ಭೂತರಾಮಟ್ಟಿ ಬಳಿ ಸಂಚರಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ : ನಡುರಸ್ತೆಯಲ್ಲಿ ಧಗ ಧಗಿಸಿದ ಕಾರು, ಸಂಚಾರ ಸ್ತಬ್ಧ

ಭೂತರಾಮಟ್ಟಿ ಬಳಿ ಸಂಚರಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ : ನಡುರಸ್ತೆಯಲ್ಲಿ ಧಗ ಧಗಿಸಿದ ಕಾರು, ಸಂಚಾರ ಸ್ತಬ್ಧ

ಬೆಳಗಾವಿ : ಸಂಚರಿಸುತ್ತಿದ್ದ ಇಂಡಿಕಾ ಕಾರ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ 8.45 ಗಂಟೆಗೆ ಸಂಭವಿಸಿದೆ.

   ಭೂತರಾಮಟ್ಟಿ ಬಳಿಯ ಮೃಗಾಲಯದ ಬಳಿ ಇರುವ ಪೂನಾ ಬೆಂಗಳೂರು ರಾತ್ರಿಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ  ಸುಮಾರು 8.45 ಗಂಟೆಗೆ ಈ ಘಟನೆ ನಡೆದಿದೆ. ನಡುರಸ್ತೆಯಲ್ಲಿ ಕಾರಿಗೆ ಬೆಂಕಿ ತಾಗಿದ ಹಿನ್ನೆಲೆಯಲ್ಲಿ ಸಂಚಾರ ನಿಂತು ಹೋಗಿದೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯೆಯ ಉಂಟಾಗಿರುವದರಿಂದ ಪ್ರಯಾಣಿಕರು ಕೆಲವು ಗಂಟೆಗಳ ಕಾಲ ಪರದಾಡುವಂತಾಗಿದೆ. ಈ ಕಾರಿನಲ್ಲಿ ಎಷ್ಟು ಜನ ಇದ್ದರು ಹಾಗೂ ಘಟನೆಯಲ್ಲಿ ಯಾವದೇ ಪ್ರಾಣ ಹಾನಿಯಾಗಿರುವ ಬಗ್ಗೆ ಇನ್ನು ತಿಳಿದು ಬರಬೇಕಿದೆ. 

ಸುದ್ದಿ ಓದಿ