ಸಾರಿಗೆ ಸಂಸ್ಥೆಯ ಬಸ್ಸಿನ‌ ನಿರ್ವಾಹಕಿಯ ಮೇಲೆ ಮಹಿಳಾ ಪ್ರಯಾಣಕಿಯ ಹಲ್ಲೆ : ಚಿಕ್ಕಮಕ್ಕಳಂತೆ ಕಣ್ಣಿರು ಹಾಕುತ್ತ ರಸ್ತೆಯಲ್ಲಿ ನಿಂತ ನಿರ್ವಾಹಕಿ

ಸಾರಿಗೆ ಸಂಸ್ಥೆಯ ಬಸ್ಸಿನ‌ ನಿರ್ವಾಹಕಿಯ ಮೇಲೆ ಮಹಿಳಾ ಪ್ರಯಾಣಕಿಯ ಹಲ್ಲೆ : ಚಿಕ್ಕಮಕ್ಕಳಂತೆ ಕಣ್ಣಿರು ಹಾಕುತ್ತ ರಸ್ತೆಯಲ್ಲಿ ನಿಂತ ನಿರ್ವಾಹಕಿ

ಬೆಳಗಾವಿ : ರಾಜ್ಯ ಸಾರಿಗೆ ಸಂಸ್ಥೆಯ ನಗರ ಸಂಚಾರಿ ಬಸ್ಸಿನ ಮಹಿಳೆ ನಿರ್ವಾಹಕಿಯೋರ್ವರ ಮೇಲೆ ಮಹಿಳಾ ಪ್ರಯಾಣಕಿಯೋರ್ವ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದು, ಇದರಿಂದ ನೊಂದ ಮಹಿಳಾ ನಿರ್ವಾಹಕಿ ಬಸ್ಸಿನಿಂದ ಕೆಳಗೆ ಇಳಿದು ಅಸಹಾಯಕತೆಯಿಂದ ಚಿಕ್ಕಮಕ್ಕಳ ರೀತಿ ಕಣ್ಣಿರು ಹಾಕುತ್ತ ರಸ್ತೆ ಪಕ್ಕದಲ್ಲಿ ನಿಂತ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ. 


     ಬೆಳಗಾವಿ ಸಿಟಿ ಬಸ್ ನಿಲ್ದಾಣದಿಂದ ಹೊನಗಾ ಗ್ರಾಮಕ್ಕೆ ಹೊರಟ್ಟಿದ್ದ ಬಸ್ಸಿನಲ್ಲಿ ಈ ಘಟನೆ ಸಂಜೆ 6.30ರ ಸುಮಾರಿಗೆ ಬೆಳಗಾವಿ ನಗರದ (ಕೊಲ್ಲಾಪುರ) ಕೃಷ್ಣ ದೇವರಾಯ ಸರ್ಕಲ್ ಬಳಿ ನಡೆದಿದೆ. 

   ಬಸ್ಸಿನಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಈ ಸಂದರ್ಭದಲ್ಲಿ ಮಹಿಳಾ ನಿರ್ವಾಹಕಿ ಟಿಕೆಟ್ ನೀಡುವ ಸಂದರ್ಭದಲ್ಲಿ ಮಹಿಳಾ ಪ್ರಯಾಣಕಿ ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ನಿರ್ವಾಹಕಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ನೊಂದ ಬಸ್ಸಿನ ನಿರ್ವಾಹಕಿ ಚಿಕ್ಕ ಮಕ್ಕಳ ರೀತಿ ಬಸ್ಸಿನಿಂದ ಇಳಿದು ಜನರ ನಡುವೆ ಇಂತು ಕಣ್ಣಿರು ಹಾಕಿದ್ದಾರೆ.  

   ಈ ವಿಷಯ ಅರಿತ ಸಂಚಾರಿ ಪೊಲೀಸರೊಬ್ಬರು ಬಸ್ಸಿನ ಬಳಿ‌ ಬಂದು ಮಹಿಳಾ ನಿರ್ವಾಹಕಿಗೆ ಸಮಾಧಾನ ಹೇಳಿದ್ದಾರೆ.

ಸುದ್ದಿ ಓದಿ