ಸಿಂದವಾಳ ಕ್ರಾಸ್ ಬಳಿ ಕೂಲಿಕಾರರ ವಾಹನ ಪಲ್ಟಿ ಓರ್ವ ಸಾವು
ಬಳ್ಳಾರಿ 08: ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನವು ತಾಲೂಕಿನ ಸಿಂದವಾಳ ಕ್ರಾಸ್ ಬಳಿ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೋಕಾ ಗ್ರಾಮದ 16 ವರ್ಷದ ರವಿ ಎನ್ನುವ ಬಾಲಕ ಸಾವನ್ನಪ್ಪಿದ್ದಾನೆ. 15 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದಯ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದೆ.ಸಿಂಧುವಾಳ ಗ್ರಾಮದಿಂದ ಆಂದ್ರದ ಆಲೂರಿನ ಕಡೆ ಕೂಲಿಕಾರರ ವಾಹನ ಹೊರಟಿತ್ತು ಟೈರ್ ಬ್ಲಾಸ್ಟ್ ಆಗಿ ವಾಹನ ಪಲ್ಟಿಯಾಗಿದೆ.ಮಕ್ಕಳ ಸಮೇತ ಕೂಲಿ ಕಾರ್ಮಿಕರು ಅದರಲ್ಲಿದ್ದರು. ವಾಹನ ಪಲ್ಟಿಯಾಗುತ್ತಲೇ ಅದರಲ್ಲಿ ಇದ್ದವರು. ಊಟದ ಬಾಕ್ಸ್ ಗಳು, ಮಕ್ಕಳು ಎಲ್ಲೆಂದರಲ್ಲಿ ಬಿದ್ದು ಗಾಯಗಳಿಂದ ನರಳಾಡುತ್ತಿದ್ದರು.ಮೋಕಾ ಪೊಲೀಸರು ಧಾವಿಸು ಗಾಯಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.