ನಿರುದ್ಯೋಗದ ಬಿಕ್ಕಟ್ಟನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಲು ಮನವಿ
ಬಳ್ಳಾರಿ 12: ಇಂದು ಬಳ್ಳಾರಿಯಲ್ಲಿ ಅಖಿಲ ಭಾರತ ನಿರುದ್ಯೋಗಿ ಯುವ ಜನರ ಹೋರಾಟ ಸಮಿತಿಯಿಂದ ಭಾರತದಲ್ಲಿ ಯುವ ಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ವಿರೋಧಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸೆಂಟರ್ ಫಾರ್ ಮಾನಿಟರಿಂಗ್ಇಂಡಿಯನ್ ಎಕಾನಮಿ (ಅಒಋ) ಯಇತ್ತೀಚಿನ ವರದಿಯ ಪ್ರಕಾರಜೂನ್ 2024 ರಲ್ಲಿ ನಮ್ಮದೇಶದ ನಿರುದ್ಯೋಗದರವು ಶೇಕಡಾ 9.2 ಕ್ಕೆ ಏರಿದೆ. ಇದು ಮೇ 2024 ರಲ್ಲಿದ್ದ ಶೇಕಡಾ 7 ಕ್ಕಿಂತಆಘಾತಕಾರಿಯಾದಏರಿಕೆಯಾಗಿದೆ. ಅನೇಕ ಯುವಜನರು ಉದ್ಯೋಗಾವಕಾಶಗಳ ಹುಡುಕಾಟದಲ್ಲಿದೇಶದಾದ್ಯಂತ ಅನಿವಾರ್ಯವಾಗಿಅಲೆದಾಡುತ್ತಿದ್ದಾರೆ ಹಾಗೂ ಬಹುದೊಡ್ಡ ಭಾಗದಯುವಜನರುಉತ್ತಮವಾದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಹುಡುಕಾಟದಲ್ಲಿತಮ್ಮತಾಯ್ನೆಲ, ಬಂಧು ಬಳಗ ಮತ್ತು ಪ್ರೀತಿಪಾತ್ರರನ್ನು ಬಿಟ್ಟು ನಮ್ಮದೇಶವನ್ನುತೊರೆಯುತ್ತಿದ್ದಾರೆ. ವಲಸೆ ಕಾರ್ಮಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದರಿಂದ ಸಮಸ್ಯೆ ಮತ್ತುಷ್ಟು ಉಲ್ಬಣಗೊಳ್ಳುತ್ತಿದೆ.ಇದಲ್ಲದೆ, ಹತ್ತಾರು ವರ್ಷಗಳ ಸತತ ಪ್ರಯತ್ನಗಳ ನಂತರವೂ ಯು.ಪಿ.ಎಸ್.ಸಿ ಮತ್ತುರಾಜ್ಯ ಸೇವಾ ಆಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ನೀಡುವ ಸರ್ಕಾರಿಉದ್ಯೋಗವನ್ನು ಪಡೆಯಲಾಗದೆ ಹತಾಶರಾಗುತ್ತಿದ್ದಾರೆ. ಈ ನಿರುದ್ಯೋಗದ ಬಿಕ್ಕಟ್ಟು ನಮ್ಮಯುವಜನರ ಮಾನಸಿಕ ಆರೋಗ್ಯದ ಮೇಲೂ ಭಾರಿದುಷ್ಪರಿಣಾಮವನ್ನುಉಂಟುಮಾಡುತ್ತಿದೆ. ಪ್ರಪಂಚದಲ್ಲೇಅತ್ಯಧಿಕ ಸಂಖ್ಯೆಯಯುವಜನರನ್ನು ಹೊಂದಿರುವ ನಮ್ಮದೇಶದಲ್ಲಿಂದುಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿಮಾಡಿಕೊಳ್ಳುತ್ತಿಲ್ಲ. ಖಾಯಂ ಸ್ವರೂಪದ ಕೆಲಸಗಳಿಗೂ ಗುತ್ತಿಗೆಆಧಾರದಲ್ಲಿ ನೇಮಕಾತಿಗಳು ನಡೆಯುತ್ತಿವೆ. ಹೊಸ ಉದ್ಯೋಗಗಳ ಸೃಷ್ಟಿಯ ಮಾತಂತೂದೂರವೇ ಉಳಿದಿದೆ. ಇದರಿಂದಅಪಾರ ಪ್ರಮಾಣದಉದ್ಯೋಗಾಕಾಂಕ್ಷಿಯುವಜನತೆಆಕ್ರೋಶಗೊಂಡಿದ್ದಾರೆ.ನಿರುದ್ಯೋಗಿಯುವಜನರ ನೋವನ್ನು ನಿವಾರಿಸಲುತಾವುತಕ್ಷಣಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಉದ್ಯೋಗವು ಮೂಲಭೂತ ಹಕ್ಕು ಎಂದು ನಾವು ನಂಬುತ್ತೇವೆ ಮತ್ತು ಪ್ರತಿಯೊಬ್ಬ ನಾಗರಿಕರಿಗೂಗೌರವಾನ್ವಿತಜೀವನೋಪಾಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದಜವಾಬ್ದಾರಿಯಾಗಿದೆ. ಆದ್ದರಿಂದ ಈ ನಿರುದ್ಯೋಗಿಯುವಜನರ ಹಕ್ಕೊತ್ತಾಯಗಳನ್ನು ತಮ್ಮ ಗಮನಕ್ಕೆ ತರಲುಇಂದುದೇಶದಾದ್ಯಂತ ಅಖಿಲ ಭಾರತ ನಿರುದ್ಯೋಗಿಯುವಜನರ ಹೋರಾಟ ಸಮಿತಿ(ಎಐಯುವೈಎಸ್ಸಿ)ಯ ನೇತೃತ್ವದಲ್ಲಿ ನಿರುದ್ಯೋಗದ ವಿರುದ್ಧ ಅಖಿಲ ಭಾರತ ಪ್ರತಿಭಟನಾ ದಿನವನ್ನು ಆಚರಿಸಿ, ನಿರುದ್ಯೋಗದ ಈ ಬಿಕ್ಕಟ್ಟಿನ ನಿವಾರಣೆಗೆತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಗಳನ್ನು ಒತ್ತಾಯಿಸಲಾಯಿತು.
ಈ ಪ್ರತಿಭಟನೆಯಲ್ಲಿ, ಜಿಲ್ಲಾ ಸಂಚಾಲಕರುಗಳಾದ ಕೋಳೂರು ಪಂಪಾಪತಿ, ಜಗದೀಶ್ ನೇಮಕಲ್ ಹಾಗು ಭುವಪ್ಪ, ಠಾಕೂರ ನಾಯಕ್, ಮುನೀರ್ ಭಾಷ, ರೆವಣ್ಣ, ಅಶೋಕ ಇನ್ನಿತರಉದ್ಯೋಗಾಕಾಂಕ್ಷಿಯುವಕರು ಭಾಗವಹಿಸಿದ್ದರು.