ಮಹಲಿಂಗಪುರ

ವ್ಯಕ್ತಿಯೋರ್ವನ ಮೂತ್ರ ನಾಳದಿಂದ ದೊಡ್ಡ ಗಾತ್ರದ ಹರಳನ್ನು ಆಪರೇಷನ್ ಮೂಲಕ ಹೊರತೆಗೆದ ವೈದ್ಯರು

ವ್ಯಕ್ತಿಯೋರ್ವನ ಮೂತ್ರ ನಾಳದಿಂದ ದೊಡ್ಡ ಗಾತ್ರದ ಹರಳನ್ನು ಆಪರೇಷನ್ ಮೂಲಕ ಹೊರತೆಗೆದ ವೈದ್ಯರು

* ಹನಮಂತ ನಾವಿ 

ಮಹಾಲಿಂಗಪುರ 28: ವ್ಯಕ್ತಿಯೋರ್ವನ ಮೂತ್ರ ನಾಳದಿಂದ ದೊಡ್ಡ ಗಾತ್ರದ ಹರಳನ್ನು ಆಪರೇಷನ್ ಮೂಲಕ ಹೊರ ತೆಗೆಯಲಾಗಿದೆ ಎಂದು ಮಹಾಲಿಂಗಪುರದ ಡಾ.ಬೆಳಗಲಿ ಕಿಡ್ನಿ ಮತ್ತು ಸ್ಪೆಷಾಲಿಟಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. 

ಈ ಮುಂಚೆ ಇದೇ ಆಸ್ಪತ್ರೆಯಲ್ಲಿ 8 ರಿಂದ 10 ಸೆಮಿ ದೊಡ್ಡ ಗಾತ್ರದ ಹರಳುಗಳನ್ನು ಉನ್ನತ ತಂತ್ರಜ್ಞಾನ ಲೇಸರ್ ಯಂತ್ರ ಬಳಸಿ ಸಣ್ಣ ಸಣ್ಣ (ಪೌಡರ್) ಚೂರುಗಳನ್ನಾಗಿ ಮಾಡಿ ಹೊರ ತೆಗೆದಿರುವ ಉದಾಹರಣೆಗಳಿವೆ.  

ಆದರೆ ಇತ್ತೀಚೆಗೆ ಆಸ್ಪತ್ರೆ ವೈದ್ಯ ಡಾ. ಹರೀಶ್ ಎ. ಬೆಳಗಲಿ ಮತ್ತು ಶಿವಾಣಿ ಹ.ಬೆಳಗಲಿ ಅವರು ಅಥಣಿಯ 35 ವರ್ಷದ ವ್ಯಕ್ತಿಯೋರ್ವನಿಗೆ 1-30 ಗಂಟೆ ಕಾಲ ತೆರೆದ (ಓಪನ್) ಶಸ್ತ್ರಚಿಕಿತ್ಸೆ ನಡೆಸಿ ಆತನಿಗೆ ಯಾವುದೇ ತರಹದ ಯಾತನಾ ರಹಿತವಾಗಿ 5.2 ಸೆಮಿ ಗಾತ್ರದ ಅಖಂಡ ಹರಳನ್ನು ಹೊರ ತೆಗೆದಿದ್ದಾರೆ. ಚಿಕಿತ್ಸಾ ನಂತರ ಕೇವಲ 24 ಗಂಟೆಗಳಲ್ಲಿಯೇ ಆತನನ್ನು ಮನೆಗೂ ಕಳುಹಿಸಿ ಕೊಡಲಾಗಿದ್ದು ಆತ ಆರೋಗ್ಯದಿಂದ ಇದ್ದಾನೆ. 

ಉತ್ತರ ಕರ್ನಾಟಕದಲ್ಲಿಯೇ ಕೆಎಇ ಆಸ್ಪತ್ರೆ ಹೊರತು ಪಡಿಸಿ ಕಿಡ್ನಿ ಗೆ ಸಮ್ಮಂಧಿಸಿದ ಉನ್ನತ ಯಂತ್ರಗಳನ್ನು ಈ ಆಸ್ಪತ್ರೆ ಹೊಂದಿದೆ. ಆರಂಭದ ಈ ಎರಡು ವರ್ಷಗಳಲ್ಲಿ ಬಿಪಿಎಲ್ ಕಾರ್ಡ್‌ ಗಳ ಮೂಲಕ 1ಸಾವಿರಕ್ಕೂ ಹೆಚ್ಚಿನ ಆಪರೇಷನ್ ಗಳನ್ನು ಮಾಡಲಾಗಿದೆ.ಇನ್ನು ವಿವಿಧ ಸ್ಟೋನ್, ಪ್ರೋಸ್ಟೇಟ್, ಕಿಡ್ನಿ ಕ್ಯಾನ್ಸರ್, ರಂದ್ರ ಕೊರೆಯದೆ (ಆರ್ ಆಯ್ ಆರ್ ಎಸ್) ಶಸ್ತ್ರಚಿಕಿತ್ಸೆಗಳನ್ನು ಕೂಡ ನೆರವೇರಿಸಲಾಗಿದೆ. 

ಕಿಡ್ನಿ ತೊಂದರೆ ನಿವಾರಣೆಯಿಂದ ಬಳಲುವವರು ದುಬಾರಿ ವೆಚ್ಚ ವ್ಯಯಿಸಿ ಆಪರೇಷನ್ ಅಥವಾ ಚಿಕಿತ್ಸೆ ಮಾಡಿಸಿಕ್ಕೊಳ್ಳಲು ದೂರದ ಪಟ್ಟಣಗಳಿಗೆ ಹೋಗಬೇಕಾಗಿತ್ತು. ಈಗ ಎರಡು ವರ್ಷಗಳಿಂದ ಮಹಾಲಿಂಗಪುರದ ನಮ್ಮ ಆಸ್ಪತ್ರೆಯಲ್ಲಿ ಕಿಡ್ನಿ ಚಿಕಿತ್ಸೆಗೆ ಸಮ್ಮಂಧಿಸಿದಂತಹ ದುಬಾರಿ ವೆಚ್ಚದ ಯಂತ್ರೋಪಕರಣಗಳನ್ನು ಅಳವಡಿಸಿಕ್ಕೊಂಡು ಉತ್ತಮ ಸೇವೆ ನೀಡುತ್ತಿದ್ದೇವೆ. ಇದರಿಂದ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಸುಮಾರು 40 ಹಳ್ಳಿ/ಪಟ್ಟಣಗಳ ಜನತೆಯ ಸಮಯ ಮತ್ತು ಆರ್ಥಿಕ ಉಳಿತಾಯಕ್ಕೆ ಕಾರಣವಾಗಿ ಅವರು ನೆಮ್ಮದಿಯ ಬದುಕು ಸಾಗಿಸುವಂತಾಗಿದೆ. 

* ಡಾ.ಹರೀಶ ಎ.ಬೆಳಗಲಿ.

ಡಾ.ಬೆಳಗಲಿ ಕಿಡ್ನಿ ಮತ್ತು ಸ್ಪೆಷಾಲಿಟಿ ಆಸ್ಪತ್ರೆ ಮಹಾಲಿಂಗಪುರ. 


ಸುದ್ದಿ ಓದಿ