ಹಗರಿಬೊಮ್ಮನಹಳ್ಳಿ

ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಮನವಿ

ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಮನವಿ

ಹಗರಿಬೊಮ್ಮನಹಳ್ಳಿ 06: ಬೇಡ ಜಂಗಮ ಸಮಾಜದ ಒಕ್ಕೂಟದ ಅಧ್ಯಕ್ಷರಾದ ಬಿಡಿ ಹಿರೇಮಠ ಮತ್ತು ಸಮಾಜದ ಮುಖಂಡರುಗಳನ್ನು ಕಾರಣವಿಲ್ಲದೆ ಬಂಧಿಸಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ನವಲಿ ಹಿರೇಮಠ ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.  

ಪಟ್ಟಣದ ತಹಸೀಲ್ದಾರ್ ಕಛೇರಿಬಳಿ ಬೇಡಜಂಗಮ ಯುವ ವೇದಿಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಬೇಡಜಂಗಮ ಸಮಾಜದ ಬಾಂಧವರಿಗೆ ಸಂವಿಧಾನದ ಪ್ರಕಾರ ಪರಿಶಿಷ್ಠ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಪ್ರತೀ ಬಾರಿ ಸರ್ಕಾರಗಳು ಪೊಳ್ಳು ಆಶ್ವಾಸನೆಯನ್ನು ನೀಡುತ್ತಾ ಸಮಾಜದ ಮೀಸಲಾತಿಯನ್ನು ನೀಡದೇ ಕಡೆಗಣಿಸುತ್ತಿದ್ದಾರೆ. ಬೇಡ ಜಂಗಮ ಎಂಬುದು ಸಂವಿಧಾನ ಬದ್ಧವಾಗಿ ಪರಿಶಿಷ್ಠ ಜಾತಿಗೆ ಸೇರಬೇಕಾದಂತಹ ಸಮಾಜವಾಗಿದೆ. ಇದರಿಂದ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅವಕಾಶಗಳು ಸಿಗುತ್ತವೆ ಆದರೆ ಸರ್ಕಾರ ಮೀಸಲಾತಿ ನೀಡದಿರುವುದರಿಂದ ಸೌಲಭ್ಯದಿಂದ ಸಮಾಜ ವಂಚಿತವಾಗಿದೆ. ಈ ಕೂಡಲೇ ಪರಿಶಿಷ್ಠ ಜಾತಿ ಪ್ರಮಾಣ ಪತ್ರವನ್ನು  ಬೇಡಜಂಗಮ ಸಮಾಜಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.  

ಸಮಾಜದ ಮನವಿ ಸ್ವೀಕರಿಸಿದ ಉಪತಹಸೀಲ್ದಾರ್ ಅನ್ನದಾನೇಶ್ವರ ಮಾತನಾಡಿ ಬೇಡಜಂಗಮ ಸಮಾಜದವರ ಈ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು.  

ಈ ಸಂದರ್ಭದಲ್ಲಿ ಹಾಲಶಂಕರ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿಗಳು, ಪುರಸಭೆ ಮಾಜಿ ಸದಸ್ಯ ಡಾ.ಎ.ಎಂ.ಎ.ಸುರೇಶ್‌ಕುಮಾರ್, ಸಮಾಜದ ಮುಖಂಡರಾದ ಜ್ಞಾನೇಶ್ವರಯ್ಯ, ಜಗದೀಶ, ಉಮಾಪತಿ, ಕೇದಾರ, ರಾಜು ಪಾಟೀಲ್, ವೀರೇಶ್ವರ ಸ್ವಾಮಿ, ಮಲ್ಲಿಕಾರ್ಜುನ, ಶರಣಯ್ಯ, ಸಿದ್ದೇಶ್ವರ ಸ್ವಾಮಿ, ಕೊಟ್ರಯ್ಯ, ಜಾತಯ್ಯ, ಸುಭಾಷ್ ಚಂದ್ರ ಶಾಸ್ತ್ರಿ, ಗುರುಬಸಯ್ಯ, ಹಂಪಯ್ಯ, ಅಜ್ಜಯ್ಯ, ಸಣ್ಣಬಸಯ್ಯ, ಷಣ್ಮುಖಯ್ಯ, ವೀರಭದ್ರಯ್ಯ, ಪಿ.ಎಂ.ನಾಗಯ್ಯ, ರೇವಣಯ್ಯ, ಪರಮೇಶ್ವರಯ್ಯ ಸೇರಿದಂತೆ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