ಬಳ್ಳಾರಿ

ಶ್ರಾವಣ ಮಾಸದ ಗಣಿನಾಡಲ್ಲಿ 4 ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಬೃಹತ್ ರಾ​‍್ಯಲಿ

ಶ್ರಾವಣ ಮಾಸದ ಗಣಿನಾಡಲ್ಲಿ 4 ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಬೃಹತ್ ರಾ​‍್ಯಲಿ

ಬಳ್ಳಾರಿ 25: ನಗರದಲ್ಲಿ ಶ್ರೀಹನುಮ ಭಕ್ತರ ಬೃಹತ್ ಬೈಕ್ ರ್ಯಾಲಿ ನಗರದಲ್ಲಿ ಶನಿವಾರ ಸಂಜೆ ಅತ್ಯಂತ ವಿಜೃಂಭಣೆ, ವೈಭವದಿಂದ ನೆರವೇರಿತು. ಸುಮಾರು 4 ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಹನುಮ ಭಕ್ತರು ರ್ಯಾಲಿಯಲ್ಲಿ ಭಾಗವಹಿಸಿ ಗಮನಸೆಳೆದರು.  

ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಭಕ್ತಿಯಿಂದ ಘೋಷಣೆಗಳನ್ನು ಕೂಗುವ ಮೂಲಕ ಹನುಮ ಭಕ್ತರು ಭಕ್ತಿ ಸಮರ​‍್ಿಸಿದರು. ಇದಕ್ಕೂ ಮುನ್ನ ನಗರದ ಮೊಕಾ ರಸ್ತೆಯ ಕೆಇಬಿ ಸರ್ಕಲ್‌ನಲ್ಲಿ ಜಮಾಯಿಸಿದ ಸಾವಿರಾರು ಭಕ್ತರು, ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎನ್ನುವ ಘೋಷಣೆ ಕೂಗಿ ಗಮನಸೆಳೆದರು. ಎಲ್ಲಿ ನೋಡಿದರೂ ಶ್ರೀಹನುಮನ ಬಾವುಟ ರಾರಾಜಿಸಿದವು. ನಂಬಿದರೆ ಕೈ ಬಿಡೋಲ್ಲ: ರ್ಯಾಲಿಗೂ  ಮುನ್ನ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಶ್ರೀಹನುಮನ ನಂಬಿದರೆ ಎಲ್ಲ ತಾಪತ್ರೆಯಗಳು ದೂರವಾಗಲಿವೆ. ಹನುಮನ ಶಕ್ತಿ ಅಂತಹದ್ದು, ನಿತ್ಯ ಹನುಮನ ನೆನೆದು ಸ್ಮರಿಸಿದರೆ, ಮಂತ್ರಗಳನ್ನು ಪಠಿಸಿದರೆ ಸಕಲ ಕಷ್ಟಗಳು ನಿವರಣೆಯಾಗಲಿವೆ.  

ಎಲ್ಲರೂ ಒಗ್ಗಟ್ಟಾದರೆ ಹಿಂದುತ್ವ ಉಳಿಯಲಿದೆ. ಶ್ರಾವಣ ಮಾಸದ 3ನೇ ಶನಿವಾರ ಹಿನ್ನೆಲೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀಹನುಮನ ದೇಗುಲಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದಿದ್ದು, ಸಕಲ ಕಷ್ಟಗಳು ನಿವಾರಣೆಯಾಗಲಿವೆ. ಎದುರಾಗುವ ಸಮಸ್ಯೆಗಳು ದೂರವಾಗಲಿವೆ. ಮರೂರು ಶ್ರೀಆಂಜನೇಯ ಸ್ವಾಮಿಯ 9ನೇ ವರ್ಷದ ಬೈಕ್ ರ್ಯಾಲಿಯಲ್ಲಿ ಸೇರಿದ ಹನುಮ ಭಕ್ತರನ್ನು ಕಂಡು ಅತ್ಯಂತ ಸಂತಸ ಮೂಡಿಸಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಭಕ್ತರು ಬರಿಗಾಲಲ್ಲೇ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿರುವುದನ್ನು ನೋಡಿ ಅತ್ಯಂತ ಸಂತಸ ಮೂಡಿಸಿದೆ, ಶ್ರೀಹನುಮಂತ ದೇವರು ಎಲ್ಲರನ್ನೂ ಕಾಪಾಡಲಿ, ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುವೆ ಎಂದರು.  

