ಕೂಡಲೇ ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಮನವಿ
ಮಹಾಲಿಂಗಪುರ 26: ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆ ನೀಡಬೇಕು ಎಂದು ತಾಲೂಕು ದಂಡಾಧಿಕಾರಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಮುಲ್ಲಾ ಸಮಾಜದವರು 105 ವಿಧಾನಸಭಾ ಮತಕ್ಷೇತ್ರಗಳಲ್ಲಿ ಮುಲ್ಲಾ ಸಮುದಾಯವಿದ್ದು.ಪ್ರತಿ ಮತಕ್ಷೇತ್ರಗಳಲ್ಲಿ 5,000 ದಿಂದ 8000 ರ ವರಗೆ ಮತದಾರರು ಇದ್ದಾರೆ . ಕರ್ನಾಟಕದಲ್ಲಿ 12 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ, ಈ ಸಮುದಾಯವು ಕಡು ಬಡತನದಿಂದ ಹಿಂದುಳಿದ ವರ್ಗದ ಸಮುದಾಯವಾಗಿದ್ದು ಆರ್ಥಿಕವಾಗಿ,ಶೈಕ್ಷಣಿಕವಾಗಿ, ಹಿಂದುಳಿದ ಸಮುದಾಯ, ಕಡು ಬಡತನದಲ್ಲಿ ದುಡಿದು ತಿನ್ನುವ ಸಮುದಾಯವಾಗಿದ್ದು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಅಸಹಾಯಕರಾಗಿದ್ದಾರೆ ಎಂದು ಮುಲ್ಲಾ ಸಮಾಜದ ಹಿರಿಯರು ಹೇಳಿದರು.ಪ್ರತಿ ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಮೊಹರಂ ತಿಂಗಳಲ್ಲಿ ಸೇವೆ ಮಾಡುವುದು, ಈ ಸಮಾಜದ ಕಾಯಕವಾಗಿದೆ ಆದ್ದರಿಂದ ಸರ್ಕಾರವು ಈ ಕೂಡಲೇ ಈ ಸಮುದಾಯದ ಬಗ್ಗೆ ಕಾಳಜಿ ವಹಿಸಿ ಕೂಡಲೇ ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದರು.ಮುಲ್ಲಾ ಸಮುದಾಯದ ಕುಟುಂಬಗಳಲ್ಲಿ ಶಿಕ್ಷಣ,ಸರ್ಕಾರಿ ನೌಕರಿ ವಂಚಿತರಾಗಿದ್ದು ಅವರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ, ಈ ಸಮಾಜದ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಸೈಫ್ ಅಲಿ ಮುಲ್ಲಾ,ನಬಿಸಾಬ್ ಮುಲ್ಲಾ, ಜಬಿಉಲ್ಲಾ ಮುಲ್ಲಾ,ಮೆಹಬೂಬ್ ಮುಲ್ಲಾ, ಸಿಕಂದರಸಾಬ್ ಮುಲ್ಲಾ,ಇನ್ನು ಹಲವಾರು ಮುಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು.