ಬೆಳಗಾವಿ ಬಳಿ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ; ಕೋಟ್ಯಾಂತರ ಆಸ್ತಿ, ಸಾಮಗ್ರಿ ಹಾನಿ
ಬೆಳಗಾವಿ : ಕಾರಖಾನೆ ( ಕಂಪನಿ) ಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಹಾಗೂ ವಸ್ತುಗಳು ಹಾನಿಯಾಗಿದ್ದು ಕಾರಖಾನೆಯಲ್ಲಿ ಕೆಲ ಕೂಲಿ ಕಾರ್ಮಿಕರು ಸಿಲುಕಿ ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿರುವ ಘಟನೆ ಬೆಳಗಾವಿ ತಾಲೂಕಿನ ನಾವಗೆಯಲ್ಲಿ ಮಂಗಳ ವಾರ ರಾತ್ರಿ ನಡೆದಿದೆ.
ನಾವಗೆ ಸಮೀಪದ ಸ್ನೇಹಮ್ ಕಾರಖಾನೆ (ಕಂಪನಿಯಲ್ಲಿ) ಮಂಗಳವಾರ ರಾತ್ರಿ ಈ ಅಗ್ನಿ ಅವಘಡ ಸಂಭವಿಸಿದೆ.
ಕಂಪನಿಯಲ್ಲಿ ರಾತ್ರಿ ಸುಮಾರಿಗೆ ಬೆಂಕಿ ಅನಾಹುತ ನಡೆದಿದ್ದು ಸಂಭವಿಸಿರುವ ಹಾನಿ ಬಗ್ಗೆ ಮಾಹಿತಿ ಇನ್ನು ಲಭಿಸಿಲ್ಲ. ಆದರೆ, ತಕ್ಷಣ ಆಗಮಿಸಿರುವ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.
ಆದರೆ ಈ ಕಾರ್ಖಾನೆಯಲ್ಲಿ ಕೆಲ ಕಾರ್ಮಿಕರು ಒಳಗೆ ಸಿಲುಕಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ ಜಗದೀಶ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.