ಜಿಲ್ಲೆಯಾದ್ಯಂತ ಒಟ್ಟು 11,91,548 ಎನ್ಯುಮರೇಷನ್ ಫಾರ್ಮ್‌ ವಿತರಣೆ : ಜಿಲ್ಲಾಧಿಕಾರಿ

ಜಿಲ್ಲೆಯಾದ್ಯಂತ ಒಟ್ಟು 11,91,548 ಎನ್ಯುಮರೇಷನ್ ಫಾರ್ಮ್‌ ವಿತರಣೆ : ಜಿಲ್ಲಾಧಿಕಾರಿ A total of 11,91,548 enumeration forms distributed across the district: Deputy Commissioner

  ಕಾರವಾರ ಜು.7 : ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು,11,58,776 ಮಂದಿಯ ಮ್ಯಾಪಿಂಗ್ ಮಾಡಿದ್ದು, ಇದುವರೆಗೂ ಜಿಲ್ಲೆಯಾದ್ಯಂತ ಒಟ್ಟು 11,91,548 ಎನ್ಯುಮರೇಷನ್ ಫಾರ್ಮ್‌ ಗಳನ್ನು ವಿತರಿಸಲಾಗಿದ್ದು, 59,123 ಫಾರ್ಮ್‌ ಗಳನ್ನು ಗಣಕೀಕರಣ ಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ. ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಒಟ್ಟು 1092 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 149 ಶಾಶ್ವತ ವಲಸೆ ಹಾಗೂ 868 ಮರಣ ಹೊಂದಿದ ಪ್ರಕರಣಗಳು, 70  ದ್ವಿಪ್ರತಿಗಳು ಸೇರಿವೆ ಎಂದು ತಿಳಿಸಿದ್ದಾರೆ.