ಸಂಕೇಶ್ವರದಲ್ಲಿ ದಿ. 4ರಂದು ಅದ್ದೂರಿಯ ಕನ್ನಡ ಹಬ್ಬ ಆಚರಣೆ : ಬೆಳಗಾವಿ ಬಳಿಕ ಮೊಳಗಲಿದೆ ಕನ್ನಡದ ಕಹಳೆ
ಸಂಕೇಶ್ವರ : ಜಿಲ್ಲೆಯಲ್ಲಿ ಬೆಳಗಾವಿ ಬಳಿಕ ಅತಿ ಅದ್ದೂರಿಯಾಗಿ ಕನ್ನಡ ಹಬ್ಬವನ್ನು ಬರುವ ಇದೇ 4ರಂದು ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಪ್ರಮೋದ ಹೊಸಮನಿ ಇಂದಿಲ್ಲಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಮಧ್ಯಾಹ್ನ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಬಳಿಕ ಅದ್ದೂರಿಯಾಗಿ ಕನ್ನಡ ಹಬ್ಬವನ್ನು ನ. 4ರಂದು ಆಚರಣೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ.
ದಿ. 4ರಂದು ನಿಡಸೋಸಿಯ ಶಿವಲಿಂಗೇಶ್ವರ ಶ್ರೀಗಳು, ಸಂಕೇಶ್ವರದ ಶಂಕರಲಿಂಗ ಮಠದ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಶ್ರೀಗಳು ಮತ್ತು ನಿಡಸೋಸಿಯ ನಿಜಲಿಂಗೇಶ್ವರ ಶ್ರೀಗಳ ಸಾನಿದ್ಯದಲ್ಲಿ ಗಾಂಧಿ ಚೌಕದಲ್ಲಿನ ಕಿತ್ತೂರು ಚನ್ನಮ್ಮ ವೇದಿಕೆ ಬಳಿ ಬೆಳಿಗ್ಗೆ 8.30 ಗಂಟೆಗೆ ಅಪ್ಪಾಸಾಹೇಬ ಶಿರಕೋಳಿ ಅವರಿಂದ ಕನ್ನಡ ಧ್ವಜಾರೋಹಣ, ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ ಅವರಿಂದ ಭುವನೇಶ್ವರಿ ದೇವಿಯ ಭಾವಚಿತ್ರ ಪೂಜೆ, ಭುವನೇಶ್ವರಿ ಮೂರ್ತಿಯನ್ನು ನವೀನ ಗಂಗರೆಡ್ಡಿ, ಭವ್ಯ ರೂಪಕಗಳ ಮೆರವಣಿಗೆ ಉದ್ಘಾನೆಯನ್ನು ನಂದು ಮುಡಸಿ, ವಾದ್ಯಮೇಳಗಳ ಉದ್ಘಾಟನೆಯನ್ನು ಯಾಯಾಖಾನ ನಧಾಪ ಅವರು ಚನ್ನಮ್ಮನ ಭಾವಚಿತ್ರ ಪೂಜೆಯನ್ನು ಡಾ. ಜಯಪ್ರಕಾಶ್ ಕರಜಗಿ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆಯನ್ನು ಅಮರ ನಲವಡೆ, ಮೆರವಣಿಗೆಗೆ ಸಚಿನ್ ಭೋಪಳೆ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.
ಅಲ್ಲದೆ ಸಂಜೆ 6 ಗಂಟೆಗೆ ವೇದಿಕೆಯ ಕಾರ್ಯಕ್ರಮದಲ್ಲಿ ನಿಡಸೋಸಿ ಶ್ರೀಗಳ ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿವಿಯ ಸಹ ಪ್ರಾಧ್ಯಪಕ ಗಜಾನನ ನಾಯ್ಕ, ಅತಿಥಿಗಳಾಗಿ ಹುಕ್ಕೇರಿ ತಹಶಿಲ್ದಾರ ಬಲರಾಮ ಕಟ್ಟಿಮನಿ, ಸಿಪಿಐ ಶಿವಶಂಕರ ಅವಜಿ, ಮುಖ್ಯಾಧಿಕಾರಿ ಪ್ರಕಾಶ ಮಠದ, ಹುಕ್ಕೇರಿ ಬಿಇಓ ಪ್ರಭಾವತಿ ಪಾಟೀಲ, ಆರೋಗ್ಯ ಸಮುದಾಯ ಕೇಂದ್ರದ ಮುಖ್ಯಾಧಿಕಾರಿ ಡಾ. ದತ್ತಾತ್ರೇಯ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತ ಇರುವರು ಎಂದು ಪ್ರಮೋದ ಹೊಸಮನಿ ತಿಳಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ರಾಜ್ಯೋತ್ಸವ ಸಮಿತಿಯ ನ್ಯಾ. ವಿಕ್ರಮ ಕರನಿಂಗ, ಸಂತೋಷ ಮುಡಸಿ, ಮಹೇಶ ಹಟ್ಟಿಹೋಳಿ, ದಿಲೀಪ ಹೊಸಮನಿ ಮಾತನಾಡಿ, ಬೆಳಗಾವಿ ಹೊರತು ಪಡಿಸಿ ಜಿಲ್ಲೆಯಲ್ಲಿ ಅತಿ ಅದ್ದೂರಿಯಾಗಿ ಸಂಕೇಶ್ವರದಲ್ಲಿ ಕನ್ನಡದ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಕನ್ನಡ ಹಬ್ಬಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಸಮಕ್ಕನವರ, ರಾಹುಲ್ ವಾರಕರಿ, ಅಜಿತ ಮುದಗಲ್, ಅಶ್ವಿನ್ ಕೇಸ್ತಿ ಇವರು ಉಪಸ್ಥಿತರಿದ್ದರು.