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಮಾತನಾಡಿ, ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎನ್ನುವ ಮಂತ್ರದಲ್ಲಿ ಶಕ್ತಿಯಿದೆ, ನಿತ್ಯ ಶ್ರೀ ಹನುಮನ ನೆನೆದರೆ ಸಕಲ ಕಷ್ಟಗಳು ನಿವಾರಣೆಯಾಗಲಿವೆ, ಇಂದು ನಡೆಯಲಿರುವ ಈ ಬೈಕ್ ರ್ಯಾಲಿ ಹೊಸ ಇತಿಹಾಸ ಸೃಷ್ಟಿಸಿದೆ. ನೀರೀಕ್ಷೆಗೂ ಮೀರಿ ಹನುಮ ಭಕ್ತರು ಭಾಗವಹಿಸಿದ್ದು, ಅತ್ಯಂತ ಸಂತಸ ಮೂಡಿಸಿದೆ ಎಂದರು. ಬೈಕ್ ರಾಲಿ: ನಗರದ ಕೆಇಬಿ ಸರ್ಕಲ್ ನಿಂದ ಪ್ರಾರಂಭವಾದ ಶ್ರೀ ಹನುಮ ಭಕ್ತರ ಬೈಕ್ ರ್ಯಾಲಿ, ಸಂಗಮ ಸರ್ಕಲ್, ಪವನ್ ಹೋಟೆಲ್, ಮಿಲ್ಲರ್ ಪೇಟೆ, ಗಂಗಪ್ಪ ಜಿನ್, ಬೆಂಗಳೂರು ರಸ್ತೆ ಮೂಲಕ ಮೋತಿ ವೃತ್ತ, ಏಳು ಮಕ್ಕಳ ತಾಯಮ್ಮ ಗುಡಿ, ಕೌಲ್ ಬಜಾರ್ ಸ್ಟೇಶನ್, ಟ್ರಾಮೆಕರ್ ಸೆಂಟರ್, ಸುಧಾ ಕ್ರಾಸ್, ಶ್ರೀ ಕುಮಾರ್ ಸ್ವಾಮಿ ದೇವಾಲಯ, ಎಸ್ಪಿ ಸರ್ಕಲ್ ಮೂಲಕ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಾಲಯ ತಲುಪಿತು.  

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಚೇತನ ವೇಮಣ್ಣ, ಹನುಮಂತ ಗುಡಿಗಂಟೆ, ಹನುಮಂತಪ್ಪ, ಶ್ರೀನಿವಾಸ್ ಮೊತ್ಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಿನಳ್ಳಿ ತಾಯಣ್ಣ, ಮುಖಂಡರಾದ ವೀರಶೇಖರ್ ರೆಡ್ಡಿ, ವಿಎಚ್ ಪೀ ಅಶೋಕ್, ಹಿಂದೂ ಜಾಗರಣ ವೇದಿಕೆ ಶ್ರೀರಾಮ್,  ಡಾ.ಮಹಿಪಾಲ, ಸಿದ್ದೇಶ್ ಉಪ್ಪಾರ್, ರಾಘವೇಂದ್ರ ಯಾದವ್,  ಗಣಪಾಲ್ ಐನಾಥ್ ರೆಡ್ಡಿ, ಉಜ್ವಲ್, ಲಕ್ಷ್ಮಿ ಕಾಂತ್ ರೆಡ್ಡಿ, ಪೋಲಾ ರಾಧಾ ಕೃಷ್ಣ, ನ್ಯಾಯವಾದಿ ವಿಜಯಲಕ್ಷ್ಮಿ ಸೇರಿದಂತೆ ನೂರಾರು ಹನುಮ ಭಕ್ತರು ಬಿಜೆಪಿ ಮುಖಂಡರು ಕಾರ್ಯಕರ್ತರು ಆಗಮಿಸಿದ್ದರು. 


ಸುದ್ದಿ ಓದಿ