ಮುದ್ದೆಬಿಹಾಲ್

ರಾಜ್ಯ ಮಟ್ಟದ ಸ್ಕೇಟಿಂಗ್ ಕಾಂಪಿಟೇಶನ್‌ನಲ್ಲಿ ಸಾಧನೆ

ರಾಜ್ಯ ಮಟ್ಟದ ಸ್ಕೇಟಿಂಗ್ ಕಾಂಪಿಟೇಶನ್‌ನಲ್ಲಿ ಸಾಧನೆ

ರಾಜ್ಯ ಮಟ್ಟದ ಸ್ಕೇಟಿಂಗ್ ಕಾಂಪಿಟೇಶನ್‌ನಲ್ಲಿ ಸಾಧನೆ

ಮುದ್ದೇಬಿಹಾಳ 28:  ಏಕಲವ್ಯ ರೋಲರ್ ಸ್ಕಟಿಂಗ್ ಅಕಾಡೆಮಿಯ ಮಕ್ಕಳು ಇಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಸ್ಕೇಟಿಂಗ್ ಕಾಂಪಿಟೇಶನ್‌ನಲ್ಲಿ ವಿದ್ಯಾರ್ಥಿಗಳು 2 ಬಂಗಾರ 3 ಬೆಳ್ಳಿ 5 ಕಂಚಿನ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ. 

ಧಾರವಾಡದ  ಆರ್‌.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಅ.26,27 ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಸ್ಕೇಟಿಂಗ್ ಕಾಂಪಿಟೇಶನ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಮುದ್ದೇಬಿಹಾಳ ಪಟ್ಟಣದ ಏಕಲವ್ಯ ರೋಲರ್ ಸ್ಕಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು ರಾಜ್ಯ ಮಟ್ಟದ ಸ್ಕೇಟಿಂಗ್ ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಹಲವು ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 

ಸ್ಟೈರಸ್ ಯುತ್ ವತಿಯಿಂದ ಬಾಲಕ ಬಾಲಕಿಯರಿಗಾಗಿ ( ವಯಸ್ಸಿನ ಆಧಾರ) ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಕೇಟಿಂಗ್ ಕಾಂಪಿಟೇಶನಲ್ಲಿ 500 ಮೀ ಸ್ಕೆಟಿಂಗ್ ನಲ್ಲಿ ಒಂದು ಬಂಗಾರ, ಒಂದು ಬೆಳ್ಳಿ, 3 ಕಂಚು ಪದಕ ಪಡೆದಿದ್ದಾರೆ. 1000 ಮೀ. ಸೆಟ್ಟಿಂಗ್ಸ್‌ ಸ್ಪರ್ಧೆಯಲ್ಲಿ 1 ಬಂಗಾರ 2 ಬೆಳ್ಳಿ, 2 ಕಂಚನ ಪದಕ ಪಡೆದು ಸಾಧನೆ ಮಾಡಿದ್ದಾರೆ. ಬಂಗಾರ ಮತ್ತು ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ದೆಹಲಿಯಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಕೆಟಿಂಗ್ ಟೂರ್ನಿಯಲ್ಲಿ ಕ್ರೀಡಾ ಪಟುಗಳು ಭಾಗವಹಿಸುತ್ತಾರೆ  ಎಂದು ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಮುದ್ದೇಬಿಹಾಳ ಶಾಖೆಯ ತರಬೇತಿದಾರ ಶಿವಕುಮಾರ ಎಂ. ಶಾರದಳ್ಳಿ ಮಾಹಿತಿ ನೀಡಿದ್ದಾರೆ.ಪಾಲಕರಾದ ಬಸವರಾಜ ನಾಗುರ ಶ್ವೇತಾ ಬಸವರಾಜ್ ನಾಗುರ ಉಮಾ ಶಾರದಳ್ಳಿ ಇದ್ದರು. 


ಸುದ್ದಿ ಓದಿ