ಕಾರು,ಬೈಕ್ ಮಧ್ಯೆ ನಡೆದ ಅಪಘಾತ: ಪ್ರಕರಣ ದಾಖಲು
ಮಹಾಲಿಂಗಪುರ 27: ನಗರದ ಹೊರವಲಯದಲ್ಲಿ ಕಾರು ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಮಾಜಿ ಯೋಧ ಸಾವೀಗೀಡಾಗಿ ಬೈಕ್ ಹಿಂಬದಿಯಲ್ಲಿ ಕುಳಿತ ಇನ್ನೋರ್ವ ವ್ಯಕ್ತಿ ಗಾಯಗೊಂಡ ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ.
ಮೃತ 23ವರ್ಷದ ಮಾಜಿ ಯೋಧ ಮಹಾಂತೇಶ ಹನಮಂತ ಮನ್ನಿಕೇರಿ ಮೂಡಲಗಿ ಪಟ್ಟಣದ ಲಕ್ಷ್ಮೀ ನಗರದ ನಿವಾಸಿ.ಈತ ಜೂ.26ರಂದು ಶನಿವಾರ ಮುಂಜಾನೆ ಬಟ್ಟೆ ಖರೀದಿಸಲಿಕ್ಕೋ ಅಥವಾ ಇನ್ನಾವುದೋ ಕೆಲಸಕ್ಕಾಗಿ ಮಹಾಲಿಂಗಪುರ್ ಪಟ್ಟಣಕ್ಕೆ ಬಂದು, 3.30ರ ಸುಮಾರಿಗೆ ಮರಳಿ ಮೂಡಲಗಿ ಕಡೆಗೆ ಹೋಗುತ್ತಿರುವಾಗ, ಮಹಾಲಿಂಗಪುರ- ನಿಪ್ಪಾಣಿ ರಾಜ್ಯ
ಹೆದ್ದಾರಿಯ ಸಂಗಾನಟ್ಟಿ ಕ್ರಾಸ್ ಹತ್ತಿರ ರಭಸದಿಂದ ಎದುರಿಗೆ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಗಾಯಗೊಂಡಿದ್ದ ಮಾಜಿ ಯೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿದ್ದಾನೆ ಮತ್ತು ಹಿಂಬದಿ ಸೀಟಿನಲ್ಲಿ ಕುಳಿತ ಹಳ್ಳೂರು ಗ್ರಾಮದ 20ವರ್ಷದ ಗೋಪಾಲ ಲಕ್ಷ್ಮಣ ಕುಂದರಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿ ಸುಮಾರು 3ವರ್ಷಗಳ ಹಿಂದೆ, ಭಾರತೀಯ ಸೇನೆಯಲ್ಲಿ ತರಬೇತಿ ಕಾರ್ಯನಿರ್ವಹಿಸುವಾಗ, ಆಕಸ್ಮತಾಗಿ ಗನ್ ನ್ನಿಂದ ಹಾರಿದ ಬುಲೆಟ್ ಗಳು ಬೆರಳುಗಳಿಗೆ ತಾಗಿ ಗಾಯಗೊಳಿಸಿದರ ಪರಿಣಾಮ ಸೇವೆಯಿಂದ ನಿವೃತ್ತಿಯನ್ನೂ ಹೊಂದಿ ಸ್ಥಳೀಯ ಮೂಡಲಗಿಯ ಕಾಶಿಂಅಲಿ ಖಾಸಗಿ ಬ್ಯಾಂಕವೊಂದರಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪರಿವಾರದ ಮೂಲದಿಂದ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಸಿಪಿಐ ಕರುಣೇಶಗೌಡ, ಸ್ಥಳೀಯ ಠಾಣಾಧಿಕಾರಿ ಎಸ್ ಎಸ್ ಘಾಟಗೆ ಹಾಗೂ ಇನ್ನಿತರೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮೃತನ ಸಹೋದರ ಶಿವಬಸು ಹನಮಂತ ಮನ್ನಿಕೇರಿ ನೀಡಿದ ಫಿರ್ಯಾದಿ ಅನುಸಾರ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.