ಮುದ್ದೆಬಿಹಾಲ್

5 ತಿಂಗಳ ಪುಟ್ಟ ಹೆಣ್ಣು ಮಗು ಇಂಟರ್ ನ್ಯಾಷನಲ್ ಆಪ್ ವರ್ಡ ರೇಕಾರ್ಡ ದಾಖಲೆ

5 ತಿಂಗಳ ಪುಟ್ಟ ಹೆಣ್ಣು ಮಗು  ಇಂಟರ್ ನ್ಯಾಷನಲ್ ಆಪ್ ವರ್ಡ ರೇಕಾರ್ಡ  ದಾಖಲೆ

ಮುದ್ದೇಬಿಹಾಳ:  ಪಟ್ಟಣದ ಹುಡ್ಕೋ ಬಡಾವಣೆಯ ಕೃಷಿ ಅಧಿಕಾರಿ ಗೋವಿಂದಗೌಡ ಮೆದಿಕಿನಾಳ ಅವರ ಮೊಮ್ಮಗಳು 5 ತಿಂಗಳ ಪುಟ್ಟ ಹೆಣ್ಣು ಮಗು ಶ್ರೀತಿಶಾ ಶರಣಗೌಡ ಮೆದಿಕಿನಾಳ,  ಸುಪರ್  ಟ್ಯಾಲೇಂಟ್ ಕಿಡ್ ನಲ್ಲಿಇಂಟರ್ ನ್ಯಾಷನಲ್ ಆಪ್ ವರ್ಡ ರೇಕಾರ್ಡ  ದಾಖಲೆ ಮಾಡಿದ್ದಾಳೆ. 

ಈ ವೇಳೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಪ್ರತಿಷ್ಠಿತ ಕೃಷಿ ಕುಟುಂಭದ  ಬಸನಗೌಡ ಮೇದಿಕಿನಾಳ ಅವರು ಮರಿ ಮೊಮ್ಮಗಳಾದ ಶ್ರೀತಿಶಾ ಮಗುವಿನ ತಾಯಿ ಜಯಶ್ರೀ ಶರಣಗೌಡ ಮೆದಿಕಿನಾಳ ಅವರು ಮಾತನಾಡಿ. ಕಳೇದ ಮೂರು ತಿಂಗಳ ಮಗುವಿರುವಾಗಲೇ ಶ್ರೀತಿಶಾ ಅವಳು, ಎಲ್ಲ ಪ್ರಾಣಿಗಳ, ಹಣ್ಣುಗಳ ತಳಿ, ಬಣ್ಣ, ಎಲೆಗಳ, ಹೂವಿನ ಬಣ್ಣ, ಪಕ್ಷಿಗಳ ಬಣ್ಣ, ತರಕಾರಿಗಳು, ಅಕ್ಷರಗಳು, ವಿವಿಧ ಬಗೆಯ ಬಣ್ಣಗಳು, ಆಕಾರಗಳು, ಅಂಕಿ ಸಂಖ್ಯೆಗಳು ಮನುಷ್ಯನ ಚಲನವನಗಳ ಕ್ರೀಯೇಗಳು, ವೃತ್ತಿಗಳು ಸೇರಿದಂತೆ 350ಕ್ಕಿಂತಲೂ ಹೆಚ್ಚು ಪ್ಲ್ಯಾಶ್ ಕಾರ್ಡಗಳಿಂದ ಗುರ್ತು ಹಿಡಿಯುವ ಮೂಲಕ ,  ಸುಪರ್  ಟ್ಯಾಲೇಂಟ್ ಕಿಡ್ ನಲ್ಲಿಇಂಟರ್ ನ್ಯಾಷನಲ್ ಆಪ್ ವರ್ಡ ರೇಕಾರ್ಡ ಸಾಧನೆ ಮಾಡಿ ತೋರಿದ್ದಾಳೆ, ಈ ಮೊದಲು 9 ತಿಂಗಳ ಮಗು ಈ ದಾಖಲೆ ಮಾಡಿದ್ದಳು ಇದೀಗ ನಮ್ಮ ಮಗಳು ಇಷ್ಟು ಕಿರಿಯ ವಯಸ್ಸಿನಲ್ಲಿ ಇಡಿ ವಿಶ್ವವೇ ಮೆಚ್ಚುವಂತಹ ಸಾಧನೆ ಮಾಡಿದು ಸಂತಸ ತಂದಿದೆ ಎನ್ನುತ್ತಾರೆ. 

ಈ ವೇಳೆ ಬಸನಗೌಡ ಮೆದಿಕಿನಾಳ, ಕೃಷಿ ಅಧಿಕಾರಿ ಗೋವಿಂದಗೌಡ ಮೆದಿಕಿನಾಳ,  ವಿಜಯಲಕ್ಷ್ಮೀ ಮೆದಿಕಿನಾಳ, ಜಯಶ್ರೀ ಶರಣಗೌಡ ಮೆದಿಕಿನಾಳ, ಕಸ್ತೂರಿಬಾಯಿ ತಾತರಡ್ಡಿ, ನರಸಮ್ಮ, ಸಚೀನ ರೆಡ್ಡಿ ಸೇರಿದಂತೆ ಇದ್ದರು. 


ಸುದ್ದಿ ಓದಿ