ಅಶ್ಲೀಲ ಪದ ಬಳಕೆ ಆರೋಪ : ಸಿಟಿ ರವಿ ನ್ಯಾಯಾಲಯದ ಮುಂದೆ ಹಾಜರು

ಅಶ್ಲೀಲ ಪದ ಬಳಕೆ ಆರೋಪ : ಸಿಟಿ ರವಿ ನ್ಯಾಯಾಲಯದ ಮುಂದೆ ಹಾಜರು

ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಶ್ಲೀಲ ಪದ ಬಳಕೆ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಂಧನಕ್ಕೆ ಒಳಗಾಗಿದ್ದ ಪರಿಷತ್ತಿನ ಸದಸ್ಯ ಸಿಟಿ ರವಿ ಅವರನ್ನು ಶುಕ್ರವಾರ ಬೆಳಗಾವಿಯ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದರು. 

      ಶುಕ್ರವಾರ ಮುಂಜಾನೆ ಸಿಟಿ ರವಿ ಅವರನ್ನು ಪೊಲೀಸರು ಬೆಳಗಾವಿಯ ನ್ಯಾಯಾಲಯಕ್ಕೆ ಕರೆ ತರುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಅಲ್ಲದೆ‌ ರವಿ ಅವರನ್ನು ನೋಡಲು ನ್ಯಾಯಾಲಯದ ಮುಂದೆ ಜನಜಂಗುಳಿಯೆ ಕೂಡಿತ್ತು. 

     ಅಲ್ಲದೆ ಸಿಟಿ ರವಿ ಅವರ ಪರ ನ್ಯಾಯವಾದಿಗಳು ಸಿಟಿ ರವಿ ಅವರಿಗೆ ಜಾಮೀನು ಅರ್ಜಿಯನ್ನು‌ ಕೂಡಾ ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆಯಲ್ಲಿ ವಿಧಾನ ಸಭೆ ವಿಪಕ್ಷ ನಾಯಕ ಆರ್. ಅಶೋಕ, ಶಾಸಕರಾದ ಬಸನಗೌಡಾ ಪಾಟೀಲ ಯತ್ನಾಳ, ಅಭಯ ಪಾಟೀಲ ಸೇರಿದಂತೆ ಅನೇಕು ಸಿಟಿ ರವಿ ಜೊತೆಗೆ ಇದ್ದರು. 

      

ಸುದ್ದಿ ಓದಿ