ಭಾಜಪ ಪಕ್ಷದ ಪ್ರಬಲ ಆಕಾಂಕ್ಷಿ ಹಾಗೂ ಪಕ್ಷದತೀರ್ಮಾನಕ್ಕೆ ಬದ್ದ : ದುಂಡಿಗೌಡ್ರ
ಶಿಗ್ಗಾವಿ 11:ಬರುವ ಉಪ ಚುನಾವಣೆಯಲ್ಲಿ ಭಾಜಪ ಪಕ್ಷದಿಂದಆಕಾಂಕ್ಷಿಯಾಗಿದ್ದುಕ್ಷೇತ್ರದಜನರು ಹಾಗೂ ನಮ್ಮ ನಾಯಕರಾದ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದಜೋಷಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆಎಂದು ಭಾಜಪ ಪಕ್ಷದಪ್ರಬಲ ಆಕಾಂಕ್ಷಿಅಭ್ಯರ್ಥಿ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ಭಾರತ ಸೇವಾ ಸಂಸ್ಥೆಯಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದಅವರು ನಮ್ಮ ನಾಯಕರಾದ ಬೊಮ್ಮಾಯಿ ಹಾಗೂ ಜೋಷಿ ನೇತೃತ್ವದಲ್ಲಿನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಕ್ಷೇತ್ರವಾಗಿತ್ತು ಈಗ ಅಭಿವೃದ್ಧಿ ಹೊಂದಿದಕ್ಷೇತ್ರ ಹಾಗೂ ಶಿಕ್ಷಣ ಕ್ರಾಂತಿ,ಉದ್ಯೋಗಕ್ರಾಂತಿ ಮೂಲಕ ಸುಮಾರು 10 ಸಾವಿರ ಮಹಿಳೆಯರಿಗೆ ಉದ್ಯೋಗ ಲಭ್ಯವಾಗಿವೆ. ಆರೋಗ್ಯಕ್ರಾಂತಿಯಾಗಿದೆಒಟ್ಟಾರೆಈ ಕ್ಷೇತ್ರ ಸಮಗ್ರಅಭಿವೃದ್ದಿಕಂಡಿದ್ದು ಈಗ ಅವರು ಹಾವೇರಿ-ಗದಗಕ್ಷೇತ್ರದ ಸಂಸದರಾಗಿಆಯ್ಕೆಯಾದ ನಿಮಿತ್ಯ ಈ ಕ್ಷೇತ್ರವುತೆರವಾಗಿದ್ದು ಉಪ ಚುನಾವಣೆಯ ಹಿನ್ನಲೆಯಲ್ಲಿ ನಾನು ಕಳೆದ 10-15 ವರ್ಷಗಳಿಂದ ತಾಲೂಕಿನದಾದ್ಯಂತ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದುಸಾರ್ವಜನಿಕರು ಸಹಿತ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಿತ ಬೆಂಬಲ ವ್ಯಕ್ತಪಡಿಸುತ್ತಿದ್ದುಕಾರಣ ನಾನು ಭಾಜಪ ಪಕ್ಷದಪ್ರಭಲ ಆಕಾಂಕ್ಷಿಯಾಗಿದ್ದೇನೆಅಲ್ಲದೇ ಪಕ್ಷದತೀರ್ಮಾನಕ್ಕೆ ಬದ್ದನಾಗಿರುತ್ತೇನೆಎಂದರು.
ನಮ್ಮ ನಾಯಕರಾದ ಬೊಮ್ಮಾಯಿ ಹಾಗೂ ಜೋಷಿಯವರು ನನಗೆ 100 ಕ್ಕೆ 110 ರಷ್ಟುಟಿಕೇಟ ನನಗೆ ಕೊಡಿಸುವ ವಿಸ್ವಾಸವಿದೆಅಲ್ಲದೇನಮ್ಮ ಹಾಗೂ ಬೊಮ್ಮಾಯಿ ಮನೆತನದ ಸಂಬಂದ ಬಹಳ ಹಳೆಯ ಹಾಗೂ ಅನ್ಯೋನ್ಯತೆಯನ್ನು ಹೊಂದಿದೆಅಂದರೆ ಶಿಗ್ಗಾವಿ ಸಹಕಾರಿ ಬೀಷ್ಮ ಹೆಚ್.ಆರ್.ದುಂಡಿಗೌಡ್ರಅವರಿಗೆ ಈ ಹಿಂದೆ ಎಸ್.ಆರ್.ಬೊಮ್ಮಾಯಿಯವರುಈ ಕ್ಷೇತ್ರ ಬಿಟ್ಟುಕೊಟ್ಟುಅನುಕೂಲ ಮಾಡಿಕೊಟ್ಟಉದಾಹರಣೆ ನಮ್ಮ ಮನೆತನದ್ದಾಗಿದೆಎಂದರು.
ಈ ಸಂದರ್ಭದಲ್ಲಿಎಂ.ಎನ್.ವೇಂಕೋಜಿ, ತಿಪ್ಪಣ್ಣಾ ಸಾತಣ್ಣವರ, ಹನುಮರೆಡ್ಡಿ ನಡುವಿನಮನಿ, ಬಸವರಾಜ ನಾರಾಯಣಪುರ, ಚಂದ್ರುತಿಮ್ಮಾಪೂರ ಸೇರಿದಂತೆತಾಲೂಕಿನಯುವಕರ ಸಮೂಹ ಉಪಸ್ಥಿತರಿದ್ದರು.