ಮಹಲಿಂಗಪುರ

ಅನ್ನಪೂಣೇಶ್ವರಿ ಮಹಿಳಾ ಒಕ್ಕೂಟಕ್ಕೆ ಸಾಧನೆಯ ಪ್ರಶಸ್ತಿ.

ಅನ್ನಪೂಣೇಶ್ವರಿ ಮಹಿಳಾ ಒಕ್ಕೂಟಕ್ಕೆ ಸಾಧನೆಯ ಪ್ರಶಸ್ತಿ.

ಮಹಾಲಿಂಗಪುರ:  ಸಮೀಪದ ರನ್ನಬೆಳಗಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನ್ನಪೂಣೇಶ್ವರಿ ಮಹಿಳಾ ಗುಂಪುಗಳ ಒಕ್ಕೂಟಕ್ಕೆ  2022-23ನೇ ಸಾಲಿನ ಬಾಗಲಕೋಟೆ ಜಿಲ್ಲಾ ಮಟ್ಟದ ಅತ್ಯುತ್ತಮ ಸಾಧನೆಯ ಪ್ರಥಮ ಸ್ಥಾನ ಹಾಗೂ 1.50 ಲಕ್ಷ ನಗದು ಲಭಿಸಿದೆ.

ಜಿಲ್ಲಾಡಳಿತ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬಾಗಲಕೋಟೆ ಇವರ ವತಿಯಿಂದ ದೀನದಯಾಳ ಅಂತ್ಯೋದಯ ಯೋಜನೆ - ರಾಷ್ಟ್ರೀಯ ನಗರ, ಜೀವನೋಪಾಯ ಅಭಿಯಾನದಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಮಹಿಳಾ ಒಕ್ಕೂಟ ಮತ್ತು ಸ್ವಸಹಾಯ ಸಂಘಗಳಿಗೆ ವಿತರಿಸಲಾಗುವ 2022- 23ನೇ ಸಾಲಿನ ಪ್ರಶಸ್ತಿಯನ್ನು ಬಾಗಲಕೋಟೆಯ ನವನಗರದ ನಗರಸಭಾ ಸಭಾಭವನದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಟಿಡಿಎ ಅಧ್ಯಕ್ಷ ಹಾಗೂ ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಸುನಿಲ ಕುಮಾರ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಬಿ.ಎಸ್.ರಮೇಶ , ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದಯ ಹಿರೇಮಠ, ಪೌರಾಯುಕ್ತ ಆರ್.ವಾಸಣ್ಣ ಪ್ರಶಸ್ತಿ ನೀಡಿ ಗೌರವಿಸಿದರು. 

ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ತೋಳನೂರ, ಉಪಾಧ್ಯಕ್ಷ ದಾನಮ್ಮ ಧಡೂತಿ, ಸದಸ್ಯರಾದ ಅನ್ನಪೂರ್ಣ ಮಂಡಿ, ಮಂಗಳ ನಾಶಿ, ರೇಣುಕಾ ಮಲಾವಡಿ, ವಾಣಿಶ್ರೀ ಗಣಾಚಾರಿ, ಈರವ್ವ ಪೂಜಾರಿ, ಲಲಿತಾ ಹನಗಂಡಿ, ಮಂಜುಳಾ ಮಾದರ, ಬಿಸ್ಮಿಲ್ಲಾ ಅತ್ತಾರ, ಬಿಸ್ಮಿಲ್ಲಾ ನದಾಫ, ಬಂದವ್ವ ತಳವಾರ ಪ್ರಶಸ್ತಿಗೆ ಭಜನರಾಗಿದ್ದು ರನ್ನ ಬೆಳಗಲಿಯ ಮುಖಂಡರಾದ ಪಂಡಿತ ಪೂಜಾರ, ಸಿದ್ದುಗೌಡ ಪಾಟೀಲ, ಅಶೋಕ ಸಿದ್ದಾಪುರ, ರಂಗಪ್ಪ ಒಂಟಗೋಡಿ, ಬಸವರಾಜ ದೊಡಹಟ್ಟಿಮತ್ತು ಮುಖ್ಯಧಿಕಾರಿ ವಿದ್ಯಾಧರ ಕಲಾದಗಿ ಅಭಿನಂದಿಸಿದ್ದಾರೆ.

ಸುದ್ದಿ ಓದಿ