ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವ್ಯಕ್ತಿ ದುರ್ಮರಣ
ಬೆಳಗಾವಿ, 23: ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ವ್ಯಕ್ತಿ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಘಟನೆ ಮಂಗಳವಾರ ನಡೆದಿದೆ.
ಹನುಮಾನ ನಗರ ವೃತ್ತದ ಇಂಡಿಯನ್ ಸ್ಟೀಲ್-ಸಿಮೆಂಟ್ ಅಂಗಡಿ ಎದುರಿನಲ್ಲಿ ಈ ದುರ್ಘಟನೆ ನಡೆದಿದೆ. ತಿರುಪತಿ ಟ್ರಾವೆಲ್ ಚಾಲಕನಾಗಿರುವ KA 24, HN 6068 ವಾಹನದಲ್ಲಿ ಬಂದ ಬೈಲಹೊಂಗಲ ತಾಲೂಕಿನ ಜಕನಾಯಕನಕೊಪ್ಪ ಗ್ರಾಮದ ಫಕೀರ್ಪ(40) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎಪಿಎಂಸಿ ಪೊಲೀಸ್‌ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಟ್ರಾಫಿಕ ಪೊಲೀಸ್ ಸಿಬ್ಬಂದಿ ಹಾಜರಿದ್ದು ಪ್ರಾಥಮಿಕ ತನಿಖೆ ನಡೆಸಿದರು.