ಮಹಲಿಂಗಪುರ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ ತವರಿನ ಶಾಲೆಯಲ್ಲಿ ಅದ್ದೂರಿ ಸ್ವಾಗತ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ ತವರಿನ ಶಾಲೆಯಲ್ಲಿ ಅದ್ದೂರಿ ಸ್ವಾಗತ

ಮಹಾಲಿಂಗಪುರ 07: ರಾಷ್ಟ್ರಮಟ್ಟದ ಶಿಕ್ಷಕಿ ಪ್ರಶಸ್ತಿ ಸ್ವೀಕರಿಸಿ ಊರಿಗೆ ಮರಳಿದ ಶಿಕ್ಷಕಿ ಸಪನಾ ಅನಿಗೋಳ ತಮ್ಮ ಕೆಎಲ್‌ಇ ಪ್ರೌಢಶಾಲೆಗೆ ತೆರಳಿ ಪ್ರಶಸ್ತಿಪತ್ರ ಹಾಗೂ ಪದಕವನ್ನು ತಮ್ಮ ವಿದ್ಯಾಗುರು ಹಾಗೂ ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ ಅವರಿಗೆ ನೀಡುವ ಮೂಲಕ ಪ್ರಶಸ್ತಿಯ ಕೀರ್ತಿಯನ್ನು ತನ್ನ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಮರ​‍್ಿಸಿದರು. ಇದಕ್ಕೂ ಮುನ್ನ ಶಾಲೆಯ ಗೇಟ್ ಬಳಿ ಉಪಪ್ರಾಂಶುಪಾಲರು ಹೂಗುಚ್ಚ ನೀಡಿ ಸ್ವಾಗತಿಸಿದರು. ಅಂದಾಜು 700 ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ, ಪುಷ್ಪವೃಷ್ಠಿ ಮಾಡಿ ಬರಮಾಡಿಕೊಂಡರು. ನಂತರ ಕೆಎಲ್‌ಇ ಅಂಗ ಸಂಸ್ಥೆಗಳಾದ ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೋಮಾ ವಿಭಾಗಗಳಿಂದ ಹಾಗೂ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಪ್ರವೀಣ ಪಾಶ್ಚಾಪೂರ, ಪ್ರಾಚಾರ್ಯರಾದ ಎಸ್‌.ಐ.ಕುಂದಗೋಳ, ಡಾ.ಕೆ.ಎಂ.ಅವರಾದಿ, ಎಲ್‌.ಬಿ.ತುಪ್ಪದ, ಬಿ.ಎನ್‌.ಅರಕೇರಿ, ಅರ್ಜುನ ಚವ್ಹಾಣ, ಸಚಿನ ಅಂಗಡಿ ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು. 


ಸುದ್ದಿ ಓದಿ