ಮಹಿಳೆ ಜೀವನದಲ್ಲಿ ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬಾಳಬೇಕು: ಜ್ಯೋತಿ ಕಾಗಿನಕರ
ಮುಂಡರಗಿ27 : ಮಹಿಳೆ ಜೀವನದಲ್ಲಿ ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬಾಳಬೇಕು. ನಮ್ಮನ್ನು ತುಳಿಯುವವರಿಗೆ ಖುಷಿ ತರುವಂತೆ ಬೆಳೆಯಬೇಕು. ಮಹಿಳೆಯರ ಸ್ವಾವಲಂಭಿ ಬದುಕಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಹಲವಾರು ಯೋಜನೆಗಳಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಂಡರಗಿ ದಿವಾಣಿ ನ್ಯಾಯಾಧೀಶೆಯಾದ ಜ್ಯೋತಿ ಕಾಗಿನಕರ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಶಾಖೆಯ ಆಶ್ರಯದಲ್ಲಿ ಜರುಗಿದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಸೇವೆಗಳ ಪ್ರಾಧಿಕಾರಗಳು ನಿಮ್ಮ ಕಾನೂನು ಹಕ್ಕುಗಳ ಸಂರಕ್ಷಣೆಗೆ ಬದ್ಧವಾಗಿದೆ. ಉಚಿತ ಕಾನೂನು ಸಲಹೆ ಮತ್ತು ನೆರವು ಪಡೆಯುವುದಕ್ಕೆ ಅವಕಾಶವಿದೆ. ಲೋಕಅದಾಲತ್ ಮೂಲಕತಮ್ಮ ಕೆಲವೊಂದುವ್ಯಾಜಗಳ ಸರಿಪಡಿಸಿಕೊಳ್ಳುವುದಕ್ಕೆ, ನ್ಯಾಯಾಲಯದಲ್ಲಿ ಬಾಕಿಉಳಿದ ಪ್ರಕರಣಗಳಿಗೆ ಪರಿಹಾರ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಮಹಿಳೆ ಪುರುಷ ಈರ್ವರೂ ಸಮಾಜದಲ್ಲಿ ಸಮಾನರು. ಮಹಿಳೆಯರು ಕುಟುಂಬದ ನಿರ್ವಹಣೆ ಮಾಡುವಲ್ಲಿ ದೊಡ್ಡ ಶಕ್ತಿ ಹೊಂದಿರುತ್ತಾರೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕುವುದಕ್ಕೆ ಯೋಜನೆ ನಡೆಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲಾ ನಿರ್ದೇಶಕ ಯೋಗೀಶ.ಎ. ಮಾತನಾಡಿ, ರಾಜ್ಯದಲ್ಲಿರುವಂತಹ ಮಹಿಳೆಯರ ಸಭಲೀಕರಣಕ್ಕಾಗಿ, ದೃಚಟ ಮೂಕ್ತ ಸಮಾಜ ನಿರ್ಮಾಣಕ್ಕಾಗಿ, ಗ್ರಾಮೀಣ ಪ್ರದೇಶದಗಳ ಶ್ರೇಯೋಭಿವೃದ್ಧಿಗೆ, ಸಮಾಜದ ಭದ್ರತೆಗಾಗಿ, ಆರೋಗ್ಯ ರಕ್ಷಣೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕಳೆದ 42 ವರ್ಷಗಳಿಂದ ರಾಜ್ಯದಾಧ್ಯಂತಹ ಕೆಲಸ ಮಾಡುತ್ತಾ ಬಂದಿದೆ.ಅದರಲ್ಲಿಯು ಮಹಿಳೆಯ ಗುಂಪು ಹಾಗೂ ಸಂಘಗಳನ್ನು ರಚಿಸುವದರ ಮೂಲಕ ಅವರಿಗೆ ಸಾಲ ನೀಡುವದರೊಂದಿಗೆ ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಲ್ಲಿ ಯಾವಾಗಲೂ ನ್ಯಾಯ ದೊರೆಯುತ್ತದೆ. ಮಹಿಳೆಯು ಸಮಾಜದಲ್ಲಿ ಉತ್ತಮ ಸ್ಥಾನ ಕಲ್ಪಿಸಿಕೊಳ್ಳಲು ಹಲವು ಯೋಜನೆ ಜಾರಿ ತಂದಿದ್ದಾರೆ. ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದರು.
ತಾಲೂಕು ಯೋಜನಾಧಿಕಾರಿ ವಿಶಾಲಾ ಮಲ್ಲಾಪೂರ ಸ್ವಾಗತಿಸಿದರೆ ಭೀಮಾನಾಯ್ಕ ನಿರೂಪಿಸಿದರೆ ಕೊನೆಗೆ ಅಣ್ಣಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಬಿ.ಐ.ಶಾಖೆ ವ್ಯವಸ್ಥಾಪಕ ಸತೀಶ ರಡ್ಡಿ, ಎ.ಕೆ.ಮುಲ್ಲಾನವರ, ಗವಿಸಿದ್ದಯ್ಯ ಹಳ್ಳಿಕೇರಿಮಠ ಇತರರು ಇದ್ದರು.