ಮುದ್ದೆಬಿಹಾಲ್

18 ದಿನಗಳಿಂದ ಏಕಾಂಗಿ ಹೋರಾಟ: ಎಸಿ ಕಚೇರಿ,ಆರ್.ಟಿ.ಓ ಕಛೇರಿ ಸ್ಥಾಪನೆಗೆ ಧರಣಿ

18 ದಿನಗಳಿಂದ ಏಕಾಂಗಿ ಹೋರಾಟ:  ಎಸಿ ಕಚೇರಿ,ಆರ್.ಟಿ.ಓ ಕಛೇರಿ ಸ್ಥಾಪನೆಗೆ ಧರಣಿ
ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಛೇರಿ ಎದುರಿಗೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕಳೆದ 18 ದಿನಗಳಿಂದ ಹೋರಾಟಗಾ

ಮುದ್ದೇಬಿಹಾಳ : ಆರೋಗ್ಯ, ಪುರಸಭೆ, ಸಾರಿಗೆ, ಪಿಡಬ್ಲ್ಯೂಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ತಾಪಂ, ಕೆಬಿಜೆಎನ್ಎಲ್ ಹಾಗೂ ಎಸ್ಸಿಪಿ ಟಿಎಸ್ಪಿ ಯೋಜನೆಯಡಿ ಅನುದಾನದ ದುರುಪಯೋಗ ಸೇರಿದಂತೆ ವಿವಿಧ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ಮಾಡುವುದು ಹಾಗೂ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕಳೆದ 18 ದಿನಗಳಿಂದ ಮುದ್ದೇಬಿಹಾಳ ನವ ನಿರ್ಮಾಣ ವೇದಿಕೆಯಿಂದ  ಸಂಚಾಲಕ ಕೃಷ್ಣಾ ರಾಠೋಡ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಹಾಕಿರುವ ಟೆಂಟ್ನಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಜೆಡಿಎಸ್ ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ, ಸಾಮಾಜಿಕ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ಅವರು, ಕಳೆದ 18 ದಿನಗಳಿಂದ ಹೋರಾಟ ನಡೆಸುತ್ತಿದ್ದರು ತಹಸೀಲ್ದಾರ್ರಾಗಲೀ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಾಗಲೀ ಬಂದು ಭೇಟಿ ಕೊಡದೇ ಇರುವುದು ದುರಂತದ ಸಂಗತಿಯಾಗಿದೆ. ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಹೋರಾಟಗಾರರಿಗೆ ಬೆಲೆ ಕೊಡಬೇಕಿರುವುದು ತಾಲೂಕಾಡಳಿತ ಮಾಡಬೇಕಿತ್ತು. ಆದರೆ ಈ ತಾಲೂಕಿನಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.

ಹೈಟೆಕ್ ಆಸ್ಪತ್ರೆ ಸ್ಥಾಪನೆ,ಆರ್.ಟಿ.ಓ ಕಚೇರಿ ಸ್ಥಾಪನೆ,ಎಸಿ ಕಛೇರಿ ಸ್ಥಾಪನೆ ,ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳು ಲಭ್ಯವಾಗಬೇಕು ಎಂಬುದು ಸೇರಿದಂತೆ ಹತ್ತಾರು ಜನಪರ ಬೇಡಿಕೆಗಳಿದ್ದು ಅವುಗಳಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ಒತ್ತಾಯಿಸಿದರು.್ಲ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಭಗವಂತ ಕಬಾಡೆ,ಸಂಚಾಲಕ ಕೃಷ್ಣಾ ರಾಠೋಡ,ಮುತ್ತು ಮಾದಿನಾಳ,ಈರಣ್ಣ ತಾರನಾಳ,ರಷೀದ ಮುಲ್ಲಾ,ರಹಿಮಾನ ಬನ್ನೇಟ್ಟಿ ಮೊದಲಾದವರು ಇದ್ದರು.


ಸುದ್ದಿ ಓದಿ