ಮಹಲಿಂಗಪುರ

ಕರೆ ಸ್ವೀಕರಿಸಿ, ಜೀವ ಉಳಿಸಿದ ಶಾಸಕ ಸಿದ್ದು ಸವದಿ

ಕರೆ ಸ್ವೀಕರಿಸಿ, ಜೀವ ಉಳಿಸಿದ ಶಾಸಕ ಸಿದ್ದು ಸವದಿ

ಮಹಾಲಿಂಗಪುರ: ಬ್ಲ್ಯಾಕ್ ಫಂಗಸ್ ರೋಗಿಗೆ ಬೆಡ್ ಸಿಗದೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವಾಗ ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಮಧ್ಯರಾತ್ರಿ 2 ಗಂಟೆಗೆ ಮೋಬೈಲ್ ಕರೆ ಸ್ವೀಕರಿಸಿ ರೋಗಿಗೆ ಬೆಡ್ ವ್ಯವಸ್ಥೆ ಮಾಡುವ ಮೂಲಕ ಜೀವ ಉಳಿಸಿದ ಘಟನೆ ಸೋಮವಾರ ಸಂಭವಿಸಿದೆ. ಸಮೀಪದ ಮಾರಾಪುರ ಗ್ರಾಮದ ಬಲರಾಮ ಮಲ್ಲಪ್ಪ ಅಗಸಗಿ ಎಂಬ 52 ವರ್ಷದ ವ್ಯಕ್ತಿ ಕೋವಿಡ್ ಸೋಂಕಿತನಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಹೋಂ ಐಸೋಲೇಶನ್ನಲ್ಲಿ ಇದ್ದ. ಆಮೇಲೆ ಬ್ಲಾಕ್ ಫಂಗಸ್ ಕಾಣಿಸಿಕೊಂಡಾಗ ಚಿಕಿತ್ಸೆಗಾಗಿ ಮಹಾಲಿಂಗಪುರ ಸೇರಿದಂತೆ ಅಲ್ಲಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಾಗದೇ ಹುಬ್ಬಳ್ಳಿ ಆಸ್ಪತ್ರೆಗೆ ತೆರಳಿದ್ದರು. 

ಅಲ್ಲಿಯೂ ಬೆಡ್ ಸಿಗದೇ ಪರದಾಡುತ್ತಿರುವಾಗ ಬಿಜೆಪಿ ಕಾರ್ಯಕರ್ತರೊಬ್ಬರು ತಕ್ಷಣವೇ ಶಾಸಕ ಸಿದ್ದು ಸವದಿ ಅವರಿಗೆ ಕರೆ ಮಾಡಿದ್ದಾರೆ. ಆಗ ಮಧ್ಯ ರಾತ್ರಿ 2 ಗಂಟೆಯಾದರೂ ಶಾಸಕರು ಕರೆ ಸ್ವೀಕರಿಸಿ ವಿಷಯ ತಿಳಿದು, ವಿವರ ಪಡೆದ ಅವರು ಹುಬ್ಬಳ್ಳಿಗೆ ಸಂಪರ್ಕ ಮಾಡಿ ಆಸ್ಪತ್ರೆಯಲ್ಲಿ ಬೆಡ್ ಸಿಗುವಂತೆ ಮಾಡಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಲಭಿಸಿದ್ದರಿಂದ ರೋಗಿ ಆರೋಗ್ಯವಾಗಿದ್ದಾರೆ. ಹಗಲಿರುಳೂ ಜನರ ಸಂಕಷ್ಟಗಳಿಗೆ ಮಿಡಿಯುವ ಶಾಸಕರಾದ ಸಿದ್ದು ಸವದಿಯವರಿಂದ ನಮ್ಮ ಮನೆಯವರ ಪ್ರಾಣ ಉಳಿಯಿತು. ಮಧ್ಯೆ ರಾತ್ರಿ ಕರೆ ಸ್ವೀಕರಿಸಿ, ರಾತ್ರಿಯಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಿದರು. ಇಂತಹ ನಾಯಕರಿರುವುದು ನಮ್ಮ ಭಾಗ್ಯ. 


ಸುದ್ದಿ ಓದಿ