ಬಳ್ಳಾರಿ

ಅಬ್ದುಲ್ ಅಜೀಜ್ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ

ಅಬ್ದುಲ್ ಅಜೀಜ್ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ

ಬಳ್ಳಾರಿ 23 : ಬೆಂಗಳೂರಿನ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ  ಹಾಗೂ ಬಳ್ಳಾರಿ ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ 2024-25ನೇ ಶೈಕ್ಷಣಿಕ ಸಾಲಿನ  ಉತ್ತಮ  ಶಿಕ್ಷಕ, ಜಿಲ್ಲಾ ಮಟ್ಟದ ಉತ್ತಮ ಆಡಳಿತ ಮಂಡಳಿ ಪ್ರಶಸ್ತಿ ಗುರುವಾರ ಶಿರಗುಪ್ಪದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ವಿತರಿಸಲಾಯಿತು.  

ಕಂಪ್ಲಿಯ ಶ್ರೀಭುವನೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ಅಬ್ದುಲ್ ಅಜೀಜ್ ಮನಗೂಳಿಗೆ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ, ಹಂಪಿ ಗುರುಕುಲ ಮುಖ್ಯಶಿಕ್ಷಕ ರಾಘವೇಂದ್ರರಾವ್ಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಕಂಪ್ಲಿಯ ವಾಸವಿ ವಿದ್ಯಾಸಂಸ್ಥೆಗೆ ಜಿಲ್ಲಾ ಮಟ್ಟದ ಉತ್ತಮ ಆಡಳಿತ ಮಂಡಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪಿ.ರುದ್ರಪ್ಪ, ಶಿಕ್ಷಕರಾದ ಅಂಬಿಗರ ಮಂಜುನಾಥ, ಬೀರಲಿಂಗೇಶ್ವರ, ವೆಂಕಟರಮಣ, ಲಕ್ಷ್ಮಿಕಾಂತ ಬಣಗಾರ ಇತರರಿದ್ದರು.

ಸುದ್ದಿ ಓದಿ