ಯಶಸ್ವಿಯಾಗಿ ಜರುಗಿದ ಸಾಂಸ್ಕೃತಿಕೋತ್ಸವ 2024 ಧಾರ್ಮಿಕ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಬೇಕು
ಯಶಸ್ವಿಯಾಗಿ ಜರುಗಿದ ಸಾಂಸ್ಕೃತಿಕೋತ್ಸವ 2024 ಧಾರ್ಮಿಕ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಬೇಕು
ಹಂಪಿ 22: ಕ್ಷೇತ್ರದ ಕಡ್ಡಿರಾಂಪುರದಲ್ಲಿ ಶ್ರೀಮರಿದೇವ ಸಂಗೀತ ಸಾಂಸ್ಕೃತಿ ಕಲಾವೃಂದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀಮರಿಸ್ವಾಮಿ ಜಾತ್ರಾ ಪ್ರಯುಕ್ತ ಸಾಂಸ್ಕೃತಿಕೋತ್ಸವ -2024 ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜಿನಿ ಷಣ್ಮುಖಗೌಡ, ಅಧ್ಯಕ್ಷರು ಗ್ರಾಮ ಪಂಚಾಯಿತಿ ಹಂಪಿ, ಮುಖ್ಯ ಅತಿಥಿಗಳಾಗಿ ಬಿ.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಜೆ.ಎಂ.ವೃಷಬೇಂದ್ರಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣವರ್, ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ತುರುವನೂರು ಅತಿಥಿಯಾಗಿ ಆಗಮಿಸಿದ್ದರು, ಹಂಪಿ ಗ್ರಾಮ ಪಂಚಾಯಿತಿ ಪಿ.ಡಿ.ಓ. ಗಂಗಾಧರ್ ಉಪಾಧ್ಯಕ್ಷರಾದ ಹನುಮಂತಪ್ಪ, ಸದಸ್ಯರಾದ ಕೆ.ಗೋಪಾಲ್, ರೇಣುಕಮ್ಮ, ಹುಲಿರಾಜ್, ವೀರೇಶ್ ಹಿಟ್ನಾಳ್ ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ್, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಂಪಿ ಗ್ರಾಮಪಂಚಾಯಿತಿ ಪಿ.ಡಿ.ಓ. ಗಂಗಾಧರ್ ಇಂದಿನ ಆಧುನಿಕ ಕಾಲದಲ್ಲಿ ಜಾತ್ರೆ, ಧಾರ್ಮಿಕ ಸಾಂಸ್ಕೃತಿಕ ಮಹೋತ್ಸವಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಧಾರ್ಮಿಕ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು. ಜಾತ್ರಾ ಸಮಯದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯವಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೊಪ್ಪಳ ಗವಿಮಠದ ಸ್ವರ ಸಂಚಾರ ಕಲಾತಂಡದ ಕಲಾವಿದರಿಂದ ಶಾಸ್ತ್ರೀಯ ಸಂಗೀತ ದಾಸರ ಪದಗಳು ಮತ್ತು ಭರತನಾಟ್ಯ ಸುಗುಣ ಮತ್ತು ತಂಡ ಹೊಸಪೇಟೆ, ಜಾನಪದ ನೃತ್ಯ ಅಮೃತ ತಂಡ ಹೊಸಪೇಟೆ, ಸುಗಮ ಸಂಗೀತ ಸುಮಾ ಕಾಳಘಟ್ಟ, ಜಾನಪದ ಗೀತೆಗಳು ಯಲ್ಲಪ್ಪ ಬಂಡಾರ್‌ದಾರ್ ಅವರಿಂದ ವಚನಗಾಯನ ಅಂಗಡಿ ಸಮರ್ಥ, ನವ್ಯ ಅಂಗಡಿ ಇವರಿಂದ, ಕಡ್ಡಿರಾಂಪುರದ ಶಾಲಾ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ವಿಶೇಷವಾಗಿ ಕೂಡ್ಲಿಗಿ ತಾಲೂಕಿನ ಲಿಂಗನಹಳ್ಳಿ ಕುಮಾರಿ ನಿಹಾರಿಕಾಳಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಯಲ್ಲಾ ವಸ್ತುಗಳ ಬಣ್ಣಗಳನ್ನು ಗುರುತಿಸುವ ಗಾಂಧಾರಿ ಕಲೆಯನ್ನು ಅಚ್ಚರಿಯ ರೀತಿಯಲ್ಲಿ ಮಾಡಿದಳು.
ಕಾರ್ಯಕ್ರಮದ ನಿರೂಪಣೆಯನ್ನು ಎ.ದೊಡ್ಡಬಸಪ್ಪ, ಕೆ.ಪಂಪನಗೌಡ, ನಿರ್ವಹಿಸಿದರು, ಹೆಚ್.ಕೆ.ಶರಣೇಶ್, ನಾಗರಾಜ್ ಹಿಟ್ನಾಳ್, ಯೋಗೀಶ್, ತರುಣ್ ಕುಮಾರ್ ಉಪಸ್ಥಿತರಿದ್ದರು. ಸುಮಾರು ರಾತ್ರಿ 1.00 ಗಂಟೆವರೆಗೆ ಸಾಂಸ್ಕೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.