ಫ್ರ್ಯಾಂಕ್ ಶಾಲೆಯಲ್ಲಿ ಅದ್ದೂರಿ ಶ್ರೀಕೃಷ್ಣ ಜಯಂತಿಯ ಆಚರಣೆ
ಬಳ್ಳಾರಿ 26: ಇಲ್ಲಿನ ಬೊಮ್ಮನಾಳ್ ರಸ್ತೆಯಲ್ಲಿರುವ ಫ್ರ್ಯಾಂಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಪೋಷಕರು ತಮ್ಮ ಮಕ್ಕಳಿಗೆ ಶ್ರೀಕೃಷ್ಣ, ರಾಧೆ, ಗೋಪಿಕೆಯರು, ವಸುದೇವ ಹಾಗೂ ದೇವಕಿಯರ ವೇಷದಲ್ಲಿ ಶೃಂಗರಿಸಿ ದ್ವಾಪರ ಯುಗದ ನಂದಗೋಕುಲವನ್ನು ನೆನಪಿಸುವಂತೆ ಸುಂದರ ಅನುಭೂತಿ ಸ್ಫುರಿಸುವಂತಹ ಮೆರುಗು ನೀಡಿದರು. ಈ ವೇಳೆ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಬಿ.ಪದ್ಮಾವತಿ ಅವರು, ಶ್ರೀಕೃಷ್ಣ ಹುಟ್ಟುತ್ತಲೇ ಅನೇಕ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಜನನವಾಗುತ್ತಿದ್ದಂತೆ ಹೆತ್ತವಳಿಂದ ದೂರವಾಗಬೇಕಾಯಿತು. ಜನಿತದ ಸಮಯದಲ್ಲೇ ಶ್ರೀಕೃಷ್ಣನನ್ನು ಹತ್ಯೆ ಮಾಡಲು ಅವರ ಸ್ವಂತ ಸೋದರ ಮಾವ ಕಂಸ ಸಂಚು ರೂಪಿಸಿದ್ದ. ಹುಡುಗನಾಗಿದ್ದಾಗ ರಾಕ್ಷಸರು ಪೂತನಿ, ಜಟಾಯು, ಎತ್ತು, ಹೀಗೆ ನಾನಾ ಬಗೆಯ ವೇಷ ಧರಿಸಿ ರಾಕ್ಷಸರು ಕೊಲ್ಲಲು ಯತ್ನಿಸಿದ್ದರು.
ಯೌವನಾವಸ್ಥೆಗೆ ಬಂದಾಗ ಗೋಪಿಕೆಯರೊಂದಿಗೆ ವನದಲ್ಲಿ ಕಾಲ ಕಳೆಯುತ್ತ ಗೋಪಾಲನಾಗಿದ್ದ. ಬಳಿಕ ಪಾಂಡವರ ರಕ್ಷಣೆಗೆ ನಿಂತಿದ್ದ ಶ್ರೀಕೃಷ್ಣ ವಿನಾಕಾರಣ ಕೌರವರವರನ್ನು ಎದುರು ಕಟ್ಟಿಕೊಳ್ಳಬೇಕಾಯಿತು. ಕೌಟುಂಬಿಕ ಹಾಗೂ ಸಾಮಾಜಿಕ ಸಂಘಟನೆಗೆ ಮುಂದಾಗಿದ್ದ ಶ್ರೀಕೃಷ್ಣನನ್ನು ಕೌರವರು ಒಪ್ಪುತ್ತಿರಲಿಲ್ಲ. ಕೃಷ್ಣನ ಆಲೋಚನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರು. ಪಾಂಡವರ ಪಕ್ಷಪಾತಿ ಎಂಬ ಆಕ್ಷೇಪಣೆಗೊಳಗಾಗಿದ್ದ ಶ್ರೀಕೃಷ್ಣ ಮಹಾಭಾರತದ ಯುದ್ಧದ ಸಮಯದಲ್ಲಿ ಕೌರವರು ಮತ್ತು ಪಾಂಡವರಿಗೆ ನೀತಿ ಬೋಧನೆ ಮಾಡಿದ. ಅದು ಇಂದಿಗೂ ಸಾರ್ವತ್ರಿಕವಾಗಿದೆ. ಇಡೀ ಜಗತ್ತಿನಲ್ಲಿಯೇ ಅತ್ಯಂತ ಅದ್ಭುತವಾದ ಗೀತೆ ಬೋಧಿಸಿದ ಶ್ರೀಕೃಷ್ಣ ಪ್ರತಿಯೊಬ್ಬರಲ್ಲೂ, ಕಣ್ಣಿಗೆ ಕಾಣುವ ಪ್ರತಿಯೊಂದು ಕಣಕಣದಲ್ಲಿಯೂ ಇದ್ದಾನೆ. ಹರಿದಾಸರು ಕೃಷ್ಣನನ್ನು ಬಗೆ ಬಗೆಯಾಗಿ ಕೊಂಡಾಡಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಕೀರ್ತನೆಗಳು, ಭಕ್ತಿಗೀತೆಗಳು ಕೃಷ್ಣನಿಗಾಗಿ ರಚಿಸಿದ್ದಾರೆ. ಇಂದು ಕೃಷ್ಣನ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಿಸುತ್ತಿರುವುದಕ್ಕೆ ನಿಜಕ್ಕೂ ಸಂಭ್ರಮ ಮತ್ತು ಸಂತೋಷವಾಗಿದೆ ಎಂದರು. ಫ್ರ್ಯಾಂಕ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಎನ್.ಲತಾ, ಬಿ.ಉಮಾದೇವಿ, ವಜರುನ್ನೀಸಾ, ಲಲಿತಾ, ಆಯಿಸಾಮ್ರೀನ್ ಮತ್ತು ಬಿ.ಶ್ರೀನಿವಾಸುಲು ಅವರು ಬೆಳಿಗ್ಗೆ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರೀಕೃಷ್ಣನ ಬಾಲ್ಯ, ಯೌವನ ಹಾಗೂ ಭಾಗವತದಲ್ಲಿ ಶ್ರೀಕೃಷ್ಣನು ಬೋಧಿಸಿದ ಸಂದೇಶಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಶ್ರೀಕೃಷ್ಣನ ವಿವಿಧ ವೇಷ ಭೂಷಣಗಳ ಪ್ರದರ್ಶನ, ್ಠ್ಣದ್ಠ್ಲಿೂೃ್ತಿೂ ಕಾರ್ಯಕ್ರಮಗಳು ಜರುಗಿದವು. ಮಕ್ಕಳು, ಪೋಷಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.