ಲೇಖನಗಳು

ಬದುಕಿಗೆ ಗುರಿ ತೋರಿದ ಗುರುವಿಗೊಂದು ನಮನ...

ಬದುಕಿಗೆ ಗುರಿ ತೋರಿದ ಗುರುವಿಗೊಂದು ನಮನ...

“ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಃಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ” ಗುರುವಿನ ಮಹತ್ವವನ್ನು ಸಾರುವ ಈ ಶ್ಲೋಕದಂತೆ ನಮಗೆ ಗುರುವಿನ ಸ್ಥಾನವು ದೇವರಿಗೆ ಸಮನಾದದ್ದು ಎಂದು ಅರ್ಥೈಸುತ್ತದೆ. ಆಚಾರ್ಯ ದೇವೋ ಭವಃ ಎಂಬ ಸಂಸ್ಕೃತಿ ನಮ್ಮದು. ಜನ್ಮ ನೀಡಿದ ತಾಯಿ, ಬದುಕು ಕಲಿಸಿದ ತಂದೆ ಮತ್ತು ಕಲ್ಲಿನಂತಿರುವ ನಮಗೆ ಸಂಸ್ಕಾರ ನೀಡಿ ಶಿಲೆ ಅಥವಾ ಮೂರ್ತಿಗಳನ್ನಾಗಿ ರೂಪ ನೀಡಿದ ಗುರು ಈ ಮೂವರನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಸುಂದರ ಮತ್ತು ಸ್ವಾಸ್ಥ್ಯ ಸಮಾಜವೆಂಬ ತೋಟದಲ್ಲಿ ಮಾಲಿಕರೇ ಶಿಕ್ಷಕರು ಎನ್ನುವುದು ನಿಜಕ್ಕೂ ಸತ್ಯವಾದ ಸಂಗತಿ. 

ಆದ್ದರಿಂದ ರಾಷ್ಟ್ರಕ್ಕೆ ಉತ್ತಮ ನಾಗರೀಕರು ಮತ್ತು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಅನನ್ಯ ಮತ್ತು ಮಹತ್ವಪೂರ್ಣವಾಗಿದೆ. ಶಿಕ್ಷಕರು ಕೇವಲ ಇಂದಿನ ಪೀಳಿಗೆಗೆ ಅಂಧಕಾರವೆಂಬ ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನವೆಂಬ ಪ್ರಭೆಯನ್ನು ಬೆಳಗಲು ಹಾಗೂ ಎಲ್ಲೆಡೆ ಪಸರಿಸುವಂತೆ ಹಾಗೂ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳುವಲ್ಲಿ ಭದ್ರ ಅಡಿಪಾಯ ಹಾಕುವವರೇ ಶಿಕ್ಷಕರು. ಅವರು ತಮ್ಮ ನಿಸ್ವಾರ್ಥ ಸೇವೆಯ ಮೂಲಕವೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ,ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರ, ಪ್ರಾಮಾಣಿಕತೆ, ಕಾರ್ಯದಲ್ಲಿ ಶ್ರದ್ಧೆ, ಮಾನವೀಯ ಸಂಬಂಧಗಳು, ಜೀವನ ಮೌಲ್ಯಗಳು, ಆದರ್ಶ ಮತ್ತು ತತ್ವ-ಸಿದ್ಧಾಂತಗಳಂತಹ ಮೌಲ್ಯಗಳ ಧಾರಣೆ ಮಾಡಿ ಬದುಕು ಬಂಗಾರಮಯವನ್ನಾಗಿಸಲು ಕಾರ್ಯನಿರ್ವಹಿಸಬೇಕಾಗಿದೆ.  

