ಇಂದು ಮಹಾಲಿಂಗಪುರ ಪಟ್ಟಣದಲ್ಲಿ ಅದ್ಧೂರಿಯ ನೃತ್ಯ ವೈಭವ ಕಾರ್ಯಕ್ರಮ
ಮಹಾಲಿಂಗಪುರ: ಪಟ್ಟಣದ ಬಸವ ನಗರದ ಸಿ ಕೆ. ಚಿಂಚಲಿ ಶಾಲಾ ಆವರಣದಲ್ಲಿ ದ್ವಿತೀಯ ಬಾರಿಗೆ ಯಂಗ್ ಸ್ಟಾರ್ಸ್ ವತಿಯಿಂದ ನ.25ರಂದು ಶನಿವಾರ ಕನ್ನಡ ರಾಜ್ಯೋತ್ಸವ ಮತ್ತು ದಿ. ಡಾ. ಪುನೀತ್ ರಾಜಕುಮಾರ್ ಸ್ಮರಣಾರ್ಥ ನೃತ್ಯ ವೈಭವ ಏರಿ್ಡಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಗುರುವಾರ ಸಂಜೆ ನಡೆದ ಪತ್ರಿಕಾ ಸಭೆಯಲ್ಲಿ ಆಯೋಜಕರು ವಿವರಣೆ ನೀಡುತ್ತಾ ಭವ್ಯ ವೇದಿಕೆ ಮೇಲೆ ಗ್ರುಪ್ ಮತ್ತು ಸೋಲೋ ನೃತ್ಯಗಳು ನಡೆಯಲಿವೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಮನಿಪ್ರ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ಶ್ರೀ ರಾಜೇಂದ್ರ ಮಹಾಸ್ವಾಮಿಗಳು ಅಲಂಕರಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ ಕೆ.ಚಿಂಚಲಿ ಶಾಲೆಯ ಅಧ್ಯಕ್ಷೆ ಮಹಾನಂದಾ ಚಿಂಚಲಿ ವಹಿಸಿ, ಉದ್ಘಾಟಕರಾಗಿ ತೇರದಾಳ ಮತ ಕ್ಷೇತ್ರದ ಸಿದ್ದು ಸವದಿ, ನಿರಾಣಿ ಸಮೂಹದ ಸಂಗಮೇಶ ನಿರಾಣಿ, ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ, ನೇತ್ರ ತಜ್ಞ ಡಾ.ಪದ್ಮಜಿತ ನಾಡಗೌಡ ಪಾಟೀಲ್, ರಬಕವಿ ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಷಪ್ಪನ್ನವರ, ದಾನಿಗೊಂಡ ಶಿಕ್ಷಣ ಸಮೂಹದ ಡಾ.ಮಹಾವೀರ ದಾನಿಗೊಂಡ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿರ್ದೇಶಕರು ಡಿಸಿಸಿ ಬ್ಯಾಂಕ್ ಬಸನಗೌಡ ಪಾಟೀಲ್, ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ್, ಯುವ ಧುರೀಣ ಮಹಾಲಿಂಗಪ್ಪ ಕುಳ್ಳೋಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಸಂತೋಷ ಓಸ್ವಾಲ್, ಬಾಲಕೃಷ್ಣ ಮಾಳವದೆ, ಠಾಣಾಧಿಕಾರಿ ಪ್ರವೀಣ ಬಿಳಗಿ, ಗ್ರಾಪಂ ಅಧ್ಯಕ್ಷ ಪಿಯೂಷ್ ಓಸ್ವಾಲ್ ಇನ್ನೂ ಮುಂತಾದವರು ಉಪಸ್ಥಿತರಿರುವರು.
ಗ್ರುಪ್ ಡ್ಯಾನ್ಸ್ ಪ್ರಥಮ ಬಹುಮಾನ 50ಸಾವಿರ, ದ್ವಿತೀಯ 25ಸಾವಿರ, ತೃತೀಯ 15ಸಾವಿರ ಮತ್ತು ಸೋಲೋ ಡ್ಯಾನ್ಸ್ ಪ್ರಥಮ 10ಸಾವಿರ, ದ್ವಿತೀಯ 5ಸಾವಿರ, ತೃತೀಯ 3ಸಾವಿರ ಅಲ್ಲದೆ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಇದೆ ವೇದಿಕೆ ಮೇಲೆ ಕೇಂದ್ರದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶ್ರೀಮತಿ ಸಪನಾ ಅನಿಗೋಳ ಅವರನ್ನು ಸತ್ಕರಿಸಲಾಗುವುದು.ಸಿ ಕೆ ಚಿಂಚಲಿ ಶಾಲಾ ಪ್ರಮುಖರು ಮಹಾಂತೇಶ ಚಿಂಚಲಿ ಆಯೋಜಕರಾದ ಮಹಾಲಿಂಗ ಬಿರಾದಾರ, ಆದರ್ಶ ಮುಕುಂದ, ಸಚಿನ ಕಲ್ಮಡಿ, ವಿನಾಯಕ ಗುಂಜಿಗಾವಿ, ಅಭಿಷೇಕ್ ಲಮಾಣಿ, ಪವನ ಟಿರ್ಕಿ, ಸೈಯದ ಅವಟಿ, ಕಿರಣ ಕಡಬಲ್ಲವರ ಮತ್ತು ಬಸವನಗರ, ಆರ್ ಕೆ ನಗರದ ಯುವಕರಾದಿಯಾಗಿ ಇನ್ನೂ ಮುಂತಾದವರಿದ್ದರು.
ಹೆಚ್ಚಿನ ಮಾಹಿತಿಗಾಗಿ 7022200326, 9008752010, 8884161248, 9902898073 ಈ ಮೋಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿಬಹುದು.