ಮಹಲಿಂಗಪುರ

ಮನೆ ಮಾಲೀಕರ ಅಗಲಿಕೆಗೆ ಮೂಕ ವೇದನೆ ಪಡುತ್ತಿರುವ ಶ್ವಾನ

ಮನೆ ಮಾಲೀಕರ ಅಗಲಿಕೆಗೆ ಮೂಕ ವೇದನೆ ಪಡುತ್ತಿರುವ ಶ್ವಾನ

ಮಹಾಲಿಂಗಪುರ 19: ಅನ್ನದ ಅಗಳ ಸಿಕ್ಕೈತಿ ಹಲ್ಲಾಗ ಹೆಂಗ್ ಮರಿಲಿ ಅವರ ಉಪಕಾರ ಎಂಬ ಹಳ್ಳಿಗಾಡು ಊರುಗಳಲ್ಲಿ ಹಿರಿಯ ಜೀವಗಳು ಉಪಕಾರ ಸ್ಮರಣೆ ಮಾತನಾಡುವುದನ್ನು ನಾವು ಕೇಳಿದ್ದೇವೆ. ಅದರಂತೆಯೇ ಬೆಳಗಲಿ ಪಟ್ಟಣದ ತೋಟದ ಮನೆ ಮಾಲೀಕರನ್ನು ಕಳೆದುಕೊಂಡ ಶ್ವಾನ ಮಾಲೀಕರಿಗೆ ತೋರುತ್ತಿರುವ ನಿಷ್ಠೆ ಹಾಗೂ ವೇದನೆ ಹೇಳತೀರದು. 

ಮಹಾಲಿಂಗಪುರ ಪಟ್ಟಣದ ಸಮೀಪವಿರುವ ಪೆಂಡಾರಿ ತೋಟದಲ್ಲಿ ಮಂಗಳವಾರ ನಡೆದ ಹತ್ಯಾಕಾಂಡದಲ್ಲಿ ಮೃತರಾದ ಮನೆ ಮಾಲೀಕರ ಉಪಕಾರ ಸ್ಮರಣೆ ಮಾಡುತ್ತಾ ನಿರಾಹಾರಿಯಾಗಿ ಯಾರೂ ಇಲ್ಲದ ಮನೆ ಮುಂದೆ ರೋದಿಸುತ್ತ ಮಲಗಿ ಅವರ ಬರುವಿಕೆಗಾಗಿ ಕಾಯುತ್ತಿರುವ ದೃಶ್ಯ ಮನ ಕಲಕುವಂತಿದೆ ಮತ್ತು ಶ್ವಾನದ ನಿಷ್ಠೆಯನ್ನೂ ಕಂಡು ನೋಡುಗರ ಮನಸ್ಸು ಮಮ್ಮಲ ಮರುಗುತ್ತಿದೆ. 

ಹೊತ್ತೋತ್ತಿಗೆ ಊಟ, ಉಪಚಾರ ಮಾಡಿಸಿದ ಮತ್ತು ಮಳೆ, ಗಾಳಿ, ಛಳಿಗೆ ಬೆಚ್ಚನೆಯ ಮನೆಯಲ್ಲಿ ಆಸರೆಕೊಟ್ಟ ಮನೆ ಸದಸ್ಯರು ಬೆಂಕಿಯಲ್ಲಿ ಸುಡುವುದನ್ನು ಕಣ್ಣಾರೆ ಕಂಡು ಅದು ಕೂಡ ಆಘಾತಕ್ಕೆ ಒಳಗಾದಂತೆ ಕಾಣುತ್ತಿದೆ. ಪೆಂಡಾರಿ ಕುಟುಂಬ ಹಲವಾರು ವರ್ಷಗಳಿಂದ ಶ್ವಾನವನ್ನು ತಮ್ಮ ಪರಿವಾರದ ಸದಸ್ಯನಂತೆಯೇ ಕಂಡಿದ್ದಾರೆ. ಈ ಕಾರಣದಿಂದಲೆ ಮನೆ ಒಡೆಯರ ಉಪಕಾರಕ್ಕೆ ಪ್ರತಿಯಾಗಿ ಅವರನ್ನು ಕಳೆದುಕೊಂಡು ಮೂಕ ವೇದನೆಪಡುತ್ತಿದೆ. 


ಸುದ್ದಿ ಓದಿ