ಗುರು ಪರಂಪರೆ ಹೊಂದಿದ ನಮ್ಮ ದೇಶದಲ್ಲಿ ಶಿಕ್ಷಕರು-ಗುರುಗಳು ಯಾವಾಗಲೂ ಇತರರಿಗೆ ಮಾದರಿ ಹಾಗೂ ಆದರ್ಶಪ್ರಾಯರಾಗಿರಬೇಕು. ಖ್ಯಾತ್ ಆಂಗ್ಲಭಾಷಾ ಸಾಹಿತಿ ಬ್ರಾಡ್ ಹೆನ್ರಿ ಹೇಳಿರುವಂತೆ, “ಂ ಉಠರಜ ಛಿಚಿಟಿ ಠಿಠಿಡಿಜ ಠಜ, ಟಿರಟಿಣಜ ಣಜ ಟಚಿರಟಿಚಿಣಠ, ಚಿಟಿಜ ಠಿಣಟಟ ಣಜ ಟಠಜ ಟಜಚಿಡಿಟಿಟಿರ” ಎಂದು ಹೇಳಿದ್ದಾರೆ. ಮಕ್ಕಳು-ವಿದ್ಯಾರ್ಥಿಗಳಲ್ಲಿ ಉದಾತ್ತವಾದ ಮತ್ತು ಉತ್ತಮ ರೀತಿ-ನೀತಿ, ಮೌಲ್ಯಗಳು, ಬದುಕುವ ಶೈಲಿ, ಜೀವನ ಕ್ರಮ, ಒಳ್ಳೆಯ ಹವ್ಯಾಸಗಳ ಬಗ್ಗೆ ಕಲಿಸಬೇಕಾದ ಶಿಕ್ಷಕ ಸಮುದಾಯವು ತಾವು ಮೊದಲು ತಮ್ಮ ಕಾರ್ಯದಲ್ಲಿ ಶ್ರದ್ಧೆ, ನಿಷ್ಠೆ, ಕಾರ್ಯತತ್ಪರತೆ, ಕಾರ್ಯದಕ್ಷತೆ, ಸಾಮಾಜಿಕ ಬದ್ಧತೆ, ನಿಯಮ ಪರಿಪಾಲನೆ ಮತ್ತು ಉತ್ತಮ ಮೌಲ್ಯ ಮತ್ತು ನೈತಿಕತೆಯನ್ನು ಹೊಂದಿರಬೇಕು. ಅವರ ಜೀವನ ತೆರೆದ ಪುಸ್ತಕದಂತೆ ಇರಬೇಕು ಹಾಗೂ ವಿದ್ಯಾರ್ಥಿ, ಸಮಾಜ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿರಬೇಕು. “ ನನ್ನ ಸೇವೆ ಸರ್ಕಾರಿ ಶಾಲೆ-ಕಾಲೇಜಿನಲ್ಲಿ ಮತ್ತು ನನ್ನ ಮಕ್ಕಳು ಕಾನ್ವೆಂಟ್ ಶಾಲೆಗೆ” ಎಂಬ ಮನಸ್ಥಿತಿಯನ್ನು ತೊಲಗಿಸಿ ಸಾಮಾಜಿಕ ಬದ್ಧತೆಯನ್ನ ತೋರಬೇಕು.  

