ಮಹಲಿಂಗಪುರ

ಮಹಾಲಿಂಗಪುರ ಪುರಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಭೆ

ಮಹಾಲಿಂಗಪುರ ಪುರಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಭೆ

ಮಹಾಲಿಂಗಪುರ 09:  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಭೆ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಬುಧವಾರ ಮುಂಜಾನೆ ಜರುಗಿತು. 

ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡ್‌ ಗಳ ಪೈಕಿ 40 ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈ ಸಭೆಯಲ್ಲಿ ಉಪಸ್ಥಿತರಿದ್ದು, ಪುರಸಭಾ ಅಧ್ಯಕ್ಷರು ಪ್ರತಿಯೊಬ್ಬರ ಕುಂದು ಕೊರತೆಗಳನ್ನು ಆಲಿಸಿ ಕೊರತೆ ಇರುವ ಸಹಾಯಕಿಯರ ನೇಮಕಾತಿಗೂ ಭರವಸೆ ನೀಡಿದರು.  

ಮಹಾಲಿಂಗಪುರ ಪಟ್ಟಣದ ಅಂಗನವಾಡಿಗಳು ನೀರು, ವಿದ್ಯುತ್ ಸಂಪರ್ಕವಿಲ್ಲದೆ ಕೆಲವು ಸ್ವಂತ ಕಟ್ಟಡ, ಕೆಲವು ಬಾಡಿಗೆ ಕಟ್ಟಡಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಸಿಥಿಲಗೊಂಡು ಮಳೆಯಿಂದ ಸೋರಿ, ಆವರಣ ತುಂಬಾ ನೀರು ನಿಂತು ಗಲೀಜಾಗುವುದು, ಹುಲ್ಲು ಬೆಳೆಯುವುದು ಮಕ್ಕಳಿಗೆ ಇರಸು- ಮುರುಸು ಉಂಟಾಗುತ್ತಿದೆ ಅಲ್ಲದೆ ಹುಳುಉಪ್ಪುಡಿಗಳ ಕಾಟವೂ ಇದೆ ಇವುಗಳಿಂದ ಮುಕ್ತಿ ದೊರೆಯಬೇಕೆಂದು ಸಭೆಯಲ್ಲಿ ಕಾರ್ಯಕರ್ತೆಯರು ತಮ್ಮ ಅಳಲನ್ನು ತೋಡಿಕೊಂಡರು. 

ಪಟ್ಟಣದ ಕೆಲವು ವಾರ್ಡಗಳಲ್ಲಿ ಸ್ವಂತ ಕಟ್ಟಡಗಳು ಇಲ್ಲದೆ ಇರುವ ಕಡೆಗಳಲ್ಲಿ ಪುರಸಭೆಯ ಜಾಗೆಗಳನ್ನು ಪರಿಶೋಧಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸಿಡಿಪಿಓ ಗಮನಕ್ಕೆ ತರಲಾಗುವುದು ಮತ್ತು ಅಂಗನವಾಡಿಗಳಿಗೆ ಪುರಸಭೆಯಿಂದ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್ ಸಂಪರ್ಕವನ್ನು ಒದಗಿಸುತ್ತೇವೆ ಎಂದು ಪುರಸಭಾ ಅಧ್ಯಕ್ಷರು ಸಭೆಗೆ ತಿಳಿಸಿದರು. 

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲರಜಾಕ ಭಾಗವಾನ, ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮತ್ತು ಸಂಯೋಜನಾಧಿಕಾರಿ ಸಿ ಎಸ್‌. ಮಠಪತಿ ಇದ್ದರು. 

ಮಹಾಲಿಂಗಪುರ ಪಟ್ಟಣದ ಅಂಗನವಾಡಿಗಳಿಂದ ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಹಿಂದೆ ನೀವು ಏನು ಮಾಡಿದ್ದೀರಿ ನಾನು ನೋಡುವುದಿಲ್ಲ.ನನ್ನ ಅಧಿಕಾರ ಅವಧಿಯಲ್ಲಿ ಏನಾದರೂ ಗೋಲ್ಮಾಲ್ ನಡೆದರೆ ತಾವು ನೇರವಾಗಿ ಅಮಾನತುಗೊಳ್ಳುತ್ತೀರಿ. 

* ಯಲ್ಲನ್ನಗೌಡ ಪಾಟೀಲ್ ಪುರಸಭಾಧ್ಯಕ್ಷರು ಮಹಾಲಿಂಗಪುರ. 

ಮಹಾಲಿಂಗಪುರ ಪಟ್ಟಣದಲ್ಲಿ ಹಲವಾರು ಕಡೆಗಳಲ್ಲಿ ಅಂಗನವಾಡಿ ಕಟ್ಟಡಗಳು ದುರಸ್ತಿ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಕಾಯುತ್ತಿವೆ. ಸ್ಥಳೀಯ ಪುರಸಭೆ ಅಧ್ಯಕ್ಷರು ಮತ್ತು ನಾವು ಸೇರಿ ಎಲ್ಲೆಲ್ಲಿ ಕುಂದು ಕೊರತೆಗಳಿವೆ ಎಂಬುವುದನ್ನು ಪರೀಶೀಲನೆ ನಡೆಸಿ ಯೋಗ್ಯ ಕ್ರಮ ಕೈಗೊಳ್ಳುತ್ತೇವೆ ಮತ್ತು ಇನ್ನೂಳಿದಂತೆ ಪುರಸಭೆ ತನ್ನ ಸ್ವಂತ ಜಾಗೆಯ ಚಕ ಬಂದಿ ಉತಾರ ಒದಗಿಸಿದಲ್ಲಿ ಶೀಘ್ರದಲ್ಲಿಯೇ ಅಂಗನವಾಡಿ ನೂತನ ಕಟ್ಟಡಗಳ ಮರು ನಿರ್ಮಾಣ ಸಹ ಮಾಡುತ್ತೇವೆ. 

* ಕಾಶಿಬಾಯಿ ಕೋರೆಗೋಳ, ಸಿಡಿಪಿಓ. 


ಸುದ್ದಿ ಓದಿ