ಮಹಲಿಂಗಪುರ

ಆತಂಕ, ಕುತೂಹಲ ಕೆರಳಿಸಿದ ಅಪರೂಪದ ಹಾವು

ಆತಂಕ, ಕುತೂಹಲ ಕೆರಳಿಸಿದ ಅಪರೂಪದ ಹಾವು

ಮಹಾಲಿಂಗಪುರ ೦೫: ಢವಳೇಶ್ವರ ಗ್ರಾಮಕ್ಕೆ ತೆರಳುವ, ರಾಜ್ಯ ಹೆದ್ದಾರಿಯ ಪಕ್ಕ ನಗರದ ವೇ-ಬ್ರಿಜ್ ಹತ್ತಿರ ಸೋಮವಾರ ರಂದು ಬೆಳಗ್ಗೆ ಅಪರೂಪದ ಕಪ್ಪು-ಬಿಳಿ, ಕಂದು ಬಣ್ಣಗಳ ರೂಪದ ಹಾವೊಂದು ಸ್ಥಳೀಯ ನಿವಾಸಿಗಳಿಗೆ ಎರಡು ಘಂಟೆಗಳ ಕಾಲ ಆತಂಕ ಹಾಗೂ ಕುತೂಹಲ ಕೆರಳಿಸಿತು. 

ಕುತೂಹಲಕೊಳಗಾದ ಜನರು ಇಂತಹ ಹಾವನ್ನು ನಾವು ಎಂದೂ ಕಂಡಿಲ್ಲ, ಭಯವಾಗುತ್ತಿದೆ ಎನ್ನುತ್ತಿದ್ದರು. ಅದು ನಿಜವೂ ಕೂಡ ಏಕೆಂದರೆ ದೇಶದ 10 ವಿಷಕಾರಿ ಹಾವುಗಳ ಪೈಕಿ ಈ ರಸೆಲ್ ಹಾವು ಅತಿ ಅಪಾಯದ (ಹೀಮೋಟಾಕ್ಸಿನ್ ರಾಸಾಯನಿಕ) ವಿಷವನ್ನು ಹೊಂದಿ ಅಗ್ರ ಪಂಕ್ತಿಯಲ್ಲಿದೆ. 

ಇದರ ಕಡಿತಕ್ಕೆ ಒಳಗಾದ ವ್ಯಕ್ತಿಗಳ ಶರೀರದಲ್ಲಿ ನಿಧಾನಗತಿಯಿಂದ ವಿಷ  ಪಸರಿಸಿ ಮಾಂಸ ಖಂಡಗಳು ನಿಷ್ಕ್ರಿಯಗೊಳ್ಳುತ್ತವೆ. ಇದರ ಚಿಕಿತ್ಸೆಗೆ 1 ಲಕ್ಷದಿಂದ 5 ಲಕ್ಷಗಳವರೆಗೆ ವೆಚ್ಚವಾಗುತ್ತದೆ. ನಂತರ ಚಿಕಿತ್ಸೆ ಫಲಕಾರಿಯಾಗದೆಯೂ ಸಾವನ್ನಪ್ಪಿದ ಅನೇಕ ಉದಾಹರಣೆಗಳಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇವುಗಳು ಒಂದು ಬಾರಿಗೆ 40 ರಿಂದ 45 ಮರಿಗಳಿಗೆ ಜನ್ಮ ನೀಡುತ್ತವೆ. ಅಭಯಾರಣ್ಯ ಹಾಗೂ ಮರುಭೂಮಿಗಳಲ್ಲಿ ಹೆಚ್ಚು ಕಂಡು ಬರುವ ಇವುಗಳನ್ನು ಜಂಗಲ್ ಡ್ರ್ಯಾಗನ್ ಎಂದೂ ಕರೆಯುತ್ತಾರೆ. 

ಇದರ ವಿಷವನ್ನು ಹಾವು ಕಡಿತಕ್ಕೆ ಉತ್ಕೃಷ್ಟ  ಹಾಗೂ ದುಬಾರಿ ಬೆಲೆಯ ಪರಿಣಾಮಕಾರಿ ಔಷಧ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ ಎನ್ನುವ ಮಾಹಿತಿಯೂ ಇದೆ. ಇಂತಹ ಹಾವುಗಳನ್ನು ಕಂಡರೆ ನಿರ್ಲಕ್ಷಿಸದೆ ನಿಮ್ಮ ಸಮೀಪದ ಉರುಗ ತಜ್ಞರಿಗೆ ಮಾಹಿತಿ ನೀಡಿ ಹೆಚ್ಚಿನ ಸಾವು-ನೋವುಗಳಾಗುವುದನ್ನು ತಪ್ಪಿಸಿ.

ಸುದ್ದಿ ಓದಿ