ದಾಸವರೇಣ್ಯರಾದ ಪುರುರಂದರ ದಾಸರ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಗುರುವಿನ ಮಹಿಮೆ ಹಾಗೂ ಗುರು-ಶಿಷ್ಯರ ಸಂಬಂಧವನ್ನು ಸಾರುವ ವಾಣಿಯಂತೆ, ಅಂದಿಜಜಟ,,./ನ ಶಿಕ್ಷಣ ವ್ಯವಸ್ಥೆಯಲ್ಲಿ ಗುರು-ಶಿಷ್ಯ, ಶಿಕ್ಷಕ-ವಿದ್ಯಾರ್ಥಿಯ ನಡುವಿನ ಅವಿನಾವ ಸಂಬಂಧವಿತ್ತು. ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ “ ರೋಲ್ ಮಾಡೆಲ್‌” ಅವರೇ “ಸೂಪರ್ ಮ್ಯಾನ್‌” ಎಂದು ತಿಳಿದುಕೊಂಡು ಜೀವನದಲ್ಲಿ ಅವರಂತೆ ಶಿಕ್ಷಕನಾಗಬೇಕೆಂಬ ಮಹದಾಸೆಯನ್ನು ಹೊಂದುತ್ತಿದ್ದರು. ಪ್ರತಿಯೊಬ್ಬರ ಜೀವನದಲ್ಲಿಯೂ ಮುಂದೊಂದು ಗುರಿ ಮತ್ತು ಹಿಂದೊಬ್ಬ ಗುರು ಬಹುಮುಖ್ಯ. ಹಲವರು ತಮ್ಮ ಜೀವನದಲ್ಲಿ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಶೆಯನ್ನು ಬದಲಿಸಿಕೊಂಡು ಯಶಸ್ವಿ ವ್ಯಕ್ತಿಗಳಾದ ನಿದರ್ಶನಗಳು ನಮ್ಮ ಮುಂದಿವೆ. ಏಕೆಂದರೆ ವಿದ್ಯಾರ್ಥಿಯು ತನ್ನ ಗುರಿ ಮುಟ್ಟಲು ಗುರುವೇ ಸೋಪಾನ. ಶಿಕ್ಷಕರು ಶಿಕ್ಷಣದ ಗುರಿಗಳನ್ನು ಸಾಧಿಸುವದರೊಂದಿಗೆ ಮಕ್ಕಳಲ್ಲಿ ಬೌದ್ಧಿಕ, ಭಾವನಾತ್ಮಕ, ಅಧ್ಯಾತ್ಮಿಕ, ನೈತಿಕ, ಮೌಲ್ವಿಕ, ಆದರ್ಶ-ತತ್ವ ಮತ್ತು ಸಿದ್ಧಾಂತಗಳನ್ನು ಒಡಮೂಡಿಸಿ ಅವರು ಪರಿಪೂರ್ಣ ವ್ಯಕ್ತಿತ್ವ ವಿಕಸನ ಹೊಂದುವಂತೆ ಪ್ರೇರೇಪಣೆ ನೀಡುವುದು ಇಂದಿನ ಅವಶ್ಯಕತೆಯಾಗಿದೆ.  

ಶ್ರೇಷ್ಠ ತತ್ವಜ್ಞಾನಿ ಹಾಗೂ ಶಿಕ್ಷಕರೆನಿಸಿದ ಡಾ. ರಾಧಾಕೃಷ್ಣನ್‌ರವರು ಹೇಳಿರುವಂತೆ, “ಖಿಜ ಒಜಜಠಡಿಜ ಣಜಚಿಛಿಜಡಿ ಣಜಟ, ಖಿಜ ರಠರಜ ಣಜಚಿಛಿಜಡಿ ಜಥಟಚಿಠಿ, ಖಿಜ ಣಠಿಜಡಿಠ ಣಜಚಿಛಿಜಡಿ ಜಜಟಠಣಡಿಚಿಣ ಚಿಟಿಜ ಖಿಜ ರಡಿಜಚಿಣ ಣಜಚಿಛಿಜಡಿ ಠಿಠಿಡಿ” ಎಂದು ಹೇಳಿದ್ದಾರೆ. ಆದ್ದರಿಂದ ಶಿಕ್ಷಕರು ನಿರಂತರ ಅಧ್ಯಯನಗೈಯುತ್ತಾ, ತಮ್ಮ ಬೋಧನಾ ಶೈಲಿ, ಪದ್ಧತಿ, ಬೋಧನಾ-ಕಲಿಕೆಯಲ್ಲಿ ಸಾಮರಸ್ಯವನ್ನು ಸಾಧಿಸುತ್ತಾ, ಪ್ರೇರಣೆಯಿಂದ ಮುಕ್ತವಾದ ಪರಿಸರದಲ್ಲಿ ಮಕ್ಕಳು ಸ್ವಯಂ ಕಲಿಕೆ, ಜ್ಞಾನಾರ್ಜನೆ, ಆಲೋಚನಾ ಶಕ್ತಿ, ಸಂವಹನ ಕೌಶಲ್ಯಗಳಂತಹುಗಳನ್ನು ಬೆಳೆಸಿ ಶಿಕ್ಷಣವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಶಿಕ್ಷಕ ತನ್ನಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು, ಒಂದು ಕಲ್ಲನ್ನು ಶಿಲೆಯನ್ನಾಗಿ ಕೆತ್ತಿ ಅದಕ್ಕೊಂದು ಸುಂದರ ರೂಪ ನೀಡಿ ಸಾಕಾರಗೊಳಿಸಬೇಕು. ಶಿಕ್ಷಕರು ತಾವು ಸ್ವತಃ ಸಮಯ ಪಾಲನೆ, ಶಿಸ್ತು, ಆದರ್ಶ-ಮೌಲ್ಯಗಳ ಪರಿಪಾಲಕರಾಗಿ, ಮಾದರಿಯಾಗಿ ವಿಷಯ ಜ್ಞಾನದ ಜೊತೆಗೆ ಕಲೆ, ಪ್ರತಿಭೆ, ಕುಶಲಗಾರಿಕೆ, ಕ್ರಿಯಾಶೀಲತೆ, ಕಾರ್ಯತತ್ಪರತೆ, ಪ್ರಾಮಾಣಿಕತೆಯಂತಹ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಆ ವಿದ್ಯಾರ್ಥಿಯು ಮುಂದೊಂದು ದಿನ ಶ್ರೇಷ್ಠ ಸಾಧನೆ ತೋರಿದಾಗ “ಇವರು ನನ್ನ ವಿದ್ಯಾರ್ಥಿ” ಎಂಬ ಸಾರ್ಥಕತೆಯ ಭಾವ ಅವರ ಮನದಲ್ಲಿ ಮೂಡಿದರೆ ನಿಜಕ್ಕೂ ಶಿಕ್ಷಕ ವೃತ್ತಿಯು ಸಾರ್ಥಕವಾಗುತ್ತದೆ.  

