನು ಎಲ್ಲರಂಗದಲ್ಲೂ ಯಶಸ್ಸು ಗಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬುವ ಮಹತ್ವಾಕಾಂಕ್ಷೆಯೊಂದಿಗೆ ಮಕ್ಕಳ ಮನಸ್ಸಿನ ಮೇಲೆ ಯಾವುದೇ ಪ್ರಭಾವ ಬೀರದ ರೀತಿಯಲ್ಲಿ ಅಕಾಡೆಮಿಕಲ್ ಕೇರ್ ತೆಗೆದುಕೊಂಡು ಸಾಧನೆಯ ಮೆಟ್ಟಿಲಕ್ಕೆ ಕೊಂಡೊಯ್ಯುವ ಸದುದ್ದೇಶ ನಮ್ಮ ಸಂಸ್ಥೆಯದ್ದಾಗಿದೆ. ಕಳೆದ 6 ತಿಂಗಳಿಂದ ಆಯಾ ಮಕ್ಕಳ ಪಾಲಕರ ಸಹಕಾರ ಸ್ಫೂರ್ತಿಯಿಂದ ನಮ್ಮ ಶಿಕ್ಷಕರ ಉತ್ತಮ ಬೋಧನೆ, ವಿಶೇಷ ತರಬೇತಿ ನೀಡಿದ್ದರಿಂದ ಸದ್ಯ 16 ಜನ ವಿದ್ಯಾರ್ಥಿಗಳು ಇಂಡಿಯಾಸ್ ವರ್ಲ್ಡ ರೇಕಾರ್ಡ ನಲ್ಲಿ ಸಾಧನೆ ಮಾಡಿದ್ದಾರೆ ಮುಂಬರುವ ದಿನಗಳಲ್ಲಿ ಏಷ್ಯಾ ಬುಕ್ ಆಪ್ ರೇಕಾರ್ಡನಲ್ಲಿಯೂ ಕೂಡ ನಮ್ಮ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಎಲ್ಲರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಈ ವೇಳೆ ಇಂಡಿಯಾಸ್ ವರ್ಲ್ಡ ರೇಕಾರ್ಡನಲ್ಲಿ ಸಾಧನೆ ಮಾಡಿ ಸ್ಥಾನ ಪಡೆದ 16 ವಿದ್ಯಾರ್ಥಿಗಳು ರೂಬಿಕ್ ಕ್ಯೂಬ್, ಕಂಟ್ರಿ ಕ್ಯಾಪಿಟೇಲ್, ಇಡಿ ವಿಶ್ವನಕ್ಷೇಯಲ್ಲಿರುವ ದೇಶಗಳನ್ನು ಮತ್ತು ರಾಜದಾನಿಗಳನ್ನು ತಕ್ಷಣದಲ್ಲಿಯೇ ಗುರ್ತಿಸುವುದು, ರೀವರ್ಸ ಟೇಬಲ್ಸ್ ಸೇರಿದಂತೆ ವಿವಿಧ ಟ್ಯಾಲೇಂಟ್ ಗೇಮುಗಳನ್ನು ಎಲ್ಲ ಪಾಲಕರೇದು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಈ ವೇಳೆ ಪಾಲಕ ಹಾಗೂ ಗಣ್ಯ ಉದ್ಯಮಿ ಶರಣು ಸಜ್ಜನ, ರಾಜು ದಡ್ಡಿ, ಶರಣಬಸಪ್ಪ ಚಿನಿವಾಲರ, ನಾಗರಾಜ ಚಿನಿವಾಲರ, ಶಿಕ್ಷಕರಾದ ವಿಜಯಲಕ್ಷ್ಮೀ ಮಳಖೇಡ, ಸಿದ್ರಾಮ ಭಜಂತ್ರಿ, ಶಾಂಭವಿ ಮುದ್ದೇಬಿಹಾಳ ಹಲವರು ಇದ್ದರು.