ಎಸ್ ಎಂ ಶೇಖರವರಿಗೆ ಬೀಳ್ಕೊಡುಗೆ ಸನ್ಮಾನ
ಮಹಾಲಿಂಗಪುರ : ಸಮೀಪದ ಕೆಸರಗೊಪ್ಪದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ ವಿ ಚೌಧರಿ ಹಾಗೂ ಸಿಬ್ಬಂದಿ ವರ್ಗದವರು ಕೆಸರಗೊಪ್ಪದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಸ್ ಎಂ ಶೇಖ ಹಾಗೂ ಅವರ ಧರ್ಮ ಪತ್ನಿ ಜಾಹಿದಾ ಬೇಗಂ ಅವರನ್ನು ಸನ್ಮಾನಿಸಿ ಕಾಣಿಕೆಯನ್ನು ನೀಡಿ ಬಿಳ್ಕೊಟ್ಟರು. ಪ್ರೌಢ ಶಾಲೆಯ ಸಿಬ್ಬಂದಿಯವರಾದ ಡಿ ಹೆಚ್ ಮುಜಾವರ್, ಎಸ್ ಬಿ ಮುಕಾರ್ತಿಹಾಳ್, ಎಸ್ ಬಿ ಕುರಲೆ, ಬಿ ವಿ ಯರಗಟ್ಟಿಕರ, ಬಿ ಆರ್ ಕಲಂದರ, ವಿದ್ಯಾವತಿ ಶಿರೋಳ, ಜ್ಯೋತಿ ಹಿಂಚಿಗೇರಿ, ಎಸ್ ಪಿ ಇಜೇರಿ, ಎಂ ಡಿ ಕುರಂದರವಾಡ , ವಿಠ್ಠಲ ಹಡಪದ, ಎಸ್ ಹೆಚ್ ಗರಡಿಮನಿ, ಸಂಪದಾ ಮೇಡಂ, ಜೋರಾಪುರ ಮೇಡಂ, ನಾರಾಯಣ ವಾಳಿ, ವಿಶ್ವನಾಥ್ ಘಟಕಾಂಬಳೆ, ಲತಾ ದೋಟಿಹಾಳ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.