ಇಂದು ವಿದ್ಯಾರ್ಥಿಗಳು ಶಿಕ್ಷಕನ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಆತನ ನಡೆ-ನುಡಿ, ಆಚಾರ-ವಿಚಾರ, ಶಿಸ್ತು-ಸಂಯಮತೆ, ವೇಷ-ಭೂಷಣ, ಸಂಸ್ಕೃತಿ-ಸಂಸ್ಕಾರ ಮತ್ತು ಮೌಲ್ಯಗಳಿಗೆ ಒತ್ತು ನೀಡಿ, ಅದನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ಶಿಕ್ಷಕರು ಸಮಾಜದಲ್ಲಿ ಒಬ್ಬ ಮಾದರಿ ಹಾಗೂ ಆದರ್ಶಪ್ರಾಯರಾದ ವ್ಯಕ್ತಿತ್ವವನ್ನು ಹೊಂದಿರಬೇಕು. ಆದರೆ ದುರದೃಷ್ಟವಶಾತ್ ಇಂದಿನ ಶಿಕ್ಷಣ ವ್ಯವಸ್ಥೆಯು ಸೆಮೆಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡಾಗಿನಿಂದ ಶಿಕ್ಷಕ-ವಿದ್ಯಾರ್ಥಿ ಸಂಬಂಧ ಕೇವಲ ಪಠ್ಯಕ್ತಮ, ವಿಷಯ ಜ್ಞಾನ, ಪರೀಕ್ಷೆ, ಪದವಿ ಪಡೆಯುವುದು ಮತ್ತು ಜೀವನೋಪಾಯಕ್ಕೊಂದು ಉದ್ಯೋಗದ ಸಾಧನವಾಗುತ್ತಿದ್ದು, ಮತ್ತು ಶಿಕ್ಷಣದ ವಾಣಿಜ್ಯೀಕರಣದ ಪ್ರಭಾವದಿಂದ ಶಿಕ್ಷಣವೆಂಬುದು ಒಂದು ಮಾರಾಟದ ವಸ್ತುವಾಗಿ ಮಾರ​‍್ಪಟಟಿರುವುದು ಕಳವಳಕಾರಿ ಸಂಗತಿ. ಶಿಕ್ಷಣವು ಕೇವಲ ಅಂಕ ಗಳಿಸುವ ಮತ್ತು ಜ್ಞಾನದೊಂದಿಗೆ ಪದವಿ ಪಡೆಯುವ ಉದ್ಧೇಶದ ಈಡೇರಿಕೆಗೆ ಮಾತ್ರ ಸೀಮಿತವಾಗಿದೆ ಎಂದು ಭಾಸವಾಗುತ್ತಿದೆ.  

