ಕೆರೆಯಲ್ಲಿ ಬಿದ್ದ ಯುವತಿ ಜೀವ ಉಳಿಸಲು ನೀರಿಗೆ ಹಾರಿದ ಸಂಚಾರಿ ಪೊಲೀಸಪ್ಪ : ಆಯ್ತುಕರಿಂದ ನಗದು ಬಹುಮಾನ ಘೊಷಣೆ
ಬೆಳಗಾವಿ : ಕೆರೆಯ ನೀರಿನಲ್ಲಿ ಬಿದ್ದು ಮುಳುತ್ತಿದ್ದ ಯುವತಿಯೋರ್ವಳ ಪ್ರಾಣ ಉಳಿಸಿದ ಸಂಚಾರಿ ಪೊಲೀಸ ಪೇದೆಯೊರ್ವರಿಗೆ ನಗದು ಬಹುಮಾನ ಘೋಷಿಸುವ ಮೂಲಕ ಸಿಎಂ ಪಧಕಕ್ಕೆ ಹೆಸರು ಶಿಫಾರಸ್ಸು ಮಾಡುವದಾಗಿ ಬೆಳಗಾವಿ ಪೊಲೀಸ ಆಯುಕ್ತರು ತಿಳಿಸಿದ್ದಾರೆ.

ಶನಿವಾರ ನಗರದ ಕಿಲ್ಲಾ ಕೆರೆಯ ನೀರಲ್ಲಿ ಯುವತಿಯೋರ್ವಳು ಬಿದ್ದಿದ್ದಳು. ಈ ಕೆರೆಯ ಸಮೀಪದ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಶಿನಾಥ ಇರಗಾರ ಎಂಬುವ ಸಂಚಾರಿ ಪೊಲೀಸ ಪೇದೆ ತನ್ನ ಜೀವದ ಹಂಗು ಇಲ್ಲದೆ, ಇಲಾಖೆಯ ಸಮವಸ್ತ್ರದಲ್ಲಿಯೇ ಕೆರೆಯ ನೀರಿಗೆ ಹಾರಿದ್ದಾರೆ.
ಅಲ್ಲದೆ ನೀರಲ್ಲಿ ಮುಳುಗುತ್ತಿದ್ದ ಆ ಯುವತಿಯ ಜೀವ ಉಳಿ ಜೀವಂತವಾಗಿ ಹೊರತೆಗೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಷಯವು ಆ ಪರಿಸರದಲ್ಲಿ ಪಸರಿಸುತ್ತಿದ್ದಂತೆ ಸಂಚಾರಿ ಪೊಲೀಸ ಕಾಶಿನಾಥ ಇವರ ಕಾರ್ಯ ವೈಖರಿಗೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಷಯ ಅರಿತ ಬೆಳಗಾವಿ ಪೊಲೀಸ ಆಯುಕ್ತ ಸಿದ್ದರಾಮಪ್ಪ ಅವರು ಸಂಚಾರಿ ಪೊಲೀಸ ಪೇದೆ ಕಾಶಿನಾಥರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅಲ್ಲದೆ 5000 ನಗದು ಬಹುಮಾನ ನೀಡುವ ಮೂಲಕ ಮುಖ್ಯಮಂತ್ರಿಗಳು ಪದಕಕ್ಕಾಗಿ ಹೆಸರು ಶಿಫಾರಸು ಮಾಡುವದಾಗಿ ಹೇಳಿದ್ದಾರೆ.