ಬಳ್ಳಾರಿ

ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಎಬಿವಿಪಿ ಮನವಿ

ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಎಬಿವಿಪಿ ಮನವಿ

ಬಳ್ಳಾರಿ 29: ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನಾ ಮೆರವಣಿಗೆ ಮೂಲಕ ಮನವಿ ಸಲ್ಲಿಸಲಾಯಿತು. 

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ 75 ವರ್ಷಗಳಿಂದ ರಾಷ್ಟ್ರೀಯ ಪುನರ್ ನಿರ್ಮಾಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆ, ರಾಷ್ಟ್ರೀಯ ಜ್ಞಾನ, ಆಧ್ಯಾತ್ಮಿಕ ಚಾರಿತ್ರ್ಯ ಐಶ್ಛಿಕ ಏಕತೆ ಮತ್ತು ಅಖಂಡತೆಯ ಆಧಾರದ ಮೇಲೆ ವ್ಯಕ್ತಿ ನಿರ್ಮಾಣ ಮಾಡುವ ರಾಷ್ಟ್ರ ಪುನರ್ ನಿರ್ಮಾಣದ ಮಹಾನ್ ಧ್ಯೆಯದ ಕನಸನ್ನು ನನಸಾಗಿಸುತ್ತಾ ಬಂದಿದೆ. ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯಲ್ಲಿ ಈಗಿರುವ ವಿವಿಧ ಸಮಸ್ಯೆಗಳು ಈ ಕೆಳಗಿನಂತಿವೆ. 

ಸಮಸ್ಯೆಗಳು : 

1) ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ 5ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 1ನೇ ಮತ್ತು 3ನೇ ರಿಪಿಟರ್ ಮತ್ತು ರೆಗ್ಯೂಲರ್ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಮರು ಮೌಲ್ಯಮಾಪನ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ. ಇದರಿಂದಾಗಿ ಈಗ 5ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಎದುರಾಗಿವೆ. 

2) ವಿಶ್ವವಿದ್ಯಾಲಯದ 1ನೇ, 3ನೇ ಮತ್ತು 5ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸುವುದು. 

3) ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ವಿದ್ಯಾರ್ಥಿಗಳ ಒಂದು ವರ್ಷ ಅವಧಿ ಮುಗಿದ ನಂತರ ಕಾಲೇಜು ಬದಲಾವಣೆಗೆ ಅವಕಾಶ ನೀಡಿರುವುದಿಲ್ಲ. 

4) ವಿಶ್ವವಿದ್ಯಾಲಯದ ಎಲ್ಲಾ ಪದವಿ ವಿದ್ಯಾರ್ಥಿಗಳ ತರಗತಿಗಳನ್ನು ಕ್ಯಾಲೆಂಡರ್ ಆಫ್ ಇವೆಂಟ್‌ನಂತೆ ನಡೆಸಬೇಕು. ...2 

5) ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಬಿ.ಇಡಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಗಿದು 2 ತಿಂಗಳು ಕಳೆದರೂ ತರಗತಿಗಳು ಪ್ರಾರಂಭವಾಗಿರುವುದಿಲ್ಲ. 

6) 2ನೇ ವರ್ಷ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಕೋರ್ಸ್‌ ನೋಂದಣಿ ಮಾಡಲು ಅವಕಾಶ ನೀಡಿರುವುದಿಲ್ಲ. 

7) ವಿಶ್ವವಿದ್ಯಾಲಯ ಆವರಣದಲ್ಲಿರುವ ಪಿ.ಜಿ. ಹಾಸ್ಟೆಲ್‌ಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಬೇಕು. 

ಆದಷ್ಟುಬೇಗನೆ ಮೇಲ್ಕಂಡ ಎಲ್ಲಾ ಸಮಸ್ಯೆಗಳನ್ನು ಸಂಬಂಧಪಟ್ಟ ಕುಲಪತಿಗಳು ಪರಿಹರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಲು ಸಹಕರಿಸಲು ಈ ಮೂಲಕ ಕುಲಪತಿಗಳಲ್ಲಿ ಕೋರಲಾಯಿತು. ಇಲ್ಲವಾದಲ್ಲಿ ವಿಶ್ವವಿದ್ಯಾಲಯ ಚಲೋ ಕರೆ ಕೊಡಲಾಗುವುದು ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಹಕಾರ್ಯದರ್ಶಿ ವಿನೋದ್ ಕುಮಾರ್, ನಗರ ಕಾರ್ಯದರ್ಶಿ ಶ್ರೀಹರಿ, ದರ್ಶನ್, ನರೇಂದ್ರ, ಅನುಶ್ರೀ ಹಾಗೂ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