ಮುಂದಗೋಡ

ಕ್ಯಾಶ್ ಬ್ಯಾಗ್ ಕದ್ದ ಆರೋಪಿ ಬಂಧನ ,,,,,,,,,,.

ಕ್ಯಾಶ್ ಬ್ಯಾಗ್ ಕದ್ದ ಆರೋಪಿ ಬಂಧನ ,,,,,,,,,,.


ಲೋಕದರ್ಶನ ವರದಿ 

ಮುಂಡಗೋಡ 22: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ವ್ಯಕ್ತಿಯೊಬ್ಬರ ನಗದು ಮತ್ತು ಚೆಕ್ ಇದ್ದ ಕ್ಯಾಶ್ ಬ್ಯಾಗ್ ಅನ್ನು ಕಳುವು ಮಾಡಿಕೊಂಡು ಹೋದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಹುಬ್ಬಳ್ಳಿ ಮೂಲದ ರಾಕೇಶ್ ಗುಂಜಾಳ ಬಂಧಿತ ಆರೋಪಿ. ರಾಜಸ್ಥಾನ ಮೂಲದ ಹಾಲಿ ಹುಬ್ಬಳ್ಳಿ ಕಮಡೊಳ್ಳಿ ಓಣಿ, ಕುಬಸದ ಗಲ್ಲಿಯ ದೇವಾರಾಮ್ ಖವಾಸ ಕ್ಯಾಶ್ ಬ್ಯಾಗ್ ಕಳೆದುಕೊಂಡ ಸೇಲ್ಸ್‌ಮನ್‌.  

ಘಟನೆ ವಿವರ:ಆ.10ರಂದು ಆನವಟ್ಟಿ, ಹಾನಗಲ್ಲ ಮತ್ತು ಮುಂಡಗೋಡ ಬಟ್ಟೆ ಅಂಗಡಿಗಳಲ್ಲಿ ಹಣ ಸಂಗ್ರಹಣೆ ಮಾಡಿಕೊಂಡು ಸೇಲ್ಸ್‌ಮನ್ ದೇವಾರಾಮ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿ ಕಡೆ ಹೋಗುವ ಬಸ್ ಹತ್ತುತ್ತಿದ್ದರು. ಅವರ ಹಿಂದಿನಿಂದ ಬಂದ ಮಾಸ್ಕ್‌ ಧರಿಸಿದ ವ್ಯಕ್ತಿಯೊಬ್ಬ ಬಸ್ ಹತ್ತಿರಿ ಮುಂದೆ ಹೋಗಿರಿ ಎಂದು ಅವರ ಗಮನವನ್ನು ಬೇರೆ ಕಡೆಗೆ ಸೆಳೆದು ಅವರ ಕಾಲೇಜ್ ಬ್ಯಾಗ್‌ನ ಜಿಪ್ ತೆಗೆದು ಅದರಲ್ಲಿ ಇಟ್ಟ ಕ್ಯಾಶ್ ಬ್ಯಾಗ್‌ನಲ್ಲಿ ಇದ್ದ 1,68,442ರೂ. ನಗದು, ಕೆನರಾ ಬ್ಯಾಂಕ್‌ನ 2 ಚೆಕ್ ಹಾಗೂ ಎಸ್‌ಬಿಐನ 1ಚೆಕ್ ಸೇರಿ 3ಚೆಕ್‌ಗಳನ್ನು ಕ್ಯಾಶ್ ಬ್ಯಾಗ್ ಸಮೇತ ಕಳುವು ಮಾಡಿಕೊಂಡು ಹೋದ ಬಗ್ಗೆ ದೇವಾರಾಮ್ ಆ.11ರಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  

ಪ್ರಕರಣ ಕೈಗೆತ್ತಿಕೊಂಡ ಇಲ್ಲಿನ ಪೊಲೀಸರ ತಂಡ ರವಿವಾರ ಆರೋಪಿಯನ್ನು ಬಂಧಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಸಿಪಿಐ ಸಿದ್ದಪ್ಪ ಸಿಮಾನಿ, ಪಿ.ಎಸ್‌.ಐ. ಬಸವರಾಜ ಮಬನೂರ ಮತ್ತು ಎನ್‌.ಡಿ.ಜಕ್ಕಣ್ಣವರ, ಪ್ರೊಬೆಶನರಿ ಪಿ.ಎಸ್‌.ಐ. ಮಹೇಶ ಮಾಳಿ, ಎ.ಎಸ್‌.ಐ. ಮಣಿಮಾಲನ್ ಮೇಸ್ತ್ರಿ, ಸಿಬ್ಬಂದಿ ಮಹಮ್ಮದ್ ಸಲೀಂ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ, ಶಂಭುಲಿಂಗ ಜಾವೂರ, ಕಾಶಿರಾಯ ಕಾನ್ನಾಳ, ಸಂಗಮೇಶ ದೊಡ್ಡವಾಡ, ನಾಗರಾಜ ಬೇಗಾರ, ಕಾರವಾರ ತಾಂತ್ರಿಕ ಸಿ.ಡಿ.ಆರ್‌. ವಿಭಾಗದ ಉದಯ ಗುನಗಾ ಇವರಿಗೆ ಕಾರವಾರದ ಎಸ್‌.ಪಿ. ಡಾ.ಸುಮನ್ ಪನ್ನೇಕರ ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