ಕೊನೆಯ ಮಾತು: ಇಂದು ವಿದ್ಯಾರ್ಥಿಗಳು ಸಾಕಷ್ಟು ಜ್ಞಾನ, ಯಾವುದೇ ಅಂಕ, ಪದವಿ ಪಡೆದರೂ ಜೀವನದಲ್ಲಿ ಮೌಲ್ಯಗಳಿಲ್ಲದೆ ತಮ್ಮ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಾತ್ವಿಕ, ಸೈಂದ್ಧಾಂತಿಕ, ವೈಚಾರಿಕ, ಅಧ್ಯಾತ್ಮಿಕ ಹಾಗೂ ದಾರ್ಶನಿಕತೆಯಂತಹ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕ ಹಾಗೂ ಸತ್ಪ್ರಜೆಯಾಗಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೋಂಡು ಭಾರತವನ್ನು ಒಂದು ಸುಂದರ, ಸ್ವಾಸ್ಥ್ಯ, ಸುಭದ್ರ, ಸಮಗ್ರ, ಸುರಕ್ಷಿತ ಮತ್ತು ಆರೋಗ್ಯಯುತ ರಾಷ್ಟ್ರವನ್ನಾಗಿ ಮಾಡುವಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಹಾಗೂ ಕೊಡುಗೆಗಳನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಇಂದಿನ ಯುವಕರು ನಾಳಿನ ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಗಳು ಎಂಬುದನ್ನು ಅರಿತು ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಹಾಗೂ ಮೋಬೈಲ್, ವ್ಯಾಟ್ಸಾಪ್, ಫೇಸ್ ಬುಕ್, ಟ್ವೀಟರ್‌ನಂತಹ ಇತರ ಸಾಮಾಜಿಕ ಜಾಲತಾಣಗಳ ದಾಸರಾಗಿ ತಮ್ಮ ಅಮೂಲ್ಯವಾದ ಸಮಯವನ್ನು ವೃಥಾ ಹಾಳುಮಾಡಿಕೊಳ್ಳದೇ “ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್‌” ಆಗುವಂತೆ ಕನಸು ನನಸು ಮಾಡಲು ಪ್ರಯತ್ನಶೀಲರಾಗಬೇಕಾಗಿರುವದು ಪ್ರಸ್ತುತವಾಗಿದೆ.   

