ಮೊಬೈಲನಲ್ಲಿ ಅತ್ತಿಗೆ ಜೊತೆ ಸಲಿಗೆಯಿಂದ ಮಾತನಾಡಿದ ಗೆಳೆಯನಿಗೆ ಚಾಕು ಇರಿತ : ಚಿಕಿತ್ಸೆ ಫಲಿಸದೆ ಗಾಯಳು ಸಾವು

ಮೊಬೈಲನಲ್ಲಿ ಅತ್ತಿಗೆ ಜೊತೆ ಸಲಿಗೆಯಿಂದ ಮಾತನಾಡಿದ ಗೆಳೆಯನಿಗೆ ಚಾಕು ಇರಿತ : ಚಿಕಿತ್ಸೆ ಫಲಿಸದೆ ಗಾಯಳು ಸಾವು

ಬೆಳಗಾವಿ : ತನ್ನ ಅತ್ತಿಗೆಯೊಂದಿಗೆ ಸಲುಗೆಯಿಂದ ದೂರವಾಣಿ ಮೂಲಕ ಮಾತನಾಡುತ್ತಿದ್ದ ಗೆಳೆಯನನ್ನು ಚಾಕು ಇರಿದು ಇನ್ನೋರ್ವ ಗೆಳೆಯ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹುಲ್ಯಾನೂರದಲ್ಲಿ ವರದಿಯಾಗಿದೆ.

   ತಾಲೂಕಿನ ಹುಲ್ಯಾನೂರ ಗ್ರಾಮದ  ಅಭಿಷೇಕ ಅಪ್ಪಯ್ಯ ಬುಡ್ರಿ(19) ಹತ್ಯೆ ಯಾದ ಯುವಕನಾಗಿದ್ದಾನೆ. ಅದೇ ಗ್ರಾಮದ ಹುಲೆಪ್ಪ  ಬಸ್ಸಪ್ಪ ಕರಿಕಟ್ಟಿ (23) ಈತ ಆ. 9ರಂದು ತಡರಾತ್ರಿ ಅಭಿಷೇಕ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿತನಾಗಿದ್ದಾನೆ. ಈ ಚಾಕು ಇರಿತದಿಂದ ಗಾಯಗೊಂಡಿದ್ದ ಅಭಿಷೇಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

     ಕೆಲ ದಿನಗಳ ಹಿಂದೆ ಅಭಿಷೇಕ ಹುಲೇಪ್ಪನ ಅತ್ತಿಗೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ ಅನೈತಿಕ ಸಂಬಂಧ ಬೆಳೆಸಿದ್ದ ಎಂಬ ಅಸಮಾಧಾನದಿಂದ ಹುಲೆಪ್ಪ ಅಭಿಷೇಕನಿಗೆ ಎಚ್ಚರಿಕೆಯನ್ನೂ ನೀಡಿದ್ದನು ಎನ್ನಲಾಗಿದೆ. ಆದರೆ ಮತ್ತೆ ಅದನ್ನೇ ಮುಂದುವರಿಸಿದ್ದರಿಂದ ಆ. 9ರಂದು ರಾತ್ರಿ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸುದ್ದಿ ಓದಿ