ಬ್ಯಾಡ್ಗಿ

ತಾಲೂಕಿನಲ್ಲಿ ಪ್ರತಕ್ಷೆವಾದ ಒಂಟಿ ಸಲಗ

ತಾಲೂಕಿನಲ್ಲಿ ಪ್ರತಕ್ಷೆವಾದ ಒಂಟಿ ಸಲಗ

              ಬ್ಯಾಡಗಿ 23 :  ತಾಲೂಕಿನ ಸುತ್ತಮುತ್ತಲಿನ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ರೈತರಲ್ಲಿ ಹಾಗೂ ಜನರಲ್ಲಿ ಆತಂಕ ಸೃಷ್ಟಿಸಿದೆ ಶನಿವಾರ ಹಿರೇಅಣಜಿ ಗ್ರಾಮದ ನೀಲಗಿರಿ ತೋಪಿನಲ್ಲಿ ಪ್ರತ್ಯಕ್ಷಗೊಂಡಿದ್ದು ಅಲ್ಲಿಂದ ರವಿವಾರ ಮೂಟೆಬೆನ್ನೂರು ,ತಿಪಲಾಪುರ, ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಮೋಟೆಬೆನ್ನೂರು ಗ್ರಾಮದ ರೈಲ್ವೆ ಹಳಿಗೆ ಹೊದ್ದಿಕೊಂಡಿರುವ ಹೊಲದಲ್ಲಿ ಆನೆ ಹೋಗಿರುವ ಹೆಜ್ಜೆ ಗುರುತುಗಳು ಕಂಡುಬಂದಿದ್ದು ಶೇಂಗಾ ಹೊಲದಲ್ಲಿ ಆನೆ ಹೆಜ್ಜೆ ಗುರುತುಗಳು ಕಂಡುಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಹೆಜ್ಜೆ ಗುರುತುಗಳನ್ನು ಪರೀಶೀಲಿಸಿ, ಆನೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ

            ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಹಾಗೂ ಪಂಚಾಯತಿಯವರು  ರೈತರಿಗೆ ರಾತ್ರಿ ವೇಳೆ ಹೊಲಕ್ಕೆ ಹೋಗದ ಹಾಗೆ ಡಂಗೂರ ಸಾರಿಸಿದ್ದಾರೆ . ಈಗಾಗಲೇ ಆನೆ ತಾಲೂಕಿನಲ್ಲಿ ಬೀಡು ಬಿಟ್ಟಿರುವುದು ಕಂಡುಬದಿದ್ದು ಮೋಟೆಬೆನ್ನೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಇರಬಹುದು ಎಂದು ಶಂಕಿಸಲಾಗಿದೆ ಆನೆ ಸರೆ  ಹಿಡಿಯಲು ಸಾಲುಮರದ ತಿಮ್ಮಕ್ಕನ ಉದ್ಯಾನವನಕ್ಕೆ ಶಿವಮೊಗ್ಗದ ಸಕ್ಕರೆ ಬೈಲ ಉದ್ಯಾನವನದಿಂದ ಅರಣ್ಯ  ಇಲಾಖೆಯಿಂದ ಆನೆಗಳನ್ನು ಕರೆತರಲಾಗಿದ್ದು ನಾಳೆ ದಿನ ಡ್ರೋನ್ ಮೂಲಕ ಆನೆ ಇರುವ ಸ್ಥಳವನ್ನು ಪತ್ತೆ ಹಚ್ಚಿ ಸಲಗವನ್ನು ಸೇರೆ ಹಿಡಿಯಲಾಗುವುದು ಎಂದು ತಾಲೂಕು ಅರಣ್ಯ ಅಧಿಕಾರಿ ಲೋಕೇಶ ಚೌವ್ಹಾಣ್ ತಿಳಿಸಿದ್ದಾರೆ. 


ಸುದ್ದಿ ಓದಿ