ರಾಷ್ಟ್ರಕವಿ ಕುವೆಂಪು ಅವರು “ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು. ನುಗ್ಗಿದುದು ಮುಂದೆ ಧೀರರ ದಂಡು, ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ. ಮುಗ್ಗುತಿದೆ ಮಧ್ಯೆ ಹೇಡಿಗಳ ಹಿಂಡು” ಎಂಬ ಕವಿತೆಯ ಸಾಲುಗಳು ನೂರಕ್ಕೆ ನೂರರಷ್ಟು ಸತ್ಯವಾಗುತ್ತಿವೆ ಎಂದು ಹೇಳಬಹುದು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಉದಾತ್ತವಾದ ಗುರಿಯನ್ನಿಟ್ಟುಕೊಂಡು ಆ ಗುರಿಯ ಮುಟ್ಟಲು ಬೇಕಾದ ಮಾರ್ಗದರ್ಶನವನ್ನು ಗುರುವಿನಿಂದ ಪಡೆದು ಯಶಸ್ಸು ಗಳಿಸಬೇಕು. ಆದ್ದರಿಂದ “ಇಂದಿನ ಮಕ್ಕಳು ನಾಳಿನ ಭಾರತ ದೇಶದ ಕುಡಿಗಳು” ಎಂಬುದನ್ನು ಅರಿತು ರಾಷ್ಟ್ರದ ಅಮೂಲ್ಯವಾದ ಸಂಪತ್ತಾಗಿರುವ ಯುವಕರು ರಾಷ್ಟಕ್ಕೆ ಏನಾದರೂ ಕೊಡುಗೆ ನೀಡಿ ತಮ್ಮ ಋಣವನ್ನು ತೀರಿಸಬೇಕು ಹಾಗೂ ಜಗತ್ತಿನಲ್ಲಿ ಭಾರತವು ಒಂದು ಸದೃಢ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಮತ್ತು ರಾಷ್ಟ್ರದ ಪ್ರಗತಿಗಾಗಿ ಶ್ರಮಿಸಬೇಕಾಗಿದೆ. ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯತೆಯನ್ನು ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜ ಮತ್ತು ಮುಂದಿನ ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಗುರು-ಶಿಕ್ಷಕನ ಮೇಲಿದೆ. ಮಕ್ಕಳ ಭಾವೀ ಭವಿಷ್ಯಕ್ಕಾಗಿಯೇ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಗುರುಗಳ ಸ್ಮರಣೆಗೆ ಶಿಕ್ಷಕ ದಿನಾಚರಣೆಯೊಂದೇ ಬೇಕೆಂದಿಲ್ಲ. ಶಿಕ್ಷಕ-ಗುರುಗಳನ್ನು ಪೂಜಿಸುವ, ಗೌರವಿಸುವ ಕಾರ್ಯವು ದೈನಂದಿನವಾಗಿ ನಡೆಯಬೇಕು. ಶಿಕ್ಷಕ ಸಮುದಾಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವದರ ಜತೆಗೆ ಅವರಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕ, ಸಮಾಜ, ಪಾಲಕರು-ಪೋಷಕರು ಮತ್ತು ಸಮುದಾಯವು ಕ್ರಮ ಕೈಗೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿ-ನಮ್ಮತನವನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವಲ್ಲಿ ಅರಿವು ಮೂಡಿಸುವತ್ತ ಕಾರ್ಯೋನ್ಮುಖರಾಗಬೇಕಾಗಿದೆ. ಶಿಕ್ಷಣದ ಎಲ್ಲ ಹಂತಗಳಲ್ಲಿ ಪಠ್ಯಕ್ತಮದಲ್ಲಾದರೂ ಮೌಲ್ಯಗಳ ಬಗ್ಗೆ ಪರಿಚಯಿಸುವುದು ಮತ್ತು ವೀರ ಮಹನೀಯರಾದ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಲಾಲ ಬಹಾದ್ದೂರ ಶಾಸ್ತ್ರೀಜಿ, ಮಹಾತ್ಮಾ ಗಾಂಧೀಜಿ, ಸರದಾರ ವಲ್ಲಭಭಾಯಿ ಪಟೇಲ್ ಮತ್ತು ಇನ್ನಿತರ ದೇಶಭಕ್ತ ಆತ್ಮಕಥೆ, ಜೇವನ ಚರಿತ್ರೆ ಮತ್ತು ಯಶೋಗಾಥೆಗಳನ್ನು ಪಠ್ಯದಲ್ಲಿ ಅಳವಡಿಸುವದು ಅಷ್ಟೇ ಮುಖ್ಯವಾಗಿದೆ. ಅಂದಾಗ ಮಾತ್ರ ಶಿಕ್ಷಣದ ಮಹತ್ತರವಾದ ಉದ್ಧೇಶ ಈಡೇರಲು ಸಾಧ್ಯವೆಂದು ಹೇಳಬಹುದು. ಹೀಗೆ ನಮ್ಮ ಬದುಕು-ಭವಿಷ್ಯ ರೂಪಿಸಿ ನಮ್ಮನ್ನು ಸನ್ಮಾರ್ಗದತ್ತ ಮುನ್ನಡೆಸುವ ಮತ್ತು ದಾರಿ ತೋರುವ ಗುರುವಿನ ಸ್ಮರಣೆ ಸದಾಕಾಲ ಮಾಡುವಂತಾಗಲಿ. ಶಿಕ್ಷಕರ ದಿನವು ಇತರ ಎಲ್ಲ ದಿನಾಚರಣೆಗಳಂತೆ ಕಾಟಾಚಾರಕ್ಕಾಗಿ ಆಗದಿರಲೆಂಬುದೇ ನನ್ನ ಆಶಯವಾಗಿದೆ.  

- ಮಲ್ಲಪ್ಪ. ಸಿ. ಖೊದ್ನಾಪೂರ 


ಸುದ್ದಿ ಓದಿ