ಕಾರು ಹೊತ್ತು ನಿಂತಿದ್ದ 2 ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂಗಳ ಹಾನಿ : ಹುಕ್ಕೇರಿ ತಾಲೂಕಿನಲ್ಲಿ ಘಟನೆ

ಕಾರು ಹೊತ್ತು ನಿಂತಿದ್ದ 2 ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂಗಳ ಹಾನಿ : ಹುಕ್ಕೇರಿ ತಾಲೂಕಿನಲ್ಲಿ ಘಟನೆ

ಬೆಳಗಾವಿ : ಧಾಬಾ ಒಂದರ ಮುಂದೆ ಕಾರುಗಳನ್ನು ಹೊತ್ತು ನಿಂತಿದ್ದ ಎರಡು ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಗಳು ಹಾನಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ನಡೆದಿದೆ.

   ಶುಕ್ರವಾರ ಬೆಳಿಗ್ಗೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಧಾಬಾ ಒಂದರ ಮುಂದೆ ನಿಂತಿದ್ದ ಕ್ಯಾಂಟರ್ ಲಾರಿಗಳಿಗೆ ಬೆಂಕಿ ಬಿದ್ದು ಈ ಅವಘಡ ಸಂಭವಿಸಿದೆ. 

   ಆದರೆ ಈ ಬೆಂಕಿ ಅವಘಡ ನಡೆದ ಸ್ಥಳದಿಂದ ಸ್ವಲ್ಪ ಅಂತರದಲ್ಲಿಯೇ ಪೆಟ್ರೋಲ್ ಬಂಕ್ ಒಂದು ಇದ್ದು, ಇದಕ್ಕು ಅಪಾಯವಾಗುವ ಪರಿಸ್ಥಿತಿ ಇದೆ ಎನ್ನಲಾಗಿದೆ. ಅಲ್ಲದೆ ಈ ಕ್ಯಾಂಟರ್ ಲಾರಿಗಳು ವಾಹನಗಳನ್ನು ಸಾಗಿಸುವ ಲಾರಿಗಳಾಗಿವೆ. ಈ ಕ್ಯಾಂಟರ್ ಗಳಲ್ಲಿ ವಾಹನಗಳು ತುಂಬಿದ್ದವು ಎಂದು ತಿಳಿದು ಬಂದಿದೆ. ಘಟನೆ ವಿಷಯ ತಿಳಿದ ಅಗ್ನಿಶಾಲಮ ದಳದವರು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನೊಂದಿಸಲು ಶ್ರಮಿಸುತ್ತಿದ್ದಾರೆ.

   

ಸುದ್ದಿ ಓದಿ