ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಸಾವು
ಸಿಂದಗಿ 05: ಬಟ್ಟೆ ತೊಳೆದುಕೊಂಡು ಬರಲು ಹೋಗಿದ್ದ ಮಹಿಳೆಯೊಬ್ಬಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಸಿಂದಗಿ ತಾಲೂಕಿನ ಸುರಗಿಹಳ್ಳಿ ನಿವಾಸಿ ಅಶ್ವಿನಿ ಸುನೀಲ ಸೂರ್ಯವಂಶಿ(27) ಮೃತಪಟ್ಟ ಮಹಿಳೆಯಾಗಿದ್ದು, ಇವಳು ದಿ. 4ರಂದು ಬಟ್ಟೆ ತೊಳೆದುಕೊಂಡು ಬರುತ್ತೇನೆ ಎಂದು ತನ್ನ ಅತ್ತೆಗೆ ಹೇಳಿ ಮನೆಯಿಂದ ಬಟ್ಟೆ ಹಾಗೂ ಕೊಡ ತೆಗೆದುಕೊಂಡು ಹೋಗಿ, ಕೃಷಿ ಹೊಂಡದಿಂದ ನೀರು ತೆಗೆದುಕೊಳ್ಳಲು ಹೋದಾಗ ನೀರು ತುಂಬಿರುವ ಕೃಷಿ ಹೊಂಡದಲ್ಲಿ ಜೋಲಿಹೋಗಿಯಾಗಲಿ ಅಥವಾ ಕಾಲು ಜಾರಿಯಾಗಲಿ ಹೊಂಡದಲ್ಲಿರುವ ನೀರಿನಲ್ಲಿ ಬಿದ್ದು, ಮೃತಪಟ್ಟಿರುತ್ತಾಳೆ. ಈ ಬಗ್ಗೆ ದೇವರಹಿಪ್ಪರಗಿ ನಿವಾಸಿ ಮಹಾದೇವಿ ಮಲಕಪ್ಪ ಕುಳಗೇರಿ, ಕೊಟ್ಟ ದೂರಿನ ಮೇರೆಗೆ, ದಿ.04ರಂದು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.